ಕರ್ನಾಟಕ

karnataka

ETV Bharat / entertainment

ಅಪ್ಪು ಕುರಿತ ಕುತೂಹಲಕಾರಿ ವಿಚಾರ ಬಿಚ್ಚಿಟ್ಟ ಬೆಸ್ಟ್‌ ಫ್ರೆಂಡ್ ಕಡ್ಡಿಪುಡಿ ಚಂದ್ರು! - ತಮಿಳು ನಟ ಸೂರ್ಯ

ತಾನೊಬ್ಬ ಸ್ಟಾರ್ ನಟ ಎಂಬ ಅಹಂ ಇಲ್ಲದೆ ಸರಳತೆ ಹಾಗು ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಪವರ್ ಸ್ಟಾರ್​ಗೆ ಅಭಿಮಾನಿಗಳಂತೆ ದೊಡ್ಡ ಮಟ್ಟದ ಗೆಳೆಯರ ಬಳಗವೂ ಇದೆ. ಅಂತಹ ಗೆಳೆಯರ ಬಳಗದಲ್ಲಿ ನಟ ಹಾಗು ನಿರ್ಮಾಪಕ ಕಡ್ಡಿಪುಡಿ ಚಂದ್ರು ಒಬ್ಬರು.

ಫ್ಯಾಮಿಲಿ ಜೊತೆ ಪುನೀತ್ ರಾಜ್​ಕುಮಾರ್
ಫ್ಯಾಮಿಲಿ ಜೊತೆ ಪುನೀತ್ ರಾಜ್​ಕುಮಾರ್

By

Published : Oct 28, 2022, 9:40 PM IST

Updated : Oct 28, 2022, 10:14 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ಅಜಾತ ಶತ್ರು ನಟ ಅಂದ್ರೆ ಡಾ. ಪುನೀತ್ ರಾಜ್​ಕುಮಾರ್. ಡಾ.ರಾಜ್ ಕುಮಾರ್ ಆದರ್ಶಗಳನ್ನು ಪಾಲಿಸುತ್ತಾ ತಂದೆಗಿಂತ ಹೆಚ್ಚು ಅಭಿಮಾನಗಳಿಸಿರುವ ನಟ ಯುವರತ್ನ.

ನಟ ಪುನೀತ್ ರಾಜ್​ಕುಮಾರ್ ಹಾಗೂ ಕಡ್ಡಿಪುಡಿ ಚಂದ್ರು

ತಾನೊಬ್ಬ ಸ್ಟಾರ್ ನಟ ಎಂಬ ಅಹಂ ಇಲ್ಲದೆ ಸರಳತೆ ಹಾಗೂ ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಪವರ್ ಸ್ಟಾರ್​ಗೆ ಅಭಿಮಾನಿಗಳಂತೆ ದೊಡ್ಡ ಮಟ್ಟದ ಗೆಳೆಯರ ಬಳಗವೂ ಇದೆ. ಅಂತಹ ಗೆಳೆಯರ ಬಳಗದಲ್ಲಿ ನಟ ಹಾಗೂ ನಿರ್ಮಾಪಕ ಕಡ್ಡಿಪುಡಿ ಚಂದ್ರು ಕೂಡ ಒಬ್ಬರು. ಹೀಗಾಗಿ ಕಡ್ಡಿಪುಡಿ ಚಂದ್ರು ಅಪ್ಪು ಅವರ ಆತ್ಮೀಯ ಗೆಳಯನಾಗಿ ಅಪ್ಪು ಅವರ ಬಗ್ಗೆ ಕೆಲ ಅಚ್ಚರಿಯ ವಿಷಯಗಳನ್ನು ಈಟಿವಿ ಭಾರತ್​ ಜೊತೆ ಹಂಚಿಕೊಂಡಿದ್ದಾರೆ.

