ಕರ್ನಾಟಕ

karnataka

ETV Bharat / entertainment

'ನಾನು ಸಿನಿಮಾ ಮಾಡುವುದಿಲ್ಲ': ಫ್ಯಾನ್ಸ್​ಗೆ ಶಾಕ್​ ನೀಡಿದ ಜೂ.ಎನ್​ಟಿಆರ್​ - etv bharat kannada

ಅಭಿಮಾನಿಗಳು ಜೂನಿಯರ್​ ಎನ್​ಟಿಆರ್​ ಅವರ ಮುಂದಿನ ಸಿನಿಮಾದ ಬಗ್ಗೆ ಪ್ರಶ್ನಿಸಿದ್ದು,​ ನಟ ಅಚ್ಚರಿಯ ಹೇಳಿಕೆ ಕೊಟ್ಟರು.

ntr
ಜೂ.ಎನ್​ಟಿಆರ್​

By

Published : Mar 21, 2023, 10:18 AM IST

ಸೂಪರ್​ ಹಿಟ್​ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕ ಜೂನಿಯರ್​ ಎನ್​ಟಿಆರ್​ ಭಾರತಕ್ಕೆ ಮರಳಿದ್ದಾರೆ. 'ತಾರಕ್​' ಇತ್ತೀಚೆಗೆ ನಟ ವಿಶ್ವಕ್​ ಸೇನ್​ ಅವರ ದಾಸ್​ ಕಾ ಧಮ್ಕಿ ಚಿತ್ರದ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳ ಜೊತೆ ಸಂವಾದವನ್ನೂ ನಡೆಸಿದ್ದರು. ಈ ವೇಳೆ ಫ್ಯಾನ್ಸ್​, ಜೂನಿಯರ್​ ಎನ್​ಟಿಆರ್​ ಅವರ ಮುಂದಿನ ಸಿನಿಮಾದ ಬಗ್ಗೆ ಪ್ರಶ್ನಿಸಿದ್ದು,​ ನಾನು ಮುಂದೆ ಸಿನಿಮಾ ಮಾಡುವುದಿಲ್ಲ ಎಂದು ನಟ ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಅಚ್ಚರಿ ಉಂಟುಮಾಡಿದೆ.

ಕಾರ್ಯಕ್ರಮದಲ್ಲಿ ಜೂನಿಯರ್​ ಎನ್​ಟಿಆರ್‌ಗೆ ಕೆಲವೊಂದು ಪ್ರಶ್ನೆಗಳನ್ನು ಫ್ಯಾನ್ಸ್​ ಕೇಳಿದ್ದಾರೆ. ಜೊತೆಗೆ ಅವರ ಮುಂಬರುವ ಚಿತ್ರದ ಬಗ್ಗೆ ಪದೇ ಪದೇ ಪ್ರಶ್ನಿಸಿದ್ದಾರೆ. "ನಾನು ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ. ನೀವು ಮತ್ತದೇ ಪ್ರಶ್ನೆಗಳನ್ನು ಕೇಳಿದರೆ ನಾನು ಸಿನಿಮಾ ಮಾಡುವುದನ್ನೇ ಬಿಡುತ್ತೇನೆ " ಎಂದು ಜೂನಿಯರ್​ ಎನ್​ಟಿಆರ್​ ತಮಾಷೆಯಾಗಿ ಉತ್ತರಿಸಿದರು. ಸ್ವಲ್ಪ ಸಮಯದ ಬಳಿಕ, "ಸಿನಿಮಾ ನಿಲ್ಲಿಸುವ ಯೋಚನೆ ಇಲ್ಲ. ಶೀಘ್ರದಲ್ಲೇ ತೆರೆಗೆ ಬರುತ್ತೇನೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ:50 ದೇಶ, 5 ಭಾಷೆ: ಎರಡೇ ದಿನಕ್ಕೆ 100‌ ಕೋಟಿ ರೂಪಾಯಿ ಕ್ಲಬ್ ಸೇರಿದ‌ 'ಕಬ್ಜ'

