ಕರ್ನಾಟಕ

karnataka

ETV Bharat / entertainment

ನಾಳೆ 4,000 ಥಿಯೇಟರ್‌ಗಳಲ್ಲಿ 'ಕಬ್ಜ' ಬಿಡುಗಡೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ್ಪಿ ಟೀಂ - etv bharat kannada

ನಾಳೆ 'ಕಬ್ಜ' ಚಿತ್ರ ತೆರೆಕಾಣಲಿದೆ. ಇಂದು ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಿತು.

kabzaa
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ 'ಕಬ್ಜ' ಚಿತ್ರತಂಡ

By

Published : Mar 16, 2023, 9:59 AM IST

Updated : Mar 16, 2023, 1:24 PM IST

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ 'ಕಬ್ಜ' ಚಿತ್ರತಂಡ

ಬಹುನಿರೀಕ್ಷಿತ ಕಬ್ಜ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ದಿ. ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬವಿದ್ದು, ಸಿನಿಮಾ ತೆರೆ ಕಾಣಲಿದೆ. 4,000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಯಶಸ್ಸಿಗಾಗಿ ರಿಯಲ್​ ಸ್ಟಾರ್​ ಉಪೇಂದ್ರ, ನಿರ್ದೇಶಕ ಆರ್.ಚಂದ್ರು, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸೀಕಲ್ ರಾಮಚಂದ್ರಗೌಡ ಸೇರಿದಂತೆ ಚಿತ್ರತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.

ದೇಶದ ಹಲವೆಡೆ ಪ್ರಚಾರ ಕಾರ್ಯ ಮುಗಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ಇನ್ನೇನು ಬೆಳ್ಳಿ ಪರದೆಯಲ್ಲಿ ಅಬ್ಬರಿಸಲು ಕೇವಲ ಒಂದು ದಿನವಷ್ಟೇ ಬಾಕಿ ಇದ್ದು, ಚಿತ್ರತಂಡದವರು ತಿರುಪತಿಗೆ ತೆರಳಿ ತಿಮ್ಮಪ್ಪನ ಆಶೀರ್ವಾದ ಪಡೆದರು. ತಿರುಪತಿಗೆ ತೆರಳಿರುವ ಫೋಟೋವನ್ನು ನಿರ್ದೇಶಕ ಆರ್.ಚಂದ್ರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. "ನಿಮ್ಮೆಲ್ಲರ ಆಶೀರ್ವಾದವಿರಲಿ. ಕಬ್ಜ ಬಿಡುಗಡೆಗೆ ಮುನ್ನ ತಿರುಪತಿ ದರ್ಶನ" ಎಂದು ಕ್ಯಾಪ್ಶನ್​ ಕೊಟ್ಟಿದ್ದಾರೆ.

ಬಾಲಿವುಡ್​ ದಿಗ್ಗಜರ ಮೆಚ್ಚುಗೆ:ಕೆಲವು ದಿನಗಳ ಹಿಂದೆ

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ 'ಕಬ್ಜ' ಚಿತ್ರತಂಡ
ಬಾಲಿವುಡ್​ ಹಿರಿಯ ನಟ​ ಅಮಿತಾಭ್​ ಬಚ್ಚನ್ ಚಿತ್ರದ ಟ್ರೇಲರ್​ ಅನಾವರಣಗೊಳಿಸಿದ್ದರು.ಈ ವೇಳೆ ಪ್ರಶಂಸೆಯ ಮಾತುಗಳನ್ನಾಡಿದ್ದರು. ನಟರಾದ ಅಜಯ್ ದೇವಗನ್, ನಿರ್ದೇಶಕ ರಾಕೇಶ್ ರೋಷನ್, ನಟ ಮನೋಜ್ ಬಾಜಪೇಯಿ, ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್, ನಿರ್ದೇಶಕ ಮಧುರ್ ಭಂಡಾರ್ಕರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಮೆಚ್ಚಿಕೊಂಡಿದ್ದರು.

ಇದನ್ನೂ ಓದಿ:'ಕಬ್ಜ'ದಲ್ಲಿ ಉಪ್ಪಿ ಬಲಗೈ ಬಂಟನಾಗಿ ಅನೂಪ್​ ರೇವಣ್ಣ ರೀ ಎಂಟ್ರಿ

ಕಬ್ಜ ಭೂಗತ ಲೋಕದ ಸುತ್ತಮುತ್ತ ನಡೆಯುವ ಕಥೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಚಿತ್ರದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ನಂತರದ ಕಥೆಯ ಜೊತೆ ವ್ಯಥೆಯೂ ಇದೆ. ತಾಯಿಯ ಮಮತೆ, ಸಹೋದರನ ಬಾಂಧವ್ಯ, ಪ್ರೇಮದ ಘಮಲು ಇದೆ.

ಚಿತ್ರತಂಡದಲ್ಲಿ ಯಾರಿದ್ದಾರೆ?:ರಿಯಲ್​ ಸ್ಟಾರ್​ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್ ​​ಕುಮಾರ್ ಅಲ್ಲದೇ ಟಾಲಿವುಡ್ ಸುಂದರಿ ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್ ಅಡಿ ಆರ್ ಚಂದ್ರು ನಿರ್ಮಿಸಿ, ನಿರ್ದೇಶನ ಮಾಡಿರೋ ಕಬ್ಜ ಚಿತ್ರವನ್ನು ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್​ಟೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು ನಿರ್ಮಾಣ ಮಾಡಿವೆ.

ಇದನ್ನೂ ಓದಿ:ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್​ಕುಮಾರ್

Last Updated : Mar 16, 2023, 1:24 PM IST

ABOUT THE AUTHOR

...view details