ಕರ್ನಾಟಕ

karnataka

ETV Bharat / entertainment

ಎಲ್ಲೆಡೆ 'ಕಬ್ಜ' ಟೈಟಲ್​​ ಸಾಂಗ್​​ನದ್ದೇ​ ಸೌಂಡ್​: ಮೇಕಿಂಗ್​ ವಿಡಿಯೋ ರಿವೀಲ್​​ - ಕಬ್ಜ ಸಾಂಗ್ ಮೇಕಿಂಗ್​ ವಿಡಿಯೋ

ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಟೈಟಲ್​ ಟ್ರ್ಯಾಕ್​​ ಇತ್ತೀಚೆಗೆ ಬಿಡುಗಡೆ ಆಗಿತ್ತು. ಇಂದು ಹಾಡಿನ ಮೇಕಿಂಗ್​ ವಿಡಿಯೋ ರಿವೀಲ್​​ ಆಗಿದೆ.

Kabza song making video
ಕಬ್ಜ ಸಾಂಗ್​ ಮೇಕಿಂಗ್​ ವಿಡಿಯೋ

By

Published : Feb 15, 2023, 4:19 PM IST

ಭಾರತೀಯ ಸಿನಿರಂಗ ಎದುರು ನೋಡುತ್ತಿರುವ ಸ್ಯಾಂಡಲ್​ವುಡ್​ನ ಹೈ ವೊಲ್ಟೇಜ್ ಚಿತ್ರ 'ಕಬ್ಜ'. ದಿನೇ ದಿನೆ ದಕ್ಷಿಣ ಭಾರತದಲ್ಲಿ ಹವಾ ಸೃಷ್ಟಿಸಿರೋ 'ಕಬ್ಜ' ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ. ಪುನೀತ್ ರಾಜ್‍ಕುಮಾರ್ ಜನ್ಮದಿನವಾದ ಮಾರ್ಚ್ 17ರಂದು ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಕಬ್ಜ ಸಿನಿಮಾದ ಟೈಟಲ್​ ಟ್ರ್ಯಾಕ್​​:ಈಗಾಗಲೇ ಟೀಸರ್​ನಿಂದಲೇ ದಾಖಲೆ ಬರೆದಿರೋ 'ಕಬ್ಜ' ಚಿತ್ರದ ಕಬ್ಜ ಕಬ್ಜ ಎಂಬ ಟೈಟಲ್ ಹಾಡನ್ನು ಚಿತ್ರತಂಡ ಕೆಲ ದಿನಗಳ ಹಿಂದೆ ಬಿಡುಗಡೆ‌ ಮಾಡಿತ್ತು. ರೆಟ್ರೋ ಅವತಾರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ದರ್ಶನ ಕೊಟ್ಟಿದ್ದು, ಈ ಬುದ್ಧಿವಂತ ನಟನ ನಯಾ ಅವತಾರಕ್ಕೆ ಬರೋಬ್ಬರಿ 4 ಮಿಲಿಯನ್​ಗೂ ಹೆಚ್ಚು ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಮಧ್ಯೆ ಕಬ್ಜ ಚಿತ್ರತಂಡ ಈ ಹಾಡಿನ‌ ಮೇಕಿಂಗ್ ತುಣುಕನ್ನು ರಿವೀಲ್ ಮಾಡಿದೆ.

ಕಬ್ಜ ಸಾಂಗ್​ ಮೇಕಿಂಗ್​ ವಿಡಿಯೋ

500ಕ್ಕೂ ಹೆಚ್ಚು ಡ್ಯಾನ್ಸರ್ಸ್:ಈ ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರೆಟ್ರೋ ಅವತಾರದಲ್ಲಿ ಮಾಸ್ ಹಾಡಿಗೆ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ. 500ಕ್ಕೂ ಹೆಚ್ಚು ಡ್ಯಾನ್ಸರ್​ಗಳ ಜೊತೆ ನಟ ಉಪೇಂದ್ರ ಮಸ್ತ್ ಸ್ಟೆಪ್ ಹಾಕಿದ್ದಾರೆ. ಸೌತ್ ಚಿತ್ರರಂಗದಲ್ಲಿ ಬಹು ಬೇಡಿಕೆಯಲ್ಲಿರೋ ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಎರಡು ದಿನಗಳ ಕಾಲ ಈ ಅದ್ಧೂರಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ಒಂದು ಹಾಡಿಗಾಗಿ 50 ರಿಂದ 80 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

ಕಬ್ಜ ಚಿತ್ರತಂಡ: 1960 - 80ರ ಕಾಲದಲ್ಲಿ ನಡೆಯುವ ಕಥೆಯಾದ್ದರಿಂದ ಈ ಚಿತ್ರದ ಬಹು ದೊಡ್ಡ ಸ್ಟಾರ್ ಕಾಸ್ಟ್ ಹೊಂದಿದೆ. ರಿಯಲ್ ಸ್ಟಾರ್ ಓರ್ವ ಗ್ಯಾಂಗ್​ಸ್ಟಾರ್ ಆಗಿದ್ದು, ಕಿಚ್ಚ ಸುದೀಪ್ ಖಡಕ್‌ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಪ್ಪಿ ಜೋಡಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಳ್ಳಲಿದ್ದಾರೆ‌. ಇನ್ನೂ ತೆಲುಗಿನ ಖ್ಯಾತ ನಟರಾದ ಪೊಸನಿ ಕೃಷ್ಣಮುರಳಿ ಮತ್ತು ಮುರಳಿ ಶರ್ಮಾ, ಐ ಮೂವಿ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಹಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಹೀಗೆ ದೊಡ್ಡ ಕಲಾವಿದರ ದಂಡೇ ಇದೆ.

ಇದನ್ನೂ ಓದಿ:ಅಬ್ಬಬ್ಬಾ..2 ಲಕ್ಷ ರೂ.ಗೆ ಮಾರಾಟವಾಯ್ತು 'ಕಡಲತೀರದ ಭಾರ್ಗವ' ಟಿಕೆಟ್

ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್​ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ನಿರ್ದೇಶನದ ಜೊತೆಗೆ ಬಹು ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ‌ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ.

ಏಳು ಭಾಷೆಗಳಲ್ಲಿ ಕಬ್ಜ ಬಿಡುಗಡೆ: ಕಬ್ಜ ಕೇವಲ ಕನ್ನಡದ ಸಿನಿಮಾ ಅಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ ಅಲ್ಲದೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಒಡಿಯಾ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಅದ್ಧೂರಿ ಬಜೆಟ್​ನಲ್ಲಿ ಆರ್ ಚಂದ್ರು ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರೆಟ್ರೋ ಲುಕ್​​ಗೆ ಕೋಟ್ಯಂತರ ಅಭಿಮಾನಿಗಳು ಬೋಲ್ಡ್ ಆಗಿದ್ದು, ಈ ಕಬ್ಜ ಸಿನಿಮಾದ ಮೇಲೆ ದಿನೇ ದಿನೆ ಕ್ರೇಜ್ ಹೆಚ್ಚಾಗುತ್ತಿರೋದು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಇದನ್ನೂ ಓದಿ:ರಿಯಲ್​ ಸ್ಟಾರ್​ ಉಪ್ಪಿ ನಟನೆಯ ಕಬ್ಜ ಟೈಟಲ್​ ಟ್ರ್ಯಾಕ್​ ರಿಲೀಸ್​

ABOUT THE AUTHOR

...view details