ಮುಂಬೈ: ಬಾಲಿವುಡ್ನಲ್ಲಿ ಈಗಾಗಲೇ ಜನಪ್ರಿಯಗೊಂಡಿರುವ ಹಾರರ್ ಕಾಮಿಡಿ ಸಿನಿಮಾ 'ಬೇಡಿಯಾ' ಮತ್ತು 'ಸ್ತ್ರಿ' ಮುಂದಿನ ಸೀಕ್ವೆಲ್ ನಿರ್ಮಾಣಕ್ಕೆ ಜಿಯೋ ಸ್ಟುಡಿಯೋಸ್ ಮುಂದಾಗಿದೆ. ಈ ಕುರಿತು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಘೋಷಣೆ ಹೊರಡಿಸಿರುವ ಜಿಯೋ ಸ್ಟುಡಿಯೋಸ್ ವರುಣ್ ಧವನ್ ಅಭಿನಯದ ಚಿತ್ರ 'ಬೇಡಿಯಾ' ಮತ್ತು ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ 'ಸ್ತ್ರೀ' ಚಿತ್ರದ ಮುಂದುವರಿದ ಭಾಗ ನಿರ್ಮಿಸಲಾಗುವುದು ಎಂದು ತಿಳಿಸಿದೆ.
ಈ ಕುರಿತು ವೇದಿಕೆ ಮೇಲೆ ಪ್ರಕಟಿಸಿದ ನಟ ವರುಣ್ ಧವನ್, 2025ಕ್ಕೆ 'ಬೇಡಿಯಾ' ಚಿತ್ರದ ಸಿಕ್ವೇನ್ ಹೊರ ಬರಲಿದೆ ಎಂದು ತಿಳಿಸಿದ್ದಾರೆ. ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಅದ್ಭುತ ನಟನೆ 'ಸ್ತ್ರಿ' ಎಲ್ಲರನ್ನು ಮೋಡಿ ಮಾಡಿದ್ದು, ಗಲ್ಲಾಪೆಟ್ಟಿಗೆಯನ್ನು ಸದ್ದು ಮಾಡಿತ್ತು. ಭಾರತದಲ್ಲಿ 100 ಕೋಟಿ ರೂ.ಗೂ ಹೆಚ್ಚು ಬೆಜೆಟ್ ಲಾಭ ಮಾಡಿದ್ದ ಈ ಚಿತ್ರದ ಸಿಕ್ವೇಲ್ ಆಗಸ್ಟ್ 31ರಂದು 2024ರಲ್ಲಿ ಬಿಡುಗಡೆಯಾಗಲಿದೆ. ಇದರಲ್ಲೂ ಕೂಡ ನಟ ರಾಜ್ ಕುಮಾರ್ ರಾಂ ಮತ್ತು ಶ್ರದ್ದಾ ಕಪೂರ್ ಪ್ರಮುಖ ಪಾತ್ರ ನಿರ್ವಹಣೆ ಮಾಡಲಿದ್ದಾರೆ.
ಶಾರುಖ್ ಖಾನ್ ಅಭಿನಯದ ಡುಂಕಿ ಸಿನಿಮಾ ಸೇರಿದಂತೆ 100 ಸಿನಿಮಾ ಮತ್ತು ವೆಬ್ ಸರಣಿಗಳ ಹೊರ ಬರುತ್ತಿರುವ ಕುರಿತು ಜಿಯೋ ಸ್ಟುಡಿಯೋ ಬುಧವಾರ ವಿವರಣೆ ನೀಡಿದೆ. ಜಿಯೋ ಸ್ಟುಡಿಯೋ ಮರಾಠಿ, ಹಿಂದಿ, ಬೆಂಗಾಲಿ, ಗುಜರಾತಿ, ದಕ್ಷಿಣ ಮತ್ತು ಭೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