ಕರ್ನಾಟಕ

karnataka

ETV Bharat / entertainment

'ಜೂಲಿಯೆಟ್‌ 2' ನಾಳೆ ಬಿಡುಗಡೆ: ವಿಭಿನ್ನ ಪ್ರಯೋಗ, ಗರಿಗೆದರಿದ ನಿರೀಕ್ಷೆ - ಜೂಲಿಯೆಟ್ 1

ಜೂಲಿಯೆಟ್ 2 ಸಿನಿಮಾ ನಾಳೆ(ಶುಕ್ರವಾರ) ತೆರೆ ಕಾಣಲಿದೆ.

juliet 2
ಜೂಲಿಯೆಟ್ 2 ನಾಯಕಿ ಬೃಂದಾ ಆಚಾರ್ಯ

By

Published : Feb 23, 2023, 7:31 PM IST

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಜೂಲಿಯೆಟ್ 2 ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಲಿಕಿತ್ ಆರ್. ಕೋಟ್ಯಾನ್ ನಿರ್ಮಾಣ, ವಿರಾಟ್ ಬಿ. ಗೌಡ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಚಿತ್ರದ ಎರಡನೇ ಭಾಗ ಮೊದಲು ಬಿಡುಗಡೆ ಆಗಲಿದೆ. ಐದು ಭಾಷೆಯಲ್ಲಿ ನಿರ್ಮಾಣವಾಗಿದ್ದು, ಮೊದಲು ಕನ್ನಡದಲ್ಲಿ ರಿಲೀಸ್‌ ಆಗುತ್ತಿದೆ.

ಜೂಲಿಯೆಟ್ 2 ಸಂಪೂರ್ಣ ಕಮರ್ಷಿಯಲ್ ಸಿನಿಮಾ ಅಲ್ಲ. ಇಲ್ಲಿ ನಾಯಕ ಇಲ್ಲ. ಹಾಗಂತ ಕಲಾತ್ಮಕ ಸಿನಿಮಾವಂತೂ ಅಲ್ಲ. ಕನ್ನಡದಲ್ಲಿ ಕನ್ನಡಿಗರು ನೋಡದ ಕಥೆ ಇಲ್ಲಿದೆ. ಅರಣ್ಯದಲ್ಲಿ ಮೂಕ ರೋಧನೆ, ಹೆಣ್ಣಿನ ವೇದನೆ, ಸೇಡು, ಕಿಚ್ಚು, ಕಾಮುಕರ ಅಟ್ಟಹಾಸ, ಹೆಣ್ಣಿನ ವನವಾಸ ಎಲ್ಲವೂ ಇಲ್ಲಿದೆ. ಸಾಹಸ ಇಷ್ಟ ಪಡುವ ವರ್ಗಕ್ಕೆ ಇಲ್ಲಿ ರಸದೌತಣ ಉಣಬಡಿಸುವ ಪ್ರಯತ್ನವನ್ನೂ ವಿರಾಟ್ ಬಿ.ಗೌಡ ನೇತೃತ್ವದ ಚಿತ್ರತಂಡ ಮಾಡಿದೆ. ಈಗಾಗಲೇ ಬಿಡುಗಡೆ ಆಗಿರುವ ಜೂಲಿಯೆಟ್ 2 ಟ್ರೇಲರ್​ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದೆ.

