ಕರ್ನಾಟಕ

karnataka

ETV Bharat / entertainment

ರೋಮಾಂಚಕ 'ದೇವರ' ಗ್ಲಿಂಪ್ಸ್: ಹೆಚ್ಚಿತು ಜೂ. ಎನ್‌ಟಿಆರ್ ಸಿನಿಮಾ ಮೇಲಿನ ಕುತೂಹಲ

Devara Glimpse: ಜೂನಿಯರ್ ಎನ್‌ಟಿಆರ್ ನಟನೆಯ ಬಹುನಿರೀಕ್ಷಿತ 'ದೇವರ' ಸಿನಿಮಾದ ಗ್ಲಿಂಪ್ಸ್ ಉತ್ತಮ ವೀಕ್ಷಣೆ ಪಡೆಯುತ್ತಿದೆ.

Devara glimpse
ದೇವರ ಗ್ಲಿಂಪ್ಸ್

By ETV Bharat Karnataka Team

Published : Jan 9, 2024, 10:00 AM IST

ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಕೊರಟಾಲ ಶಿವ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಮೂಲಕ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಸೌತ್​ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಲು ಸಜ್ಜಾಗಿದ್ದಾರೆ. ಸೋಮವಾರದಂದು 'ದೇವರ' ಗ್ಲಿಂಪ್ಸ್ ಅನಾವರಣಗೊಂಡು ಉತ್ತಮ ವೀಕ್ಷಣೆ ಪಡೆದುಕೊಳ್ಲುತ್ತಿದೆ.

ಜೂನಿಯರ್ ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಇದೇ ಮೊದಲ ಬಾರಿ ತೆರೆ ಹಂಚಿಕೊಂಡಿರುವ 'ದೇವರ' ಚಿತ್ರದ ಗ್ಲಿಂಪ್ಸ್ ಜನವರಿ 8ರಂದು ಅನಾವರಣಗೊಂಡಿತು. ಗ್ಲಿಂಪ್ಸ್ ರೋಮಾಂಚಕವಾಗಿದ್ದು, ಸಿನಿಮಾ ಮೇಲಿನ ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ. ಚಿತ್ರದ ತಯಾರಕರ ಪ್ರಕಾರ ಈ ಕುತೂಹಲಕಾರಿ ಗ್ಲಿಂಪ್ಸ್ ಯೂಟ್ಯೂಬ್​ನಲ್ಲಿ ಶರವೇಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಕಂಡಿದೆ.

