ಕರ್ನಾಟಕ

karnataka

ETV Bharat / entertainment

'ಹ್ಯಾಪಿ ಬರ್ತ್‌ಡೇ ಅಮ್ಮಲು': ಪತ್ನಿಗೆ ವಿಶೇಷವಾಗಿ ಶುಭ ಕೋರಿದ RRR ಸ್ಟಾರ್ ಜೂ.ಎನ್​ಟಿಆರ್​​ - ಜೂನಿಯರ್ ಎನ್‌ಟಿಆರ್ ಪತ್ನಿ ಜನ್ಮದಿನ

ನಟ ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.

Jr NTR wife birthday
ಲಕ್ಷ್ಮಿ ಪ್ರಣತಿ ಹುಟ್ಟುಹಬ್ಬ

By

Published : Mar 26, 2023, 12:33 PM IST

ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಇಂದು ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. 31ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರಿಗೆ ಕುಟುಂಬಸ್ಥರು, ಆತ್ಮೀಯರು ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟನ ಅಭಿಮಾನಿಗಳೂ ಕೂಡ ಶುಭಾಶಯ ತಿಳಿಸುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಮಾತ್ರ ತಮ್ಮ ಪತ್ನಿಯ ಜನ್ಮದಿನಕ್ಕೆ ವಿಶೇಷವಾಗಿ ವಿಶ್‌ ಮಾಡಿದ್ದಾರೆ. ಅವರು ಕಳೆದ ವರ್ಷದ ಕ್ರಿಸ್​ಮಸ್​ ಆಚರಣೆಯ ಫೋಟೋ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇಂದು ಆರ್​ಆರ್​ಆರ್​ ಸ್ಟಾರ್​ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಲಕ್ಷ್ಮಿ ಪ್ರಣತಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ವರ್ಚುವಲ್​ ವೇದಿಕೆಯಲ್ಲಿ ಪತ್ನಿ ಮೇಲಿನ ಪ್ರೀತಿಯ ಧಾರೆಯೆರೆದ ನಟ, ತಮ್ಮ ಹಳೇ ಫೋಟೋ ಪೋಸ್ಟ್‌ ಮಾಡಿದ್ದಾರೆ. ಟಾಲಿವುಡ್​ ನಟ ಬ್ಲ್ಯಾಕ್​ ಆ್ಯಂಡ್​ ಬ್ಲ್ಯಾಕ್​ ಡ್ರೆಸ್​ನಲ್ಲಿ ಮತ್ತು ಲಕ್ಷ್ಮಿ ಪ್ರಣತಿ ಬ್ಲ್ಯೂ ಟಾಪ್​​, ಬ್ಲ್ಯಾಕ್​ ಪ್ಯಾಂಟ್​ನಲ್ಲಿ ಕೂಲ್​ ಲುಕ್​​ನಲ್ಲಿ ಕಂಗೊಳಿಸಿದ್ದಾರೆ.

ಲಕ್ಷ್ಮಿ ಪ್ರಣತಿ ಅವರ ಹುಟ್ಟುಹಬ್ಬದ ಪೋಸ್ಟ್ ಹಂಚಿಕೊಂಡ ನಟ, "ಹುಟ್ಟುಹಬ್ಬದ ಶುಭಾಶಯಗಳು ಅಮ್ಮಲು.." ಎಂದು ಬರೆದಿದ್ದಾರೆ. ಅವರು ಈ ಬರ್ತ್‌ಡೇ ವಿಶ್ ಪೋಸ್ಟ್ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಪ್ರಣತಿಗೆ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ನಟನ ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು. ಆಸ್ಕರ್ ಪ್ರಶಸ್ತಿಗಾಗಿ ಅಮರಿಕದ ಲಾಸ್ ಏಂಜಲಿಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿಯಾದ ಎಮಿಲಿ ಇನ್ ಪ್ಯಾರಿಸ್ ತಾರೆ ಲೂಸಿಯನ್ ಲ್ಯಾವಿಸ್‌ಕೌಂಟ್ (Lucien Laviscount) ಅವರು ಸಹ ನಟನ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಪ್ರಣತಿಗೆ ಶುಭ ಕೋರಿದ್ದಾರೆ.

