ಭಾರತೀಯ ಸಿನಿಮಾರಂಗದಲ್ಲಿ ಮತ್ತೊಮ್ಮೆ ಕನ್ನಡದ ಸಿನಿಮಾ ಬಗ್ಗೆ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಲೆವೆಲ್‍ನಲ್ಲಿ ಮಾತಾಡಿಕೊಳ್ಳುವಂತಹ ಸಿಚುವೇಷನ್ ಕ್ರಿಯೇಟ್ ಆಗಿದೆ. ಕೇವಲ ಟೀಸರ್ ಮೂಲಕವೇ ಕಿಚ್ಚೆಬ್ಬಿಸಿದ್ದ ರಿಯಲ್‍ಸ್ಟಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರ ದೊಡ್ಡ ಮಟ್ಟದಲ್ಲಿ ಮೂಡಿಬಂದಿದೆ. ಭಾರತೀಯ ಚಿತ್ರರಂಗ ಎದುರು ನೋಡುತ್ತಿದ್ದ ಹೈವೋಲ್ಟೇಜ್ ಕಬ್ಜ ಚಿತ್ರದ ಟ್ರೈಲರ್ ಜ್ವಾಲಮುಖಿಯನ್ನೇ ಸೃಷ್ಟಿಸಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಜೊತೆಗೆ ಅದ್ಧೂರಿ ಮೇಕಿಂಗ್ ಹಾಡಿಹೊಗಳಿದ್ದಾರೆ.
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದ 'ಕಬ್ಜ'ದ ಟ್ರೇಲರ್ ರಿಲೀಸ್ ಆಗಿ ಪ್ರೇಕ್ಷಕರ ನಿರೀಕ್ಷೆ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇಂದು ಹಿಂದಿ ಚಿತ್ರರಂಗದ ಹಿರಿಯ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಚಿತ್ರದ ಟ್ರೇಲರ್ ಅನಾವರಣಗೊಳಿಸಿದರು.
ಕನ್ನಡದ ಬಹುಬೇಡಿಕೆ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಅವರಿಗೆ ನಿರ್ದೇಶನ ಮಾಡುವ ಮೂಲಕ ಆರ್ ಚಂದ್ರು ಚಿತ್ರರಂಗದ ಗಮನ ಸೆಳೆದಿದ್ದಾರೆ. ಸ್ಟಾರ್ ಹೀರೋಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಖ್ಯಾತಿ ಇವರದ್ದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಈ ಚಿತ್ರ ಇದೇ ತಿಂಗಳ 17ರಂದು ತೆರೆ ಕಾಣಲಿದೆ.
ಕೆಜಿಎಫ್2, ಕಾಂತಾರ ಸಿನಿಮಾಗಳು ಕನ್ನಡದ ಗತ್ತು ತಾಕತ್ತೇನು ಅಂತ ಇಡೀ ಗ್ಲೋಬಲ್ ಆಡಿಯೆನ್ಸ್‍ಗೆ ಮುಟ್ಟಿಸಿವೆ. ಈಗ ಕಬ್ಜ ನಾವು ಜಗತ್ತನ್ನೇ ಕಬ್ಜ ಮಾಡ್ಕೊತೀವಿ ಅನ್ನೋ ವಿಶ್ವಾಸದಲ್ಲಿದೆ. ಅದಕ್ಕೆ ಮೆಟ್ಟಿಲೆಂಬಂತೆ ಟ್ರೈಲರ್ ಧೂಳ್ ಧಮಾಕ ಎಬ್ಬಿಸ್ತಿದೆ.
ಬಹುದಿನಗಳಿಂದ ಸಿನಿ ಜಗತ್ತಿನಲ್ಲಿ ಸುದ್ದಿ ಮಾಡುತ್ತಿರುವ ಕಬ್ಜ ಚಿತ್ರದಲ್ಲಿ ನಟ ಶಿವ ರಾಜ್ಕುಮಾರ್ ಅವರು ಇರುವ ಬಗ್ಗೆ ಆರ್ ಚಂದ್ರು ನಿನ್ನೆವರೆಗೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಟ್ರೇಲರ್ ಅನಾವರಣಕ್ಕೆ ಒಂದು ದಿನ ಇರುವ ಹೊತ್ತಲ್ಲಿ, ಶಿವ ರಾಜ್ಕುಮಾರ್ ಒಳಗೊಂಡ ಪೋಸ್ಟರ್ ರಿಲೀಸ್ ಮಾಡಿದರು. ಮೂವರು ಬಿಗ್ ಸ್ಟಾರ್ಗಳು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಪಾರ ಅಭಿಮಾನಿಗಳನ್ನು ಒಳಗೊಂಡಿರುವ ಈ ಮೂವರ ನಟನೆ ಇಂದ ಚಿತ್ರದ ತೂಕ ಹೆಚ್ಚಾಗಿದೆ. ನಿರ್ದೇಶಕ ಆರ್ ಚಂದ್ರು ಶಿವಣ್ಣನ ಅಂಟ್ರಿ ಬಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟು, ಪ್ರೇಕ್ಷಕರ ಕುತೂಹಲ ದುಪ್ಪಟ್ಟುಗೊಳಿಸಿದ್ದಾರೆ.
ಇದನ್ನೂ ಓದಿ:ಕಬ್ಜ ಟ್ರೇಲರ್ ಅನಾವರಣಗೊಳಿಸಲಿರುವ ಬಿಗ್ ಬಿ ಅಮಿತಾಭ್ ಬಚ್ಚನ್
ದಿವಂಗತ ನಟ ಪುನೀತ್ ರಾಜ್ಕುಮಾರ್ (ಮಾರ್ಚ್ 17) ಹುಟ್ಟು ಹಬ್ಬದಂದು ಕಬ್ಜ ಸಿನಿಮಾ ಬಹಳ ಅದ್ಧೂರಿಯಾಗಿ ಎಲ್ಲೆಡೆ ತೆರೆ ಕಾಣಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ದೇಶಕ ಆರ್.ಚಂದ್ರು ಅವರೇ ಈ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್ ಅವರ ಸಾಹಸ ನಿರ್ದೇಶನ ಇದೆ.
ಇದನ್ನೂ ಓದಿ:'ಚೇತರಿಸಿಕೊಳ್ಳುತ್ತಿದ್ದೇನೆ, ಯಾವುದೇ ತೊಂದರೆ ಇಲ್ಲ': ಅಭಿಮಾನಿಗಳ ಆತಂಕ ದೂರ ಮಾಡಿದ ಸುಶ್ಮಿತಾ ಸೇನ್
ಇನ್ನು ಮಹಾ ಶಿವರಾತ್ರಿ ಸಂದರ್ಭ ಮಹಾಶಿವನನ್ನು (ನಟರಾಜ) ಪೂಜಿಸುವ "ನಮಾಮಿ ನಮಾಮಿ" ಹಾಡು ಬಿಡುಗಡೆ ಆಗಿತ್ತು. ಚಿತ್ರ ಹಾಡಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಗಾಯಕಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ದಕ್ಷಿಣ ಚಿತ್ರರಂಗದ ನಟಿ ಶ್ರೀಯಾ ಶರಣ್ ಈ ಹಾಡಿನಲ್ಲಿ ಸಂಪೂರ್ಣ ಸಂಪ್ರದಾಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅದ್ಧೂರಿ ಮೇಕಿಂಗ್ಗೆ ಈ ಹಾಡೇ ಸಾಕ್ಷಿ.