ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'ನ 'ಜೀ ರಹೇ ಥಾ ಹಮ್' (Jee rahe the hum) ಎಂಬ ಲವ್ ಸಾಂಗ್ ರಿಲಿಸ್ ಅಗಿದೆ. ಸಲ್ಮಾನ್ ಖಾನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಈ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸಹ ನಟರಾದ ಪೂಜಾ ಹೆಗ್ಡೆ, ರಾಘವ್ ಜುಯಲ್, ಜಸ್ಸಿ ಗಿಲ್ ಮತ್ತು ಸಿದ್ಧಾರ್ಥ್ ನಿಗಮ್ ಅವರೊಂದಿಗೆ ಸಲ್ಮಾನ್ ಖಾನ್ ಬಹಳ ಸಂತೋಷವಾಗಿ ಕಾಣಿಸಿಕೊಂಡಿದ್ದಾರೆ.
ಈ ಹಾಡಿನಲ್ಲಿ ನಟ ಸಲ್ಮಾನ್ ಖಾನ್ ಉದ್ದ ಕೂದಲು ಬಿಟ್ಟಿದ್ದಾರೆ. ಪೂಜಾ ಹೆಗ್ಡೆ ಅವರನ್ನು ಮೆಚ್ಚಿಸುವ ಹಾಡಿದು. ಈ ಹಾಡಿನಲ್ಲಿ ನಟ ನಟಿಗಾಗಿ ನೃತ್ಯ ಮಾಡುತ್ತಾನೆ. ಸಲ್ಮಾನ್ ಮತ್ತು ಪೂಜಾ ರೊಮ್ಯಾಂಟಿಕ್ ಡೇಟ್ ಮಾಡುತ್ತಿರುವುದು ಹಾಡಿನಲ್ಲಿ ಕಂಡುಬರುತ್ತದೆ
ಸಲ್ಮಾನ್ ಖಾನ್ ಸ್ವತಃ ಈ ಹಾಡನ್ನು ಹಾಡಿದ್ದು, ಅಮಲ್ ಮಲಿಕ್ ಸಂಗೀತ ರಚಿಸಿದ್ದು, ಶಬ್ಬೀರ್ ಅಹಮದ್ ಅವರ ಸಾಹಿತ್ಯವಿದೆ. ಈ ಹಾಡು ಸಲ್ಮಾನ್ ಅಭಿಮಾನಿಗಳಿಗೆ ಹ್ಯಾಂಗೋವರ್ ಹಾಡಿನ ನೆನಪನ್ನು ತಂದುಕೊಟ್ಟಿದೆ. ಕಿಸಿ ಕಾ ಭಾಯಿ ಕಿಸಿ ಕಿ ಜಾನ್‌ನ ಹಾಡುಗಳು ಚಿತ್ರದ ಹಿಟ್‌ನ ಸುಳಿವು ನೀಡಿದೆ.
ಈಗಾಗಲೇ ಅತ್ಯಂತ ಜನಪ್ರಿ ಆಗಿರುವ ನೈಯೋ ಲಗ್ದಾ ಮತ್ತು ಬಿಲ್ಲಿ ಬಿಲ್ಲಿ ಹಾಡಿನ ನಂತರ ಬಿಡುಗಡೆ ಆದ ಹಾಡಿದು. ಜೀ ರಹೇ ಥಾ ಹಮ್ (ಪ್ರೀತಿಯಲ್ಲಿ ಬೀಳುವುದು) ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಸಿನಿಮಾದ ಮೂರನೇ ಹಾಡು. ಈ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಅಲ್ಲದೇ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಸೇರಿದಂತೆ ತಾರಾಗಣವಿದೆ. ಈ ಚಲನಚಿತ್ರವು ಇದೇ ಈದ್ ಸಂದರ್ಭ ಥಿಯೇಟರ್ಗಳಲ್ಲಿ ತೆರೆ ಕಾಣಲಿದೆ.