ಲಕ್ಷ್ಮಿ ಪ್ರಣತಿ ಹುಟ್ಟುಹಬ್ಬಕ್ಕೆ ಶುಭಕೋರಿದ ಲೂಸಿಯನ್ ಲ್ಯಾವಿಸ್‌ಕೌಂಟ್

ಜೂ.ಎನ್‌ಟಿಆರ್ ಮತ್ತು ಲಕ್ಷ್ಮಿ ಪ್ರಣತಿ 2011ರ ಮೇನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನ ಆರಂಭಿಸಿದರು. ಆಗ ನಟನಿಗೆ 26 ವರ್ಷ, ಪ್ರಣತಿ ಅವರಿಗೆ ಕೇವಲ 18 ವರ್ಷ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಹೆಸರು ಅಭಯ್ ರಾಮ್ ಮತ್ತು ಭಾರ್ಗವ್ ರಾಮ್. ಪ್ರಣತಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಂಬಂಧಿ.

ಇದನ್ನೂ ಓದಿ:ಜೈಲಿನಿಂದಲೇ ಜಾಕ್ವೆಲಿನ್​​ಗೆ ಪ್ರೇಮ ಪತ್ರ ಬರೆದ ವಂಚಕ ಸುಕೇಶ್ ಚಂದ್ರಶೇಖರ್!

ಸಿನಿಮಾ ವಿಚಾರ ನೋಡುವುದಾದರೆ, ಜೂನಿಯರ್ ಎನ್​ಟಿಆರ್​ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. NTR30 ಚಿತ್ರದ ತಾತ್ಕಾಲಿಕ ಶೀರ್ಷಿಕೆ. ಆ್ಯಕ್ಷನ್ ಸಿನಿಮಾ ಎಂದು ಹೇಳಲಾಗಿದ್ದು, ಬಾಲಿವುಡ್​ ನಟಿ ಜಾನ್ವಿ ಕಪೂರ್ ನಾಯಕ ನಟಿ. ಟಾಲಿವುಡ್​ನಲ್ಲಿ ಅವರ ಚೊಚ್ಚಲ ಚಿತ್ರವಾಗಿರುವುದರಿಂದ ಸಿನಿಮಾ ಸಖತ್​ ಸುದ್ದಿ ಮಾಡುತ್ತಿದೆ. ಗುರುವಾರ ಹೈದರಾಬಾದ್‌ನಲ್ಲಿ ಮುಹೂರ್ತ ಪೂಜೆಯೊಂದಿಗೆ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಆಫರ್​ ಮೇಲೆ ಆಫರ್.. ಟಾಲಿವುಡ್​ ಸಿನಿ ನೆಲದಲ್ಲಿ ಬ್ಯುಸಿಯಾದ 'ಕಿಸ್​​' ತಾರೆ

ಇತ್ತೀಚೆಗಷ್ಟೇ ನಡೆದ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರೋದ್ಯಮ ಯಶಸ್ಸು ಕಂಡಿದ್ದು, ದೇಶದಲ್ಲಿ ಸಂತಸದ ವಾತಾವರಣ ಇದೆ. ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ಸೂಪರ್​ ಹಿಟ್​ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಆಸ್ಕರ್​ 2023 ಬಳಿಕ ಜೂನಿಯರ್ ಎನ್‌ಟಿಆರ್ ಜನಪ್ರಿಯತೆ ಹೆಚ್ಚಿದೆ. ವಿಶ್ವಾದ್ಯಂತ ಮನ್ನಣೆ ಗಳಿಸಿದ್ದಾರೆ.

ABOUT THE AUTHOR

...view details