ನಟ ಹಾಗು ನಿರ್ಮಾಪಕ ಕಡ್ಡಿಪುಡಿ ಚಂದ್ರು

ಪುನೀತ್ ರಾಜ್​ಕುಮಾರ್​ ಜೊತೆ ಸಿನಿಮಾ ಇಂಡಸ್ಟ್ರಿಯಲ್ಲಿ ಆತ್ಮೀಯ ಸ್ನೇಹ ಹೊಂದಿರುವ ಗೆಳೆಯರು ಕಡ್ಡಿಪುಡಿ ಚಂದ್ರು ಕೂಡ ಒಬ್ಬರು. ಚಂದ್ರು ಹೇಳುವ ಹಾಗೆ, ಅಪ್ಪು ಜೊತೆಗೆ ಗೆಳೆತನ ಶುರುವಾಗಿದ್ದು ಸಿನಿಮಾಗೆ ಬಂದ ಮೇಲೆ. ಆದರೆ ಚಿಕ್ಕವಯಸ್ಸಿನಲ್ಲೇ ಅಪ್ಪು ಬಾಸ್ ಕೈಯಲ್ಲಿ ನಾನು ಏಟು ತಿಂದಿದ್ದೇನೆ ಅಂತಾ ಬಾಲ್ಯದ ಒಂದು ಘಟನೆಯನ್ನು ಹಂಚಿಕೊಂಡರು.

ಒಳ್ಳೆಯ ಮನಸ್ಸು ಅವರದ್ದು:ನಾನು ಅಪ್ಪು ಬಾಸ್ ಜೊತೆ ಏಳು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವರ ಸಿನಿಮಾ ಶೂಟಿಂಗ್ ಇದ್ದಾಗ ಹೋಗ್ತಿದ್ದೆ. ಯಾವ ಮಟ್ಟಿಗೆ ಅಂದ್ರೆ ಎರಡು ದಿನಕ್ಕೆ ಒಂದು ಸಲ ನನಗೆ ಫೋನ್ ಮಾಡಿ ಎಲ್ಲಿದ್ದಿಯಾ ಚಂದ್ರು ಕಮ್ ಮ್ಯಾನ್ ಅಂತಾ ಹೇಳ್ತಾ ಇದ್ದರು. ಒಂದು ದಿನ ರಾತ್ರಿ 2 ಗಂಟೆಗೆ ಡ್ರಿಂಕ್ಸ್​ ಮಾಡಿ ಫೋನ್ ಮಾಡಿದೆ. ಆಗ ಫೋನ್ ರಿಸೀವ್ ಮಾಡಿ ಕೋಪ ಮಾಡಿಕೊಳ್ಳದೆ ಲೋ ಹುಷಾರಾಗಿ ಹೋಗು ಅಂತಾ ಹೇಳುವ ಒಳ್ಳೆಯ ಮನಸ್ಸು ಅವರದು ಎಂದರು.

ನಟ ಹಾಗು ನಿರ್ಮಾಪಕ ಕಡ್ಡಿಪುಡಿ ಚಂದ್ರು

ಯಾರ ಮೇಲೂ ಕೋಪ ತೋರಿಸುತ್ತಿರಲಿಲ್ಲ: ಒಂದು ದಿನಕ್ಕೆ ಕೋಪ ಮಾಡಿಕೊಂಡವರಲ್ಲ. ಆದರೆ ನಾನು ಅವರ ಕೋಪನ ನೋಡಿದ್ದೀನಿ. ಶೂಟಿಂಗ್ ಸ್ಪಾಟ್​ನಲ್ಲಿ ಹೆಚ್ಚು ಗಲಾಟೆ ಸೌಂಡ್ ಇದ್ರೆ, ಒಂದು ಸಾರಿ ಲುಕ್ ಕೊಟ್ಟರೆ ಸಾಕು ಇಡೀ ಶೂಟಿಂಗ್ ಸ್ಪಾಟ್ ಸೈಲೆಂಟ್ ಆಗ್ತಾ ಇತ್ತು. ಅವರ ಲುಕ್ ಹಾಗು ಕಣ್ಣಲ್ಲಿ ಭಯ ಬರ್ತಾ ಇದ್ದು. ಯಾರ ಮೇಲೂ ತಮ್ಮ ಕೋಪ ತೋರಿಸ್ತಾ ಇರಲಿಲ್ಲ.

