ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣ್ಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಅದ್ಧೂರಿಯಾಗಿ ದೇಶಾದ್ಯಂತ ಬಿಡುಗಡೆ ಆಗಲಿದೆ. ಈ ದಂಪತಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಹೈದರಾಬಾದ್ನಲ್ಲಿ ಸೆ.2ರಂದು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ನಡೆಯಲಿದ್ದು, ಆರ್ಆರ್ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ, ಜೂನಿಯರ್ ಎನ್‌ಟಿಆರ್ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿರುವುದಕ್ಕೆ ತಮ್ಮ ಕೃತಜ್ಞತೆ ತಿಳಿಸಿದ್ದಾರೆ. ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಜೂನಿಯರ್ ಎನ್‌ಟಿಆರ್ ಭಾಗವಹಿಸುವಿಕೆ ಬಗ್ಗೆ ಘೋಷಿಸುವ ವಿಡಿಯೋವನ್ನು ಅಯಾನ್ ಮುಖರ್ಜಿ ಶನಿವಾರದಂದು ಹಂಚಿಕೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ಬ್ರಹ್ಮಾಸ್ತ್ರ ಪ್ರಚಾರದ ಭಾಗವಾಗಿ ಸಿನಿಮಾ ಅಬ್ಬರಿಸಲು ನೆರವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸೆ.2ರಂದು ನಡೆಯಲಿರುವ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ನಲ್ಲಿ ನಟಿ ಆಲಿಯಾ ಭಟ್, ನಟ ರಣ್ಬೀರ್ ಕಪೂರ್, ನಟ ನಾಗಾರ್ಜುನ್, ನಿರ್ದೇಶಕ ರಾಜಮೌಳಿ ಇರಲಿದ್ದಾರೆ. ಇನ್ನೂ ಆ.24ರಂದು ಚೆನ್ನೈನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮ ನಡೆದಿತ್ತು. ರಾಜಮೌಳಿ, ನಾಗಾರ್ಜುನ, ರಣ್ಬೀರ್ ಕಪೂರ್ ಉಪಸ್ಥಿತರಿದ್ದರು. ಅಂದು ನಟ ರಣ್ಬೀರ್ ಕಪೂರ್ ದಕ್ಷಿಣ ಭಾರತದ ಆಹಾರ ಸವಿದು ಹರ್ಷ ವ್ಯಕ್ತಪಡಿಸಿದ್ದರು.