ದೇಶದಲ್ಲೀಗ ಆಸ್ಕರ್ ಗೌರವದ ಸಂಭ್ರಮ ನೆಲೆಸಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದು, ಚಿತ್ರತಂಡ ದೇಶಕ್ಕೆ ವಾಪಸಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರ್‌ಆರ್‌ಆರ್ ಸಲುವಾಗಿ 95ನೇ ಆಸ್ಕರ್‌ನ ರೆಡ್ ಕಾರ್ಪೆಟ್ ಮೇಲೆ ಜೂನಿಯರ್ ಎನ್‌ಟಿಆರ್ ಹೆಜ್ಜೆ ಹಾಕಿದ್ದು, ಸಮಾರಂಭದ ಬಳಿಕ ಮಂಗಳವಾರ ತಡರಾತ್ರಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಅದ್ಧೂರಿ ಸ್ವಾಗತ ಕೋರಿದರು.
ನನ್ನ ಜೀವನದ ಅತ್ಯುತ್ತಮ ಕ್ಷಣ:ಮಾಧ್ಯಮಗಳೊಂದಿಗೆ ಮಾತನಾಡಿದ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ನನ್ನ ಜೀವನದ "ಅತ್ಯುತ್ತಮ ಕ್ಷಣ" ಎಂದು ಹರ್ಷ ವ್ಯಕ್ತಪಡಿಸಿದರು. ಸಿನಿ ಪ್ರೇಕ್ಷಕರು, ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರೀತಿ ಇಲ್ಲದಿದ್ದರೆ ಈ ಗೆಲುವು ಸಾಧ್ಯವಿರಲಿಲ್ಲ. ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ವೀಕ್ಷಿಸಿದ್ದು ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ. ನನಗೆ ಆರ್‌ಆರ್‌ಆರ್ ಬಗ್ಗೆ ಬಹಳ ಹೆಮ್ಮೆ ಇದೆ. ನಮ್ಮ ಚಿತ್ರದ ಮೇಲೆ ಪ್ರೀತಿಯನ್ನು ಧಾರೆಯೆರೆದ ಪ್ರತಿಯೊಬ್ಬ ಭಾರತೀಯನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಪ್ರೇಕ್ಷಕರಿಂದ ಪಡೆದ ಪ್ರೀತಿಯಿಂದಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದೇವೆ. ಅಲ್ಲದೇ ಜಾಗತಿಕವಾಗಿ, ಹಾಗೆಯೇ ಚಿತ್ರರಂಗದಿಂದಲೂ ಸಾಕಷ್ಟು ಪ್ರೀತಿ, ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.
ನಟ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಇದ್ದ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಮಾತನಾಡಿ, ಇದು ಅತ್ಯುತ್ತಮ ಭಾವನೆ ಮತ್ತು ಇದೊಂದು ದೊಡ್ಡ ಪ್ರಯಾಣ ಎಂದು ಹೇಳಿದರು. ಆಸ್ಕರ್ ಬಳಿಕ ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಅವರು ನನ್ನನ್ನು ತಬ್ಬಿಕೊಂಡಾಗ ಬಹಳ ಖುಷಿ ಆಯಿತು. ನಾನು ಬಹಳ ಆಶೀರ್ವದಿಸಲ್ಪಟ್ಟಿದ್ದೇನೆ ಎಂದು ನಾಟು ನಾಟು ಡ್ಯಾನ್ಸ್ ಮಾಸ್ಟರ್ ತಮ್ಮ ಸಂತಸ ಹಂಚಿಕೊಂಡರು.