ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ವಿಶೇಷ ಅತಿಥಿಗಳಾಗಿ ಇಬ್ಬರು ಪ್ರಮುಖ ನಟರಿಗೆ ಆಹ್ವಾನ ನೀಡಲಾಗಿತ್ತು. ಇಂದು ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಆಗಮಿಸಿದ್ದು ಅವರನ್ನು ಡಾ.ರಾಜ್ ಕುಟುಂಬದಿಂದ ಯುವ ರಾಜ್‍ಕುಮಾರ್ ಆತ್ಮೀಯವಾಗಿ ಬರಮಾಡಿಕೊಂಡರು.
ಮಂಗಳವಾರ ಸಂಜೆ ವಿಧಾನಸೌಧದೆದುರು ನಡೆಯಲಿರುವ ಅದ್ಧೂರಿ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ನಟ ರಜನಿಕಾಂತ್ ಕೂಡ ಹಾಜರಾಗಲಿದ್ದಾರೆ.
ಪುನೀತ್ ರಾಜ್‍ಕುಮಾರ್ ಹಾಗೂ ಜೂನಿಯರ್ ಎನ್ಟಿಆರ್ ಆತ್ಮೀಯ ಗೆಳೆಯರು. ಈ ಮಾತನ್ನು ಇಬ್ಬರೂ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು. ಪುನೀತ್ ಅವರನ್ನು ತಾರಕ್ ಎಂದು ಪ್ರೀತಿಯಿಂದ ಕರೆಯುತ್ತಿದ್ದರಂತೆ. ಎನ್ಟಿಆರ್ ಅವರು ಪುನೀತ್ ಅವರ ಚಕ್ರವ್ಯೂಹ ಸಿನಿಮಾದಲ್ಲಿ ಗೆಳೆಯ.. ಗೆಳೆಯಾ ಎಂಬ ಹಾಡು ಹಾಡಿ ತಮ್ಮ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದರು. ಈ ಹಾಡು ಕೂಡ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು.
ವಾರಕ್ಕೆ ಒಂದು ಸಲವಾದರೂ ಇಬ್ಬರು ಫೋನ್ ಮಾಡಿ ಮಾತನಾಡುವ ಮಟ್ಟಿಗೆ ಆತ್ಮೀಯ ಗೆಳೆಯರಾಗಿದ್ದರು. ಈ ಸ್ನೇಹವೇ ಅಪ್ಪು ನಿಧನರಾದಾಗ ಎನ್ಟಿಆರ್ ಬೆಂಗಳೂರಿಗೆ ಬಂದು ಗೆಳಯನ ಅಂತಿಮ ದರ್ಶನ ಪಡೆದಿದ್ದರು. ಈಗ ರಾಜ್ಯ ಸರ್ಕಾರ ತನ್ನ ಗೆಳೆಯನಿಗೆ ಕೊಡುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೂ ಅವರು ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ:ನಾಳೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ: ಸರ್ಕಾರದಿಂದ ಪುನೀತ್ ಕುಟುಂಬಕ್ಕೆ ಆಹ್ವಾನ