ಭಾರತೀಯ ಚಿತ್ರರಂಗದಲ್ಲಿ ಅನುಷ್ಕಾ ಶರ್ಮಾ ಅತ್ಯುತ್ತಮ ನಟಿಯರಲ್ಲೊಬ್ಬರು. ಅದೆಷ್ಟೋ ಅಭಿಮಾನಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡ ತಾರೆ ಈಕೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಸಹ ಸಾಕಷ್ಟು ಹೆಸರು ಮಾಡಿರುವ ಸ್ಟಾರ್. ಪತಿ ವಿರಾಟ್ ಕೊಹ್ಲಿ ಅಲ್ಲದೇ ಮತ್ತೋರ್ವ ಕ್ರಿಕೆಟ್ ಪ್ಲೇಯರ್ಗೂ ಅನುಷ್ಕಾ ಶರ್ಮಾ ಅಂದ್ರೆ ಫೇವರಿಟ್. ಹೌದು, ಕ್ರಿಕೆಟಿಗರಾದ ಜೂಲನ್ ಗೋಸ್ವಾಮಿ, ಅನುಷ್ಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ, ಜೂಲನ್ ಗೋಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ, "ಆಸ್ಕ್ ಮಿ ಎನಿಥಿಂಗ್" ಸೆಷನ್ ನಡೆಸಿದರು. ಇದರಲ್ಲಿ ಅಭಿಮಾನಿಯೊಬ್ಬರು ಜೂಲನ್ ಗೋಸ್ವಾಮಿ ಅವರಿಗೆ ಅನುಷ್ಕಾ ಶರ್ಮಾ ಬಗ್ಗೆ ಒಂದು ಪದದಲ್ಲಿ ಹೇಳುವಂತೆ ಕೇಳಿದರು. ಅದಕ್ಕೆ ಅವರು "ಫೇವರಿಟ್" ಎಂದರು. ಇದಕ್ಕೆ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿ, ಜೂಲನ್ ಗೋಸ್ವಾಮಿ ಪೋಸ್ಟ್ ಅನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡು ಹಾರ್ಟ್ ಇಮೋಜಿ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.