ಹೈದರಾಬಾದ್: ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಓಟಿಟಿ 2 ರ 51ನೇ ಸಂಚಿಕೆಯು ಭಾನುವಾರ ನಡೆದಿದ್ದು, ಬಿಗ್ ಬಾಸ್ ಪ್ರೇಕ್ಷಕರಿಗೆ ಶಾಕ್ ಮೇಲೆ ಶಾಕ್ ನೀಡಲಾಯಿತು. ಬಿಗ್ ಬಾಸ್ OTT 2 ಗ್ರ್ಯಾಂಡ್ ಫಿನಾಲೆಗೆ ಕೇವಲ 1 ವಾರವಿದ್ದು ನಿನ್ನೆ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ 2 ಸ್ಪರ್ಧಿಗಳು ಎಲಿಮಿನೇಟ್ ಆಗುವ ಮೂಲಕ ಮನೆಯಿಂದ ಹೊರ ನಡೆದರು.
ಹೌದು, ಭಾನುವಾರ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸ್ಪರ್ಧಿಗಳಾದ ಜಡ್ ಹದಿದ್ ಮತ್ತು ಅವಿನಾಶ್ ಸಚ್‌ದೇವ್ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಎಲಿಮಿನೇಟ್ಗೆ ಅವಿನಾಶ್, ಜಾಡ್, ಜಿಯಾ ಶಂಕರ್ ಮತ್ತು ಮನೀಶಾ ರಾಣಿ ನಾಮಿನೇಟ್ ಆಗಿದ್ದರು. ಆದರೆ ನಾಯಕನಾಗಿ ಆಯ್ಕೆಯಾದ ಅಭಿಷೇಕ್ ಮಲ್ಹಾನ್ ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಅಂತಿಮ ವಾರಕ್ಕೆ ಬೇಬಿಕಾ ಧುರ್ವೆ, ಮನಿಶಾ, ಎಲ್ವಿಶ್ ಯಾದವ್, ಪೂಜಾ ಭಟ್ ಮತ್ತು ಜಿಯಾ ಸ್ಪರ್ಧಿಗಳು ಮುಂದುವರೆದಿದ್ದಾರೆ.
ಇನ್ನು, ಅವಿನಾಶ್ ಮತ್ತು ಜಾಡ್ ಅವರು ಮನೆಯಿಂದ ಹೊರನಡೆದ ನಂತರ ಅಭಿಷೇಕ್ ಮಲ್ಹಾನ್ ಎಲ್ವಿಶ್ ಯಾದವ್ ವಿರುದ್ಧ ದೂರಿದ್ದಾರೆ. ಮನೀಶಾ ಮತ್ತು ಎಲ್ವಿಶ್ ಅವರು ಅಭಿಷೇಕ್ ಅವರ ತಾಯಿಯೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಗೇಲಿ ಮಾಡಿದ್ದರು. ಇದನ್ನು ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಪ್ರಸಾರ ಮಾಡಲಾಯಿತು. ಅಭಿಷೇಕ್ ಮಲ್ಹಾನ್ ಎಲ್ವಿಶ್ ತಂಡವು ಮಾಧ್ಯಮಗಳಲ್ಲಿ ನಿಂದಿಸುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ ಎಂದು ಆರೋಪಿಸಿದರು. ಆದರೆ ಈ ಹೇಳಿಕೆಯನ್ನು ಎಲ್ವಿಶ್ ನಿರಾಕರಿಸಿದ್ದಾರೆ.