ಇದರ ಜೊತೆಗೆ ಸಿನಿಮಾದಲ್ಲಿ ಯಾವುದಾದ್ರೂ ಅವಕಾಶ ಇದ್ರೆ ನಮ್ಮ ಚಂದ್ರು ಮಾಡಿದ್ರೆ ಚೆನ್ನಾಗಿ ಇರುತ್ತೆ ಅಂತಾ ಹೇಳ್ತಾ ಇದ್ದರು. ಜೊತೆಗೆ ಸಿನಿಮಾ ಇಂಡಸ್ಟ್ರಿಯವರು ಏನು ಚಂದ್ರುನಾ ಅಷ್ಟೊಂದು ಸಲುಗೆ ಅಂತಾ ಕೇಳ್ತಾ ಇದ್ದರು. ಆಗ ಅಪ್ಪು ಬಾಸ್ ಚಾನ್ಸ್ ಕೊಡಿಸ್ತಾ ಇದ್ದರು. ಅವರ ಸಿನಿಮಾಗಳಲ್ಲಿ ಚಂದ್ರು ಮಾಡಿದ್ರೆ ಚೆನ್ನಾಗಿ ಇರುತ್ತೆ. ಏನು ಚಂದ್ರುವನ್ನು ಹಚ್ಚಿಕೊಂಡಿದ್ದೀರಾ ಅನ್ನೋರು. ಮನೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಫ್ಯಾಮಿಲಿ ಜೊತೆ ಬಾ ಅಂತಾ ಹೇಳ್ತಾ ಇದ್ದರು.

ಪುನೀತ್​ ರಾಜ್​ಕುಮಾರ್ ಅವರು ಬಿರಿಯಾನಿ ತಿನ್ನುತ್ತಿರುವುದು

ಜಯನಗರ ಸೈಡ್ ಪುನೀತ್ ರಾಜ್ ಕುಮಾರ್ ಬಂದ್ರೆ, ಮಿಸ್​ ಮಾಡದೆ ನನಗೆ ಫೋನ್ ಮಾಡ್ತಾ ಇದ್ರು. ಆಗ ನಿಮ್ಮ ಏರಿಯಾದಲ್ಲಿ ಕಾಫಿ ಹಾಗು ತಿಂಡಿ ಎಲ್ಲಿ ಚೆನ್ನಾಗಿದೆ ಅಂತಾ ಕೇಳ್ತಾ ಇದ್ದರು. ಒಂದು ದಿನ ನಾನು ಕಟಿಂಗ್ ಶಾಪ್‌ನಲ್ಲಿ ಶೇವಿಂಗ್ ಮಾಡಿಸ್ತಾ ಇದ್ದೆ. ಅಪ್ಪು ಸಾರ್ ಎಲ್ಲಿ ಇದಿಯಾ ಚಂದ್ರು ಅಂತಾ ಫೋನ್ ಮಾಡಿದರು. ಬರ್ತಾ ಇದ್ದೀನಿ ಅಂದಿದ್ದಕ್ಕೆ ಅರ್ಧಕ್ಕೆ ಶೇವಿಂಗ್ ಮಾಡಿಸಿಕೊಂಡು ಬಂದಿದ್ದಕ್ಕೆ ಬೈದಿದ್ದರು.

ದೋಸೆ ಅಂದ್ರೆ ಅಪ್ಪುಗೆ ಇಷ್ಟ: ಅಪ್ಪುಗೆ ಬಿರಿಯಾನಿ ತಿನ್ನಬೇಕು ಅಂದ್ರೆ ಬನಶಂಕರಿ ಹತ್ತಿರ ಶಿವಾಜಿ ಬಿರಿಯಾನಿ ಅಂದ್ರೆ ತುಂಬಾ ಇಷ್ಟ. ನಾಟಿ ಕೋಳಿ ಸಾಂಬಾರು. ಸಂಪಂಗಿರಾಮನಗರದ ಸಿದ್ದಪ್ಪ ದೋಸೆ ಅಂದ್ರೆ ಇಷ್ಟ. ಪ್ಯಾಲೇಟ್ ಕಾರ್ನಾರ್ ನಾನ್ ವೆಜ್ ಊಟ ಅಂದ್ರೆ ಅಪ್ಪು ಬಾಸ್ ಅಕ್ಕನಿಗೆ ತುಂಬಾ ಇಷ್ಟ ಅಂತಾ ಚಂದ್ರು ಹೇಳಿದರು.

