ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಈ ವರ್ಷದ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕೆಜಿಎಫ್ 2, ಕಾಂತಾರ ಬಳಿಕ ಇಡೀ ಭಾರತೀಯ ಸಿನಿಮಾ ರಂಗದ ಕಣ್ಣು ಸ್ಯಾಂಡಲ್ವುಡ್ ಮೇಲಿದ್ದು, ಟೀಸರ್ನಿಂದಲೇ ಸಖತ್ ಸೌಂಡ್ ಮಾಡಿದೆ ಕಬ್ಜ. ಈ ಚಿತ್ರದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ನಿರ್ದೇಶಕ ಆರ್ ಚಂದ್ರು ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
42ನೇ ವಸಂತಕ್ಕೆ ಕಾಲಿಟ್ಟಿರೋ ನಿರ್ದೇಶಕ ಆರ್ ಚಂದ್ರು ತಮ್ಮ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಸಹಕಾರ ನಗರದಲ್ಲಿರೋ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಕಬ್ಜ ಸಿನಿಮಾ ಜಪ ಮಾಡುತ್ತಿರುವ ನಿರ್ದೇಶಕ ಆರ್ ಚಂದ್ರು ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಮತ್ತೊಂದು ಮೈಲುಗಲ್ಲು:ಟೀಸರ್ ಹಾಗೂ ಹಾಡುಗಳಿಂದಲೇ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿರೋ ಕಬ್ಜ ಸಿನಿಮಾ ಅಂದಾಕ್ಷಣ ಎನನಪಿಗೆ ಬರೋದು ನಿರ್ದೇಶಕ ಆರ್ ಚಂದ್ರು ಅವರ ಕನಸಿನ ಸಿನಿಮಾ. ಏಕೆಂದರೆ ಇತರೆ ಭಾಷೆಯವರು ಕನ್ನಡ ಚಿತ್ರರಂಗದವರು ಏನು ಮಾಡುತ್ತಿದ್ದಾರೆ ಎಂದು ನೋಡುತ್ತಿರುವ ಈ ಸಮಯದಲ್ಲಿ ನಾನು ಗೆಲ್ಲಬೇಕಾಗಿರುವ ಸಿನಿಮಾ. ನಾನು ಮಾತ್ರವಲ್ಲದೇ ಇಡೀ ಕಬ್ಜ ಚಿತ್ರತಂಡ ಗೆಲ್ಲುವುದರ ಮೂಲಕ ಕನ್ನಡ ಚಿತ್ರರಂಗ ಮತ್ತೊಂದು ಮೈಲಿಗಲ್ಲು ಸಾಧಿಸಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೀಮ್ ವರ್ಕ್:ಕಬ್ಜ ಸಿನಿಮಾವನ್ನು ಸುಮ್ಮನೆ ಕಾಟಾಚಾರಕ್ಕೆ ಮಾಡಿಲ್ಲ. ಈ ಸಿನಿಮಾಗಾಗಿ ಸಾಕಷ್ಟು ವರ್ಕ್ ಮಾಡಲಾಗಿದೆ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬ ಆರ್ಟಿಸ್ಟ್ ಪಾತ್ರದಲ್ಲಿ ಒಂದು ಮಹತ್ವ ಇದೆ. ಇದು ಇಡೀ ಕಬ್ಜ ಟೀಮ್ ವರ್ಕ್ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದರು.