ಕರ್ನಾಟಕ

karnataka

ETV Bharat / entertainment

ಬೇಶರಂ ರಂಗ್​ ಬೆನ್ನಲ್ಲೇ 'ಜೂಮೇ ಜೋ ಪಠಾನ್' ರಿಲೀಸ್​ - ದೀಪಿಕಾ ಪಡುಕೋಣೆ

ಪಠಾಣ್​ ಸಿನಿಮಾದ 'ಜೂಮೇ ಜೋ ಪಠಾನ್' ಹಾಡು ಬಿಡುಗಡೆ ಆಗಿದೆ.

Jhoome Jo Pathaan
ಜೂಮೇ ಜೋ ಪಠಾನ್​

By

Published : Dec 22, 2022, 2:04 PM IST

Updated : Dec 22, 2022, 2:55 PM IST

ಬಾಲಿವುಡ್​ನ ಪಠಾಣ್​ ಸಿನಿಮಾದ ಬೇಶರಂ ರಂಗ್​ ಹಾಡು ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಚಿತ್ರ ತಯಾರಕರು 'ಜೂಮೇ ಜೋ ಪಠಾನ್' ಹಾಡು ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ಸಹ ನೃತ್ಯಗಾರರ ನಡುವೆ ದೀಪಿಕಾ ಮತ್ತು ಶಾರುಖ್​​ ಸಖತ್​ ಸ್ಟೆಪ್​ ಹಾಕಿದ್ದು, ಜೋಡಿಯ ಕೆಮಿಸ್ಟ್ರಿ ಉತ್ತಮವಾಗಿ ಮೂಡಿಬಂದಿದೆ.

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಒಳಗೊಂಡ ಈ ಟ್ರ್ಯಾಕ್ ಅನ್ನು ವಿಶಾಲ್ ಮತ್ತು ಶೇಖರ್ ಸಂಯೋಜಿಸಿದ್ದಾರೆ. ಕುಮಾರ್ ಅವರ ಸಾಹಿತ್ಯಕ್ಕೆ ಅರಿಜಿತ್ ಸಿಂಗ್, ಸುಕೃತಿ ಕಾಕರ್, ವಿಶಾಲ್ ಮತ್ತು ಶೇಖರ್ ದನಿ ಕೊಟ್ಟಿದ್ದಾರೆ. ಬಾಸ್ಕೋ, ಸೀಸರ್ (Bosco-Caesar) ಜೋಡಿ ನೃತ್ಯ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ:ಸಾರ್ವಕಾಲಿಕ 50 ಶ್ರೇಷ್ಠ ನಟರಲ್ಲಿ ಶಾರುಖ್​ ಖಾನ್... ಈ ಗೌರವಕ್ಕೆ ಪಾತ್ರರಾದ ಭಾರತದ ಏಕೈಕ ನಟ

ಇನ್ನೂ ಕಳೆದ ಸೋಮವಾರ ಬಿಡುಗಡೆ ಆದ ಬೇಶರಂ ರಂಗ್ ಹಾಡಿನ ವಿವಾದ ತೀವ್ರವಾಗುತ್ತಿದೆ. ಹಾಡಿನಲ್ಲಿ ನಟಿಯ ವೇಷಭೂಷಣ, ಕೇಸರಿ ಬಿಕಿನಿ ಸಂಬಂಧ ವಾದ ವಿವಾದ ನಡೆಯುತ್ತಿದೆ. ಬಾಯ್ಕಾಟ್ ಪಠಾಣ್ ಟ್ರೆಂಡ್​ ಜೋರಾಗಿದೆ.

Last Updated : Dec 22, 2022, 2:55 PM IST

ABOUT THE AUTHOR

...view details