ಹೈದರಾಬಾದ್:ತೆಲುಗು ಸೂಪರ್ಸ್ಟಾರ್ ಜೂನಿಯರ್ ಎನ್‌ಟಿಆರ್ ಫೋಟೋಗ್ರಫರ್ ಅವಿನಾಶ್ ಗೌರಿಕೇರ ಜತೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋಸ್ನಲ್ಲಿ ಪೋಸ್ಟ್ ಪ್ಯಾಕ್ ಅಪ್ ಶೂಟ್ ಮಾಡಿದ್ದಾರೆ. ಫೋಟೋಗ್ರಾಫರ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋಸ್ ಶೇರ್ ಮಾಡಿ "ಸೂಪರ್ ಪಾಪ್ಯುಲರ್ ಜೂನಿಯರ್ ಎನ್‌ಟಿಆರ್ ಜೊತೆ ಫೋಟೋಶೂಟ್. ಅವರ ಕ್ಯಾಂಡಿಡ್ ನಗು. ಕೆಲವೇ ನಿಮಿಷಗಳಲ್ಲಿ ಇವು ಸಿಕ್ಕವು" ಎಂದು ಬರೆದಿದ್ದಾರೆ.
ಇದನ್ನೂ ಓದಿ:ಜೂ.ಎನ್‌ಟಿಆರ್ ಜೊತೆ ಕೆಲಸ ಮಾಡಲಿಚ್ಛಿಸಿದ ಹಾಲಿವುಡ್ ನಿರ್ದೇಶಕ
ಜೂನಿಯರ್ ಎನ್‌ಟಿಆರ್ ಅವರ ಮಿಲಿಯನ್ ಡಾಲರ್ ಸ್ಮೈಲ್ ಈ ಪೋಸ್ಟ್ನಲ್ಲಿ ಕಂಡು ಬಂದಿದೆ. ಅವರ ನಗು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಸೂಪರ್ ಎಂದು ಹೊಗಳಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರು ತೆಲುಗು ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್. ತಮ್ಮ ಸಿನಿಮಾ ಕೆರಿಯರ್ನಲ್ಲಿ ಪೀಕ್ ಸ್ಟೇಜ್ನಲ್ಲಿ ಇದ್ದಾರೆ ಈ ನಟ. ಆರ್ಆರ್ಆರ್ ಸಿನಿಮಾ ಮಾಡುವ ಮೂಲಕ ಇವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ರಾಜಮೌಳಿ ಅವರ ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರ ಸಖತ್ ಹೈಲೈಟ್ ಆಗಿದೆ. ಇದು ಭಾರತೀಯ ಚಿತ್ರರಂಗದ ದೊಡ್ಡ ಬ್ಲಾಕ್ಬಸ್ಟರ್ ಆಗಿಯೂ ಹೊರ ಹೊಮ್ಮಿದೆ.
ಇದನ್ನೂ ಓದಿ:'ಎನ್‌ಟಿಆರ್ 30' ಅಡ್ಡಾಗೆ ಸೈಫ್ ಅಲಿ ಖಾನ್ ಎಂಟ್ರಿ: ಹೈ ವೋಲ್ಟೇಜ್ ಶೂಟಿಂಗ್ ಶುರು!