ಜೂಲಿಯೆಟ್ 2 ನಾಯಕಿ ಬೃಂದಾ ಆಚಾರ್ಯ

ಹುಡುಗಿಯರಿಗೆ ಯೌವ್ವನಾವಸ್ಥೆಯಲ್ಲಿ ಎದುರಾಗುವ ಸಮಸ್ಯೆ, ಆ ನಂತರ ಎದುರಾಗುವ ಸವಾಲುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೆಣ್ಣು ಅಬಲೆಯಲ್ಲ ಸಬಲೆ ಅನ್ನುವುದನ್ನು ಸಾರಿ ಹೇಳುವ ನಿಟ್ಟಿನಲ್ಲಿ ಮಾಡಲಾದ ಸಿನಿಮಾದಲ್ಲಿ ಬೃಂದಾ ಆಚಾರ್ಯ ಅವರೊಂದಿಗೆ ಅನೂಪ್ ಸಾಗರ್, ರವಿ, ಶ್ರೀಕಾಂತ್, ರಾಯ್ ಬಡಿಗೇರ್, ಖುಷ್ ಆಚಾರ್ಯ ಸೇರಿದಂತೆ ಹಲವರಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಇದರ ಡಿಸ್ಟ್ರಿಬ್ಯೂಷನ್ ಜವಾಬ್ದಾರಿಯನ್ನು ರಿಲಯನ್ಸ್ ಸಂಸ್ಥೆ ವಹಿಸಿಕೊಂಡಿದೆ.

ಇದನ್ನೂ ಓದಿ:ಆ್ಯಕ್ಷನ್​​ ಪ್ರಿನ್ಸ್​ನ 'ಮಾರ್ಟಿನ್' ಅವತಾರ ಕಂಡು ಹುಚ್ಚೆದ್ದು ಕುಣಿದ ಅಭಿಮಾನಿಗಳು

ಚಿತ್ರದ ಟೈಟಲ್​​ ಕೇಳಿದಾಕ್ಷಣ ಇದಕ್ಕೂ ಮೊದಲು ಜೂಲಿಯೆಟ್ 1 ಬಂದಿದೆಯೇ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಸಾಮಾನ್ಯವಾಗಿ ಸಿನಿಮಾದ ಮೊದಲ ಭಾಗ ರಿಲೀಸ್​ ಮಾಡಿದ ಬಳಿಕ ಎರಡನೇ ಭಾಗವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಜೂಲಿಯೆಟ್ ಸಿನಿಮಾ ಭಿನ್ನವಾಗಿ ತೆರಕಾಣಲಿದೆ. ಜೂಲಿಯೆಟ್ 2 ಮೊದಲು ಬಿಡುಗಡೆ ಆಗುತ್ತಿದ್ದು, ಜೂಲಿಯೆಟ್ 1 ನಂತರ ಬಿಡುಗಡೆ ಆಗಲಿದೆ. ಜೂಲಿಯೆಟ್ 1 ಶೂಟಿಂಗ್​​ ಶೇ.30 ರಷ್ಟು ಮುಗಿದಿದೆ. ಇದು ಸ್ಯಾಂಡಲ್​​ವುಡ್​ನಲ್ಲಿ ನಡೆದ ಮೊದಲ ಪ್ರಯೋಗವಾಗಿದೆ.

ನಾಳೆ ಜೂಲಿಯೆಟ್ 2 ಸಿನಿಮಾ ತೆರೆಗೆ

ಇದನ್ನೂ ಓದಿ:ಸ್ಯಾಂಡಲ್​ವುಡ್​ನಲ್ಲಿ ಹೊಸ ಪ್ರಯೋಗ: ಶೀಘ್ರದಲ್ಲೇ ಜೂಲಿಯೆಟ್ 2 ತೆರೆಗೆ, ಪಾರ್ಟ್ 1 ಶೂಟಿಂಗ್ ಚುರುಕು!​

ಈ ಸಿನಿಮಾ ಶೂಟಿಂಗ್​​ ಕರಾವಳಿ ಪ್ರದೇಶಗಳಲ್ಲಿ ನಡೆದಿದೆ. ಇದರ ಶೇ. 80ಕ್ಕೂ ಅಧಿಕ ಭಾಗ ಅರಣ್ಯ ಪ್ರದೇಶದಲ್ಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಜೂರು ಭಾಗದಲ್ಲಿ ಹೆಚ್ಚು ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ:ಆಸ್ಕರ್​ ಅಂಗಳದಲ್ಲಿ ಕೆಲಸ ನಿರ್ವಹಿಸಲಿದೆ Crisis Team​​​; ವಿಲ್​ ಸ್ಮಿತ್​- ಕ್ರಿಸ್​ ರಾಕ್​ ಘಟನೆ ಬಳಿಕ ಈ ಮಾರ್ಪಾಡು

ABOUT THE AUTHOR

...view details