ಕರ್ನಾಟಕ

karnataka

ETV Bharat / entertainment

ಕಬ್ಜ ಟ್ರೇಲರ್ ಅನಾವರಣಗೊಳಿಸಲಿರುವ ಬಿಗ್​ ಬಿ ಅಮಿತಾಭ್ ಬಚ್ಚನ್ - sudeep

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಕಬ್ಜ ಚಿತ್ರದ ಟ್ರೇಲರ್ ಅನ್ನು ಹಿರಿಯ ನಟ ಅಮಿತಾಭ್ ಬಚ್ಚನ್ ಅನಾವರಣಗೊಳಿಸಲಿದ್ದಾರೆ.

kabzaa trailer release
ಕಬ್ಜ ಟ್ರೇಲರ್ ​

By

Published : Mar 4, 2023, 5:54 PM IST

ಕನ್ನಡ ಚಿತ್ರರಂಗವೀಗ ಯಶಸ್ಸಿನ ಉತ್ತುಂಗದಲ್ಲಿದೆ. ಕೆಜಿಎಫ್​, ಕಾಂತಾರಗಳಂತಹ ಚಿತ್ರಗಳ ಬಳಿಕ ಸ್ಯಾಂಡಲ್​ವುಡ್​ ಲೆವೆಲ್​​ ಶಿಖರಕ್ಕೇರಿದೆ. ಇಡೀ ಭಾರತೀಯ ಚಿತ್ರರಂಗದ ಗಮನ ನಮ್ಮ ಕನ್ನಡ ಸಿನಿ ಲೋಕದ ಮೇಲೆ ಕೇಂದ್ರೀಕೃತವಾಗಿದೆ. ಈ ಸಾಲಿನ ಬಹುನಿರೀಕ್ಷಿತ ಕಬ್ಜ ಚಿತ್ರದ ಟ್ರೇಲರ್ ರಿಲೀಸ್​ಗೆ ಕ್ಷಣಗಣನೆ ಆರಂಭವಾಗಿದೆ.​ ಬಾಲಿವುಡ್​ ಖ್ಯಾತ, ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಚಿತ್ರದ ಟ್ರೇಲರ್ ಅನಾವರಣಗೊಳಿಸಲಿದ್ದಾರೆ

80ರ ದಶಕದ ಅಂಡರ್ ವರ್ಲ್ಡ್‌ ಸ್ಟೋರಿ, ಬಹುವೆಚ್ಚದಲ್ಲಿ ಅದ್ಧೂರಿ ಮೇಕಿಂಗ್, ಜೊತೆಗೆ ಬಿಗ್​ ಸ್ಟಾರ್​ ಕಾಸ್ಟ್ ಹೀಗೆ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡ ಕಬ್ಜ ಚಿತ್ರ ಭಾರತೀಯ ಸಿನಿಮಾ ರಂಗದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಕನ್ನಡದ ಬಹುಬೇಡಿಕೆ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್​, ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಅವರಿಗೆ ಆ್ಯಕ್ಷನ್​ ಕಟ್​ ಹೇಳುವ ಮೂಲಕ ನಿರ್ದೇಶಕ ಆರ್ ಚಂದ್ರು ಹಮನ ಸೆಳೆದಿದ್ದಾರೆ. ಬಹುದಿನಗಳಿಂದ ಬೇಜಾನ್​ ಟಾಕ್​ ಆಗಿದ್ದ ಕಬ್ಜ ಚಿತ್ರದಲ್ಲಿ ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಇರುವ ಬಗ್ಗೆ ನಿರ್ದೇಶಕ ಆರ್ ಚಂದ್ರು ನಿನ್ನೆವರೆಗೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಟ್ರೇಲರ್​ ಅನಾವರಣಕ್ಕೆ ಒಂದು ದಿನ ಬಾಕಿ ಇರುವ ಹೊತ್ತಲ್ಲಿ ಶಿವ ರಾಜ್​ಕುಮಾರ್​ ಒಳಗೊಂಡ ಪೋಸ್ಟರ್​ ರಿಲಿಸ್​ ಮಾಡುವ ಮೂಲಕ ನಿರ್ದೇಶಕ ಆರ್ ಚಂದ್ರು ಅಭಿಮಾನಿಗಳಿಗೆ ಸರ್​ಪ್ರೈಸ್ ಕೊಟ್ಟು, ಅವರ ಕುತೂಹಲ ದುಪ್ಪಟ್ಟುಗೊಳಿಸಿದ್ದಾರೆ.

ನಟ ಶಿವ ರಾಜ್​ಕುಮಾರ್ ಗನ್​​ ಹಿಡಿದಿರುವ ಪೋಸ್ಟರ್ ಅನ್ನು ಚಿತ್ರತಂಡ ಶುಕ್ರವಾರ ರಿವೀಲ್ ಮಾಡಿದೆ. ದೊಡ್ಮನೆ ಅಭಿಮಾನಿಗಳು ಸೇರಿದಂತೆ ಈ ಸ್ಟಾರ್​ ನಟರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೂವರು ಬಹುಬೇಡಿಕೆ ನಟರನ್ನು ಒಟ್ಟಿಗೆ ಪರದೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದ್ದು, ಆ ಕ್ಷಣಕ್ಕಾಗಿ ಕಾದು ಕುಳಿತಿದ್ದಾರೆ.

ಇದನ್ನೂ ಓದಿ:ಪವರ್ ಸ್ಟಾರ್ ಯಶಸ್ವಿ ಹಾದಿಯಲ್ಲಿ ಯುವ ರಾಜ್​ಕುಮಾರ್​: ಅಪ್ಪು ಕಾರ್​ ನಂಬರ್​ ಯುವ ಸಿನಿಮಾದಲ್ಲಿ ಬಳಕೆ

ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಭೋಜ್‌ಪುರಿ, ಒಡಿಯಾ ಸೇರಿದಂತೆ ಏಳು ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಬಹುನಿರೀಕ್ಷಿತ ಕಬ್ಜ ಸಿನಿಮಾದಲ್ಲಿ ಉಪೇಂದ್ರ, ಸುದೀಪ್, ಶಿವರಾಜ್​ಕುಮಾರ್​ ಜೊತೆಗೆ ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ದೊಡ್ಡ ತಾರಾಗಣ ಇದೆ.

ದಿವಂಗತ ನಟ ಪುನೀತ್ ರಾಜ್​​​ಕುಮಾರ್ (ಮಾರ್ಚ್ 17) ಹುಟ್ಟು ಹಬ್ಬದಂದು ವಿಶ್ವಾದ್ಯಂತ ಕಬ್ಜ ಸಿನಿಮಾ ಬಿಡುಗಡೆ ಆಗಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ದೇಶಕ ಆರ್.ಚಂದ್ರು ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹುಕೋಟಿ ವೆಚ್ಚದ ಅದ್ಧೂರಿ ಮೇಕಿಂಗ್ ಇರುವ ಕಬ್ಜ ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಇದೆ.

ಇದನ್ನೂ ಓದಿ:'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು

ABOUT THE AUTHOR

...view details