ಕರ್ನಾಟಕ

karnataka

ETV Bharat / entertainment

'K ಕರಟಕ D ದಮನಕ' - ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಯೋಗರಾಜ್ ಭಟ್ - Yogaraj Bhatt

ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಪ್ರಭುದೇವ ಮತ್ತು ಶಿವಣ್ಣ ಅಭಿನಯದ ಚಿತ್ರಕ್ಕೆ K ಕರಟಕ D ದಮನಕ ಎಂದು ಶೀರ್ಷಿಕೆ ಇಡಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಬೇಕಿದೆ.

K Karataka D Damanaka title
'K ಕರಟಕ D ದಮನಕ' - ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಯೋಗರಾಜ್ ಭಟ್

By

Published : Sep 3, 2022, 9:24 AM IST

ತಮಿಳು ನಟ ಪ್ರಭುದೇವ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್​ ಜೊತೆ ಸಿನಿಮಾ ಮಾಡ್ತಿರೋದು ವಿಶೇಷ. ಈ ಚಿತ್ರವನ್ನು ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಟೈಟಲ್ ಏನು ಅನ್ನೋ ಕುತೂಹಲ ಅಭಿಮಾನಿ ಬಳಗದಲ್ಲಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯೋಗರಾಜ್ ಭಟ್ ಪೋಸ್ಟ್ ಒಂದನ್ನು ಹಾಕಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಚಿತ್ರಕ್ಕೆ K ಕರಟಕ D ದಮನಕ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಸದ್ಯ ಶಿವರಾಜ್ ಕುಮಾರ್, ಪ್ರಭುದೇವ‌ ನಡುವಿನ‌ ಸನ್ನಿವೇಶವನ್ನು ನಿರ್ದೇಶಕ ಯೋಗರಾಜ್ ಭಟ್ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ. ಶಿವಣ್ಣ ಹಾಗು ಪ್ರಭುದೇವ ಜೊತೆಗೆ ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

'K ಕರಟಕ D ದಮನಕ' - ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಯೋಗರಾಜ್ ಭಟ್

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆ ರಾಕ್‌ಲೈನ್ ಎಂಟರ್​ಟೈನ್​ಮೆಂಟ್​ ಲಾಂಛನದಲ್ಲಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪ್ರೊಡಕ್ಷನ್ ನಂ 47 ಹೆಸರಿನಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಕರುನಾಡ ಚಕ್ರವರ್ತಿ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ಯೋಗರಾಜ್ ಭಟ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಂತಹ ಸಿನಿ ದಿಗ್ಗಜರ ಕಾಂಬಿನೇಶನ್‌ನಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಅಪರೂಪದ ಚಿತ್ರವನ್ನು ಕಣ್ತುಂಬಿಕೊಳ್ಳಲು ಕನ್ನಡ ಕಲಾರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ರದ್ದು.. ಚಿತ್ರತಂಡ ಹೇಳಿದ್ದಿಷ್ಟು

ABOUT THE AUTHOR

...view details