ಜೂನಿಯರ್​ ಎನ್​ಟಿಆರ್​ ಮುಖ್ಯಭೂಮಿಕೆಯ ಹೊಸ ಸಿನಿಮಾಗೆ ಟೈಟಲ್​​ ಅಂತಿಮವಾಗಿಲ್ಲ. ಆದರೆ ಈ ಚಿತ್ರವನ್ನು ಸದ್ಯ 'ಎನ್​ಟಿಆರ್​ 30' ಎಂದೇ ಕರೆಯಲಾಗುತ್ತಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವೇ ಅಧಿಕೃತವಾಗಿ ಈ ಸಂಗತಿಯನ್ನು ಘೋಷಣೆ ಮಾಡಿದೆ. ಹೀಗಾಗಿ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಈ ಇಬ್ಬರೂ ಕೂಡ ದೊಡ್ಡ ಫ್ಯಾನ್​ ಫಾಲೋವಿಂಗ್​ ಹೊಂದಿದ್ದು, ಚಿತ್ರ ಹಿಟ್ ಸಾಲಿಗೆ ಸೇರಲಿದೆ ಅನ್ನೋದು ಅಭಿಮಾನಿಗಳು ಮತ್ತು ಚಿತ್ರತಂಡದ ವಿಶ್ವಾಸ. ಜನತಾ ಗ್ಯಾರೇಜ್ ಖ್ಯಾತಿಯ ನಿರ್ದೇಶಕ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಪ್ಯಾನ್​ ಇಂಡಿಯಾ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 5 ರಂದು ತೆರೆಕಾಣಲಿದೆ.

ಇದನ್ನೂ ಓದಿ:"ದಸರಾ" ಚಿತ್ರತಂಡಕ್ಕೆ ಚಿನ್ನದ ನಾಣ್ಯ ಗಿಫ್ಟ್​ ನೀಡಿದ ನಟಿ ಕೀರ್ತಿ ಸುರೇಶ್! ಯಾಕೆ ಗೊತ್ತಾ?

ಟ್ವಿಟರ್​ ಟ್ರೆಂಡಿಂಗ್​ನಲ್ಲಿ ತಾರಕ್ ಫಸ್ಟ್​​:ಜೂ.ಎನ್‌ಟಿಆರ್ ಅವರು ಆಸ್ಕರ್ 2023 ರ ಚರ್ಚೆ ವಿಷಯದಲ್ಲಿ (ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಫ್ಲಾಟ್​ಫಾರ್ಮ್​ಗಳು) ಅಗ್ರಸ್ಥಾನದಲ್ಲಿದ್ದು, ಹಾಲಿವುಡ್ ಸೆಲೆಬ್ರಿಟಿಗಳು ಅವರ ಹಿಂದೆ ಇದ್ದಾರೆ. ನಟ ರಾಮ್​ಚರಣ್​ ಎರಡನೇ ಸ್ಥಾನದಲ್ಲಿದ್ದಾರೆ. ನೆಟ್‌ಬೇಸ್ ಕ್ವಿಡ್ ಸಂಸ್ಥೆ, ಸಾಮಾಜಿಕ ಮಾಧ್ಯಮ ಮತ್ತು ಮುಖ್ಯ ಸುದ್ದಿ ಮಾಧ್ಯಮಗಳಾದ್ಯಂತ ಆಸ್ಕರ್ 2023 ರಿಂದ ಹೆಚ್ಚು ಉಲ್ಲೇಖಿಸಲಾದ ಸೆಲೆಬ್ರಿಟಿಗಳನ್ನು ಆಧರಿಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಟ್ವಿಟ್ಟರ್ ಟ್ರೆಂಡಿಂಗ್​ ವಿಚಾರಕ್ಕೆ ಬಂದಾಗ ಜೂನಿಯರ್ ಎನ್​ಟಿಆರ್ ಮತ್ತು ರಾಮ್​ಚರಣ್ ಖಾಯಂ ಆಗಿರುತ್ತಾರೆ.

ಇದನ್ನೂ ಓದಿ:ಆಕಾಶದ ನಕ್ಷತ್ರಕ್ಕೆ 'ಅಪ್ಪು' ಹೆಸರು.. ಬಿಗ್ ಲಿಟ್ಲ್ ಕಂಪನಿ ಜೊತೆ ವಿಕ್ರಮ್ ಸಾಥ್​

ABOUT THE AUTHOR

...view details