ಕನ್ನಡ ಚಿತ್ರರಂಗದಲ್ಲಿ ಪರಭಾಷೆಗೆ ಸ್ಪರ್ಧೆ ಕೊಡುವಷ್ಟು ಮಟ್ಟಿಗೆ ಅದ್ಧೂರಿ ಮೇಕಿಂಗ್ ಹಾಗೂ ಬಿಗ್ ಬಜೆಟ್ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತಾರಗೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಕನ್ನಡ ಚಿತ್ರರಂಗದಲ್ಲಿ ಆರಂಭವಾಗಿದೆ.
ಸದ್ಯ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಟೈಟಲ್ನಿಂದಲೇ ಹವಾ ಸೃಷ್ಟಿಸಿರೋ ಚಿತ್ರ ಎಂದರೆ ಅದು ಕಬ್ಜ. ನಿರ್ದೇಶಕ ಆರ್.ಚಂದ್ರು ನಿರ್ದೇಶನದ, ರಿಯಲ್ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟೀಸರ್ ಇಂದು ಅದ್ಧೂರಿಯಾಗಿ ಆನಂದ್ ಆಡಿಯೋ ಸಂಸ್ಥೆ ಮೂಲಕ ಬಿಡುಗಡೆ ಆಗಿದೆ. ಟೀಸರ್ನಲ್ಲಿ ರೌಡಿಸಂ ಅಬ್ಬರ ಜೋರಿದೆ. ರಿಯಲ್ ಸ್ಟಾರ್ ಉಪ್ಪಿ ಮಾಸ್ ಲುಕ್ನಲ್ಲಿ ಮಿಂಚಿದ್ದಾರೆ.
ಕಬ್ಜ ಟೀಸರ್ ರಿಲೀಸ್: ನಾಳೆ ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನ. ಈ ಹಿನ್ನೆಲೆ ಒಂದು ದಿನ ಮೊದಲೇ ಕಬ್ಜ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಲಾಗಿದೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಣಾ ದಗ್ಗುಬಾಟಿ ಅತಿಥಿಯಾಗಿ ಆಗಮಿಸಿದ್ದರು.
7 ಭಾಷೆಗಳಲ್ಲಿ ಸಿನಿಮಾ ರಿಲೀಸ್:ಪೋಸ್ಟರ್ ಹಾಗೂ ಸ್ಟಾರ್ ಕಾಸ್ಟ್ನಿಂದ ಈಗಾಗಲೇ ಸಿನಿಮಾಗೆ ಹೈಪ್ ಸಿಕ್ಕಿದೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆ ಕಿಚ್ಚ ಸುದೀಪ್ ಕೂಡ ಸೂಪರ್ ಕಾಪ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 80ರ ದಶಕದ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಕಬ್ಜ ಚಿತ್ರ ಅದ್ಧೂರಿ ಮೇಕಿಂಗ್ನೊಂದಿಗೆ ಗಮನ ಸೆಳೆಯುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಸೇರಿ 7 ಭಾಷೆಯಲ್ಲಿ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಿನಿಮಾ ದಸರಾಗೆ ತೆರೆಕಾಣಲು ಸಿದ್ಧತೆ ನಡೆಯುತ್ತಿದೆ.