ಅಪ್ಪು ಬಾಸ್​ಗೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಇಡೀ ಇಂಡಿಯಾಗೆ ಗೊತ್ತಾಗಬೇಕು ಅನ್ನೋದು ಅವರ ಆಸೆ. ಆಸೆಯನ್ನು ಯಶ್ ಪೂರೈಸಿದರು ಅಂತಾ ಯಾವಾಗ್ಲೂ ನಮ್ ಯಶ್ ಅಂತಾ ಅಪ್ಪು ಬಾಸ್ ಹೊಗಳೋರು ಅಂತಾ ಚಂದ್ರು ಹೇಳಿದರು.

ನಟ ಹಾಗು ನಿರ್ಮಾಪಕ ಕಡ್ಡಿಪುಡಿ ಚಂದ್ರು

ಅವ್ರಿಗೆ ಸುಳ್ಳು ಆಗ್ತಾ ಇರಲಿಲ್ಲ: ಅಪ್ಪು ಸಾರ್ ಅಂದಾಕ್ಷಣ ಪ್ರೀತಿ, ವಿಶ್ವಾಸ, ಆ ನಗುಮುಖ ನನಗೆ ಇಷ್ಟ ಆಗುತ್ತೆ. ಅವ್ರಿಗೆ ಸುಳ್ಳು ಆಗ್ತಾ ಇರಲಿಲ್ಲ. ದೊಡ್ಡವರು ಬಂದಾಗ ಎದ್ದುನಿಂತುಕೊಂಡು ಗೌರವ ಕೊಡ್ತಾ ಇದ್ದರು. ಅದಕ್ಕೆ ಸಾಹಿತಿ ದೊಡ್ಡೆರಂಗೇಗೌಡರು ಹುಟ್ಟುಹಬ್ಬಕ್ಕೆ ಮನೆಗೆ ಬಂದ ಘಟನೆಯನ್ನ ನೆನಸಿಕೊಂಡಿದ್ದು ಹೀಗೆ.

ಪವರ್ ಸ್ಟಾರ್ ನೆನೆದು ಭಾವುಕರಾದ ಚಂದ್ರು:ಚಂದ್ರು ಹೇಳುವ ಪ್ರಕಾರ, ಅಪ್ಪು ಸಾರ್ ನಮ್ಮ ಚಿತ್ರರಂಗದ ಗೆಳೆಯರು ಅಲ್ಲದೇ ಪರಭಾಷೆಯ ನಟರ ಜೊತೆ ಒಳ್ಳೆಯ ಒಡನಾಟ ಇತ್ತು. ಅದರಲ್ಲಿ ತಮಿಳು ನಟ ಸೂರ್ಯ ಆತ್ಮೀಯ ಗೆಳೆಯರಾಗಿದ್ದರು. ಪುನೀತ್ ರಾಜ್ ಕುಮಾರ್ ಜೊತೆಗೆ ಹಲವಾರು ವರ್ಷಗಳಿಂದ ಸ್ನೇಹ ಹೊಂದಿರುವ ಕಡ್ಡಿಪುಡಿ ಚಂದ್ರು ಹೇಳುವ ಹಾಗೆ ಅಪ್ಪು ಬಾಸ್ ಅನ್ನ ನೋಡಿ ಚಿತ್ರರಂಗದಲ್ಲಿ ನೋಡಿ ಕಲಿಯೋದು ತುಂಬಾನೇ ಇದೆ ಅಂತಾ ಪವರ್ ಸ್ಟಾರ್ ನೆನೆದು ಭಾವುಕರಾದರು.

ಇದನ್ನೂ ಓದಿ:ಮರಣೋತ್ತರ ಕರ್ನಾಟಕ ರತ್ನ ಪಡೆಯಲಿರುವ ಮೊದಲ ವ್ಯಕ್ತಿ ಪುನೀತ್: ರಾಜ್ಯೋತ್ಸವದಂದು ಪ್ರದಾನ

Last Updated : Oct 28, 2022, 10:14 PM IST

ABOUT THE AUTHOR

...view details