ಕರ್ನಾಟಕ

karnataka

ETV Bharat / entertainment

ಬಹುನಿರೀಕ್ಷಿತ ಜೂಲಿಯೆಟ್‌ 2 ಟ್ರೇಲರ್​ ರಿಲೀಸ್​: ಆ್ಯಕ್ಷನ್​ ಅವತಾರದಲ್ಲಿ ಬೃಂದಾ ಆಚಾರ್ಯ - ಜೂಲಿಯೆಟ್ ಸಿನಿಮಾ

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಜೂಲಿಯೆಟ್‌ 2 ಟ್ರೇಲರ್​ ಬಿಡುಗಡೆ ಆಗಿದೆ.

Juliet 2 Trailer Release
ಜೂಲಿಯೆಟ್‌ 2 ಟ್ರೇಲರ್​ ಬಿಡುಗಡೆ

By

Published : Feb 15, 2023, 1:29 PM IST

ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟೀಸರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತಿರುವ ಚಿತ್ರ ಜೂಲಿಯೆಟ್‌ 2. ಪ್ರೇಮಂ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರುವ ಜೂಲಿಯೆಟ್‌ 2 ಚಿತ್ರದ ಟ್ರೇಲರ್​ ರಿಲೀಸ್ ಆಗಿದ್ದು, ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಸದ್ಯ ಅನಾವರಣಗೊಂಡಿರುವ ಜೂಲಿಯೆಟ್‌ 2 ಚಿತ್ರದ ಟ್ರೇಲರ್​ ಯಾವುದೇ ಸಿನಿಮಾ ಇಂಡಸ್ಟ್ರಿಗೂ ಕಮ್ಮಿ‌ ಇಲ್ಲಾ ಎಂಬ ಮಟ್ಟಿಗೆ ಅದ್ಧೂರಿ ಮೇಕಿಂಗ್, ಕ್ಯಾಮರಾ ವರ್ಕ್, ಪಾತ್ರಗಳ ಅನಾವರಣಗೊಂಡಿದೆ. ಬೃಂದಾ ಆಚಾರ್ಯ ಆ್ಯಕ್ಷನ್ ಸೀನ್​ಗಳ ಜೊತೆಗೆ ಅಪ್ಪ ಮಗಳ ಬಾಂಧವ್ಯದ ಕಥೆಯನ್ನು ಹೇಳುತ್ತಿದೆ. ತಂದೆ ಕಲಿಸಿ‌ಕೊಟ್ಟ ಪಾಠದಿಂದ ಬೃಂದಾ ಆಚಾರ್ಯ ಆ್ಯಕ್ಷನ್ ಮಾಡುವ ಸೀನ್​ಗಳು ಥ್ರಿಲ್ ಆಗಿದೆ. ಟ್ರೇಲರ್​ ಹೀಗೆ ಇರಬೇಕಾದ್ರೆ ಸಿನಿಮಾ ಹೇಗೆ ಇರಬಹುದು ಅಂತಾ ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ.

ಪ್ರೇಮಂ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ

ಟ್ರೇಲರ್​ನಿಂದ ಟಾಕ್ ಆಗುತ್ತಿರುವ ಜೂಲಿಯೆಟ್‌ 2 ಸಿನಿಮಾ ಪ್ರತೀ ಫ್ರೇಮ್ ನಿಮ್ಮನ್ನು ಹಿಡಿದಿಡುತ್ತೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ವಿರಾಟ್ ಬಿ ಗೌಡ ನಿರ್ದೇಶನ ಮಾಡಿದ್ದಾರೆ. ಸಚಿನ್ ಬಸ್ರೂರ್ ಅವರ ಬಿಜಿಎಂ ಹಾಗು ಶ್ಯಾಂಟೋ ವಿ ಆಂಟೋ ಕ್ಯಾಮರಾ ವರ್ಕ್, ದಿನೇಶ್ ಆಚಾರ್ಯ ಅವರ ವಿಎಫೆಕ್ಸ್ ಜೂಲಿಯೆಟ್‌ 2 ಚಿತ್ರದ ಹೈಲೆಟ್ಸ್.

ಪ್ರೇಮಂ ಪೂಜ್ಯಂ ಚಿತ್ರದ ಬಳಿಕ ಬೃಂದಾ ಆಚಾರ್ಯ ಪಾತ್ರಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಸಂಪೂರ್ಣವಾಗಿ ಬೃಂದಾ ಅವರ ಪಾತ್ರದ ಸುತ್ತ ಗಿರಕಿ ಹೊಡೆಯುತ್ತದೆ. ಪಟ್ಟಣದಿಂದ ಹಳ್ಳಿಗೆ ಸೇರುವ ನಾಯಕಿಯ ಬದುಕಲ್ಲಿ ನಡೆಯುವ ಘಟನೆ, ಶಾರದೆಯಂತೆ ಶಾಂತರೂಪಿಯಾದ ನಾಯಕಿ ಹೇಗೆ ರಣಚಂಡಿ ಆಗ್ತಾಳೆ ಅನ್ನೋದು ಜೂಲಿಯೆಟ್ 2 ಚಿತ್ರದ ಕಥೆ. ಇನ್ನೂ ಬೃಂದಾ ಆಚಾರ್ಯ ಜೊತೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಸೇರಿ ಮುಂತಾದವರು ನಟನೆ ಮಾಡಿದ್ದಾರೆ.

ಇದನ್ನೂ ಓದಿ: 'ಪ್ರೇಮಪತ್ರದ ಆಫೀಸು ಮತ್ತು ಅವಳು': ವಿಭಿನ್ನವಾಗಿ ಪ್ರೇಮದಿನ ಆಚರಿಸಿದ ಸಿಂಹಪ್ರಿಯಾ

ಇನ್ನೂ ಜೂಲಿಯೆಟ್ ಸಿನಿಮಾ ಎರಡು ಭಾಗದಲ್ಲಿ ಸಿದ್ಧವಾಗಿದೆ. ಆ ಪೈಕಿ ಎರಡನೇ ಭಾಗ ಮೊದಲು ಬಿಡುಗಡೆಯಾಗಲಿರುವುದು ಚಿತ್ರದ ಮತ್ತೊಂದು ವಿಶೇಷ. ಅಷ್ಟೇ ಅಲ್ಲ ಚಿತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್​​ನಲ್ಲಿ ಪಂಚ ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿರೋ ಜ್ಯೂಲಿಯೆಟ್ 2 ಚಿತ್ರವನ್ನು ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಸೇರಿದಂತೆ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ:'ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ..': ಜೂಲಿಯೆಟ್ 2 ಹಾಡಿಗೆ ಮೆಚ್ಚುಗೆ

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಜೂಲಿಯೆಟ್ 2 ಸಿನಿಮಾ ರಿಲಯನ್ಸ್ ಎಂಟರ್​ಟೈನ್ಮೆಂಟ್ ಮೂಲಕ ವಿಶ್ವಾದ್ಯಂತ ಫೆಬ್ರವರಿ 24ರಂದು ಬಿಡುಗಡೆ ಆಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳು ಸೌಂಡ್ ಮಾಡ್ತಿದ್ದು, ಈ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ ಟ್ರೇಲರ್​ನಿಂದಲೇ ಗೆಲ್ಲುವ ಸೂಚನೆ‌ ನೀಡಿರುವ ಜೂಲಿಯೆಟ್‌ 2 ಸಿನಿಮಾ ಬೃಂದಾ ಆಚಾರ್ಯ ಕೆರಿಯರ್​ಗೆ ಬ್ರೇಕ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕು.

ABOUT THE AUTHOR

...view details