ದೇವರ ಸಿನಿಮಾ ಹಿಂದಿರುವ ಪ್ರೊಡಕ್ಷನ್​ ಹೌಸ್​ ಎನ್‌ಟಿಆರ್ ಆರ್ಟ್ಸ್ ಸೋಷಿಯಲ್​ ಮೀಡಿಯಾದಲ್ಲಿ ನಿನ್ನೆ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿತ್ತು. ಅಲ್ಲದೇ ಈ ಗ್ಲಿಂಪ್ಸ್ ವಿವಿಧ ಭಾಷೆಗಳಲ್ಲಿ ಯೂಟ್ಯೂಬ್‌ನಲ್ಲಿ ಅತಿ ವೇಗವಾಗಿ 500k ಲೈಕ್ಸ್ ಪಡೆದಿದೆ ಎಂದು ಘೋಷಿಸಿತ್ತು. ಈ ಸಂಖ್ಯೆ ಏರಿಕೆ ಕಾಣುತ್ತಿದೆ. ಪೋಸ್ಟರ್ ಜೊತೆಗೆ, "ನೀವೆಲ್ಲರೂ ಅವನ ಕರುಣೆಯಿಲ್ಲದ ಕೆಲಸಕ್ಕೆ ಸಾಕ್ಷಿಯಾಗಿದ್ದೀರಿ. ದೇವರ ಗ್ಲಿಂಪ್ಸ್​ 500+ ಲೈಕ್ಸ್'' ಎಂದು ಬರೆದುಕೊಂಡಿದೆ. ಮತ್ತೊಂದು ಅಪ್​ಡೇಟ್ಸ್ ಪ್ರಕಾರ, ನಿನ್ನೆಯೇ ಈ ಗ್ಲಿಫ್ಸ್ ಯೂಟ್ಯೂಬ್‌ನಲ್ಲಿ 10 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಮೈಲಿಗಲ್ಲನ್ನು ಚಿತ್ರತಂಡ ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿತ್ತು. ಸದ್ಯದ ಮಾಹಿತಿ ಪ್ರಕಾರ, ಈ ಗ್ಲಿಂಪ್ಸ್ 30M+ ವೀಕ್ಷಣೆ ಕಂಡಿದೆ. 1M+ ವೀಕ್ಷಣೆ ಕಂಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ನಂದಮೂರಿ ಕಲ್ಯಾಣ್‌ ರಾಮ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರೊಡಕ್ಷನ್‌ ಡಿಸೈನರ್‌ ಸಬು ಸಿರಿಲ್‌, ಎಡಿಟರ್​ ಶ್ರೀಕರ್‌ ಪ್ರಸಾದ್‌ ಮತ್ತು ಸಿನಿಮಾಟೋಗ್ರಾಫರ್‌ ರತ್ನವೇಲು ಸೇರಿದಂತೆ ಪ್ರತಿಭಾವಂತ ತಂಡವನ್ನು ಈ ಚಿತ್ರ ಒಳಗೊಂಡಿದೆ. ಅದ್ಭುತ ಸಿನಿಮೀಯ ಅನುಭವ ನೀಡುವ ಗುರಿಯನ್ನು ಹೊಂದಿರುವ ಚಿತ್ರ ಇದೇ ಸಾಲಿನಲ್ಲಿ ತೆರೆಗಪ್ಪಳಿಸಲಿದೆ. ಈ ಚಿತ್ರದ ಮೂಲಕ ಜಾಹ್ನವಿ ಕಪೂರ್ ಅವರು ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಬಾಲಿವುಡ್​ ನಟ ಸೈಫ್ ಅಲಿ ಖಾನ್ ಎದುರಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್ ರಾಜ್, ಶ್ರೀಕಾಂತ್ ಮತ್ತು ಶೈನ್ ಟಾಮ್ ಚಾಕೊ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ರಾಜಮೌಳಿಯವ್ರಿಗೆ ಕರೆ ಮಾಡಿದ್ರೆ ಫೋನ್​​ ಸ್ವಿಚ್ ಆಫ್: ಎಂ ಎಂ ಕೀರವಾಣಿ ಹೀಗಂದಿದ್ದೇಕೆ

ನಿರ್ದೇಶಕ ಕೊರಟಾಲ ಶಿವ ಮತ್ತು ನಟ ಜೂ. ಎನ್‌ಟಿಆರ್ ಕಾಂಬಿನೇಶನ್​ನ ನಾಲ್ಕನೇ ಸಿನಿಮಾ. ಈ ಹಿಂದೆ ಬೃಂದಾವನಂ, ಊಸರವಳ್ಳಿ ಮತ್ತು ಜನತಾ ಗ್ಯಾರೇಜ್‌ ಸಿನಿಮಾಗಳನ್ನು ಮಾಡಿದ್ದಾರೆ. ನಟ ನಿರ್ದೇಶಕ ಕಾಂಬೋದ ನಾಲ್ಕನೇ ಚಿತ್ರ 'ದೇವರ' ಇದೇ ಸಾಲಿನ ಏಪ್ರಿಲ್ 5ರಂದು ಚಿತ್ರಮಂದಿರ ಪ್ರವೇಶಿಸಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಎಂಗೇಜ್​ಮೆಂಟ್​ ಗಾಸಿಪ್​! ಸತ್ಯಾಂಶವೇನು?

ABOUT THE AUTHOR

...view details