ಕರ್ನಾಟಕ

karnataka

ETV Bharat / entertainment

6 ಭಾಷೆಯಲ್ಲಿ 'ಕಬ್ಜ 2': ಪಾನ್‌ ಇಂಡಿಯಾ ಸಿನಿಮಾಗೆ ನಿರ್ದೇಶಕ ಆರ್.ಚಂದ್ರು ಸಿದ್ಧತೆ

ಹೆಚ್.ಎಂ.ರೇವಣ್ಣ ಕೈಯಲ್ಲಿ ಕಬ್ಜ 2 ಸಿನಿಮಾದ ಫಸ್ಟ್ ಲುಕ್​ ಅನ್ನು ಆರ್.ಚಂದ್ರು ಅನಾವರಣ ಮಾಡಿಸಿದರು.

Director R Chandru
ನಿರ್ದೇಶಕ ಆರ್ ಚಂದ್ರು

By

Published : Apr 14, 2023, 9:39 PM IST

ಕಳೆದ ತಿಂಗಳು, ಮಾರ್ಚ್ 17ರಂದು ವಿಶ್ವದ್ಯಾಂತ ತೆರೆಕಂಡ ಕಬ್ಜ ಸಿನಿಮಾ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿ 50ನೇ ದಿನದತ್ತ ಮುನ್ನುಗುತ್ತಿದೆ. ಇದರ ಬೆನ್ನಲ್ಲೇ ನಿರ್ದೇಶಕ ಆರ್.ಚಂದ್ರು ಮತ್ತೊಂದು ಬಿಗ್ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಖಾಸಗಿ ಹೊಟೇಲ್​ನಲ್ಲಿ ಕಬ್ಜ ಸಿನಿಮಾದ 25 ದಿನದ ಗ್ರ್ಯಾಂಡ್ ಸಕ್ಸಸ್ ಸೆಲೆಬ್ರೇಷನ್ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ಮೂಲಕ 6 ಭಾಷೆಯ ಕಬ್ಜ 2 ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದರು.

ಬಿಡುಗಡೆಗೊಂಡ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಒಂದು ಮರದ ಚೇರ್ ಮೇಲೆ ಬಂದೂಕಿಟ್ಟಿರುವ ಪೋಸ್ಟರ್ ಇದಾಗಿದೆ. ಹೆಚ್.ಎಂ.ರೇವಣ್ಣ ಅವರು ಸಿನಿಮಾ ವಿತರಕ ಮೋಹನ್ ಹಾಗು ಆರ್.ಚಂದ್ರು, ಊರಿನ ರಾಜಕೀಯ ಮುಖಂಡ ರಾಮಚಂದ್ರಪ್ಪ ಸಮ್ಮುಖದಲ್ಲಿ ಕಬ್ಜ ಸಿನಿಮಾದಲ್ಲಿ ಕೆಲಸ ಮಾಡಿದ ನಟರಿಂದ ಹಿಡಿದು ತಂತ್ರಜ್ಞಾನರಿಗೆ ನೆನಪಿನ ಕಾಣಿಕೆ ನೀಡಿದರು.

ಪೋಸ್ಟರ್ ಅನಾವರಣ ಮಾಡಿ ಮಾತನಾಡಿದ ಹೆಚ್.ಎಂ.ರೇವಣ್ಣ, ನನಗೆ ಚಿತ್ರರಂಗದ ನಂಟು ಮೊದಲಿನಿಂದಲೂ ಇದೆ. ಕಬ್ಜ ಸಿನಿಮಾ ಮಾಡಿ ದೊಡ್ಡ ಗೆಲುವನ್ನು ಚಂದ್ರು ಪಡೆದಿದ್ದಾರೆ. ಕಬ್ಜ ಐತಿಹಾಸಿಕ ದಾಖಲೆ ಮಾಡಿದ ಸಿನಿಮಾ. ಕಬ್ಜ 2 ಸಿನಿಮಾ ಕೂಡ ದೊಡ್ಡ ಯಶಸ್ಸು ಪಡೆಯುತ್ತದೆ ಎಂದು ಭವಿಷ್ಯ ನುಡಿದರು.

