ಹೈದರಾಬಾದ್:ಇಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ 28ನೇ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಮೊಮ್ಮಕ್ಕಳಾದ ಜೂನಿಯರ್ ಎನ್‌ಟಿಆರ್ ಮತ್ತು ನಂದಮೂರಿ ಕಲ್ಯಾಣ್ರಾಮ್ ಅವರು ಮುಂಜಾನೆ ಹೈದರಾಬಾದ್‌ನ ಎನ್‌ಟಿಆರ್ ಗಾರ್ಡನ್ಸ್‌ಗೆ ಆಗಮಿಸಿ ಅಜ್ಜನ ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಪ್ರಾರ್ಥಿಸಿದರು.
ಎನ್‌ಟಿಆರ್ ಘಾಟ್‌ನಲ್ಲಿ ಜೂ.ಎನ್‌ಟಿಆರ್ ಮತ್ತು ನಂದಮೂರಿ ಕಲ್ಯಾಣ್ರಾಮ್ ಅವರನ್ನು ಅಭಿಮಾನಿಗಳು ಸುತ್ತುವರೆದಿರುವ ಫೋಟೋ, ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ. ಇಬ್ಬರೂ ಕಪ್ಪುಡುಗೆ ಧರಿಸಿದ್ದರು. ಜೂ.ಎನ್‌ಟಿಆರ್ ಕಪ್ಪು ಫೇಸ್ ಮಾಸ್ಕ್ ಹಾಕಿಕೊಂಡಿದ್ದರು.
ಇಬ್ಬರೂ ಪ್ರತಿ ವರ್ಷ ತಮ್ಮ ಅಜ್ಜನ ಜನ್ಮದಿನ ಮತ್ತು ಪುಣ್ಯಸ್ಮರಣೆಯಂದು ತಪ್ಪದೇ ಎನ್‌ಟಿಆರ್ ಗಾರ್ಡನ್ಸ್‌ಗೆ ಭೇಟಿ ನೀಡುತ್ತಾರೆ. ಇಂದು ಭದ್ರತಾ ಸಿಬ್ಬಂದಿ ಮತ್ತು ಹಲವು ಅಭಿಮಾನಿಗಳ ನಡುವೆ ನಿಂತು ನಮನ ಸಲ್ಲಿಸಿದ್ದಾರೆ. ನೂಕುನುಗ್ಗಲಿನ ನಡುವೆಯೇ ಸಮಾಧಿಗೆ ಪುಷ್ಪಾರ್ಪಣೆ ಮಾಡಿದರು.
ಇನ್ನೊಂದೆಡೆ, ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ಅವರು ವಿಜಯವಾಡದ ಪತಮಟಾ ಎನ್‌ಟಿಆರ್ ಸರ್ಕಲ್ನಲ್ಲಿರುವ ಎನ್‌ಟಿಆರ್ ಪ್ರತಿಮೆಗೆ ಗೌರವ ಸಲ್ಲಿಸಿದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎನ್‌ಟಿಆರ್ ಕುರಿತು..: ಎನ್‌ಟಿಆರ್ ಎಂದೇ ಜನಪ್ರಿಯರಾದ ನಂದಮೂರಿ ತಾರಕ ರಾಮರಾವ್ ನಟ, ನಿರ್ಮಾಪಕ, ನಿರ್ದೇಶಕ, ಸಂಪಾದಕ ಮತ್ತು ರಾಜಕಾರಣಿಯಾಗಿ ಸೇವೆ ಸಲ್ಲಿಸಿದವರು. ಏಳು ವರ್ಷಗಳ ಕಾಲ ಆಂಧ್ರದ ಮುಖ್ಯಮಂತ್ರಿಯಾಗಿದ್ದರು. ತೋಡು ದೊಂಗಲು (1954), ಸೀತಾರಾಮ ಕಲ್ಯಾಣಂ (1960) ಮತ್ತು ವರಕತ್ನಂ (1970) ಸಿನಿಮಾಗಳಿಗೆ ಇವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.
ಲವ ಕುಶ (1963) ಮತ್ತು ರಾಜು ಪೇಡಾ (1954) ಎಂಬ ಸಿನಿಮಾಗಳಲ್ಲಿ ಮಾಡಿರುವ ಪಾತ್ರಗಳಿಗಾಗಿ ಎನ್‌ಟಿಆರ್‌ಗೆ 'ರಾಷ್ಟ್ರಪತಿ ಪ್ರಶಸ್ತಿ' ನೀಡಲಾಗಿದೆ. 1969ರಲ್ಲಿ ಕೇಂದ್ರ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಎನ್‌ಟಿಆರ್ 1982ರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಸ್ಥಾಪಿಸಿದರು. 1996ರ ಜನವರಿ 18ರಂದು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ:ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಶನ್: ಕಣ್ಣೀರು ಸುರಿಸಿ ಮನೆಯಿಂದ ಹೊರನಡೆದ ತನಿಷಾ
ಇನ್ನು ನಟ ಜೂ.ಎನ್‌ಟಿಆರ್ ಬಹುನಿರೀಕ್ಷಿತ 'ದೇವರ' ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಬಾಲಿವುಡ್ ನಟರಾದ ಸೈಫ್ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗ 2024ರ ಏಪ್ರಿಲ್ 5ರಂದು ತೆರೆಕಾಣಲಿದೆ. ಈ ಮೂಲಕ ಜಾಹ್ನವಿ ಕಪೂರ್ ದಕ್ಷಿಣ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಇದನ್ನೂ ಓದಿ:ಕೂಡ್ಲೂರಿನ ಮುನಿಯಪ್ಪನ ಜಾತ್ರೆಯಲ್ಲಿ ಪ್ರಾಣಿ ಬಲಿ ಬದಲು ಸಾತ್ವಿಕ ಪೂಜೆ: ಫೋಟೋಗಳು