ಕಬ್ಜ2 ಸಿನಿಮಾದ ಫಸ್ಟ್ ಲುಕ್​

ನಂತರ ಮಾತನಾಡಿದ ನಿರ್ದೇಶಕ ಚಂದ್ರು, ಮೂರು ವರ್ಷಗಳ ದೊಡ್ಡ ಜರ್ನಿ ಕಬ್ಜ. ಸಿನಿಮಾಗೆ ತುಂಬಾ ದೊಡ್ಡ ಬಂಡವಾಳ ಹಾಕಿದ್ದೀವಿ. ಶಿವಣ್ಣ ನನ್ನ ಮನೆ ಮಗನ ಹಾಗೆ ನೋಡಿ‌ಕೊಳ್ಳುತ್ತಾರೆ. ಕಬ್ಜ ಅನ್ನೋ ಹೈವೇ ಈಗಾಗಲೇ ಹಾಕಿದ್ದು, ಅದರಲ್ಲಿ ಪ್ರಯಾಣ ಮಾಡಬೇಕು. ಕಬ್ಜ ಚಿಕ್ಕ ಸಸಿಯಾಗಿದ್ದು ಈಗ ಹೆಮ್ಮರವಾಗಿ ಬೆಳೆದಿದೆ. ಕಬ್ಜ 2 ಸಿನಿಮಾದಲ್ಲಿ ಬೇರೆ ತರಹದ ಕಥೆ ಇರುತ್ತೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತೆ ಎಂದು ಹೇಳಿದರು.

ಸಕ್ಸಸ್ ಖುಷಿಯಲ್ಲಿ ನಟರಾದ ಅನೂಪ್ ರೇವಣ್ಣ, ಸುರೇಶ್ ಹೆಬ್ಳಿಕರ್, ಸುನೀಲ್ ಪುರಾಣಿಕ್, ನೀನಾಸಂ ಅಶ್ವಥ್, ಕೋಟೆ ಪ್ರಭಾಕರ್ ಇಡೀ ಕಬ್ಜ ಸಿನಿಮಾದ ತಂತ್ರಜ್ಙನರು ಉಪಸ್ಥಿತರಿದ್ದರು. ಕನ್ನಡ ಚಿತ್ರೋದ್ಯಮವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಅದ್ದೂರಿ ಮೇಕಿಂಗ್‌ನಿಂದಲೇ ಸಿನಿಮಾ ಆರ್ಭಟಿಸಿತ್ತು. ರಿಯಲ್ ಸ್ಟಾರ್ ಉಪೇಂದ್ರ ಹಾಗು ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ ಹಾಗು ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಕಬ್ಜ ಬರೋಬ್ಬರಿ 4000 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆಕ್ಷನ್ ರೌಡಿಸಂ ಕಥೆ ಆಧರಿಸಿ ಬಂದ ಕಬ್ಜ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ಕಲೆಕ್ಷನ್ ಮಾಡಿತ್ತು.

ಭಾರತದ ಸ್ವಾತಂತ್ರ್ಯಕ್ಕೂ ಮೊದಲು 1942ರಲ್ಲಿ ಶುರುವಾಗುವ ಕಬ್ಜ, ಒಬ್ಬ ಸಾಮಾನ್ಯ ವ್ಯಕ್ತಿಯು ಪರಿಸ್ಥಿತಿಗಳಿಂದಾಗಿ ಅತ್ಯಂತ ಅಪಾಯಕಾರಿ ಗ್ಯಾಂಗ್‌ಸ್ಟಾರ್‌ ಆಗಿ ಬೆಳೆಯುವ ಕಥೆ ಹೇಳುತ್ತದೆ. ಸ್ವಾತಂತ್ರ್ಯ ಹೋರಾಟಗಾರನ ಪುತ್ರ ಅರ್ಕೇಶ್ವರ ಅಂದ್ರೆ ಉಪೇಂದ್ರ ಹಿಂಸಾಚಾರದಲ್ಲಿ ತನ್ನ ಅಣ್ಣನನ್ನು ಕಳೆದುಕೊಂಡಿರುತ್ತಾನೆ. ಪ್ರಸ್ತುತ ಹಾಗೂ ಹಿಂದಿನ ಘಟನೆಗಳಿಂದಾಗಿ ಪ್ರಕ್ಷುಬ್ಧಗೊಂಡಿರುತ್ತಾನೆ. ಕುಟುಂಬದಲ್ಲಾದ ಆಘಾತವು ಅವನೊಳಗೆ ಒಂದು ಕಿಚ್ಚು ಹುಟ್ಟಿಸುತ್ತದೆ. ಸೇಡಿಗಾಗಿ ಹಾತೊರೆಯುತ್ತಾನೆ. ಇದರಿಂದಾಗಿ ಆತ ಅಂಡರ್‌ವರ್ಲ್ಡ್‌ ಡಾನ್ ಆಗಿ ಬೆಳೆಯುತ್ತಾನೆ ಎಂಬುದೇ ಸಿನಿಮಾ ಕಥೆ.

ಇದನ್ನೂ ಓದಿ:ಬಿಗ್​ ಅನೌನ್ಸ್​ಮೆಂಟ್! 'ಕಬ್ಜ 2' ಪೋಸ್ಟರ್ ರಿಲೀಸ್​, ಖಾಲಿ ಕುರ್ಚಿ ಮೇಲೆ ಕೂರೋರ‍್ಯಾರು?

ABOUT THE AUTHOR

...view details