'ಸಂಗೀತಕ್ಕೆ ಯಾವುದೇ ಗಡಿಯಿಲ್ಲ'.. ಎಲ್ಲೆಲ್ಲೂ ಸಂಗೀತದ ನಾದಕ್ಕೆ ತಲೆ ದೂಗುವವರು ಇದ್ದೇ ಇರ್ತಾರೆ. ಪ್ಯಾರಿಸ್‌ನಲ್ಲಿ ನಡೆದ ಲೂಯಿ ವಿಟಾನ್ ಶೋನಲ್ಲಿ ರ‍್ಯಾಪರ್ ಜೇ-ಝಡ್ ಅವರ ಇತ್ತೀಚಿನ ಪ್ರದರ್ಶನವು ಇದನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ. ಜೂನ್ 20 ರಂದು ಪ್ಯಾರೀಸ್ನಲ್ಲಿ ನಡೆದ ಪುರುಷರ ಫ್ಯಾಷನ್ ಶೋನಲ್ಲಿ ಅಂತಾರಾಷ್ಟ್ರೀಯ ಸಂಗೀತಗಾರ, ರ‍್ಯಾಪರ್ ಪಂಜಾಬಿ ಎಂಸಿ ಅವರ ಮುಂಡಿಯನ್ ತೋ ಬಾಚ್ ಕೆ ಹಾಡಿನ ರಿಮೀಕ್ಸ್ ಅನ್ನು ಪ್ರದರ್ಶಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟ್ವೀಟ್ ಕ್ಯಾಪ್ಶನ್ ಹೀಗಿದೆ..: "#LVMenSS24 ಗಾಗಿ @Pharrell ರ ಚೊಚ್ಚಲ ಸಂಗ್ರಹಣೆಯಲ್ಲಿ ಅವರ ಅಭಿನಯಕ್ಕಾಗಿ ಪಂಜಾಬಿ MC ನೈಟ್ರೈಡರ್ ರೀಮಿಕ್ಸ್‌ನೊಂದಿಗೆ #JayZ ಅವರನ್ನು ಪ್ರಶಂಸಿಸಲು ನಾವು ಸ್ವಲ್ಪ ಸಮಯ ತೆಗೆದುಕೊಳ್ಳಬಹುದೇ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, "ಪ್ಯಾರೀಸ್ನಲ್ಲಿ @LouisVuitton ಪ್ರದರ್ಶನದಲ್ಲಿ ಜೇ-ಝಡ್ ಮುಂಡಿಯನ್ ತೋ ಬಾಚ್ ಕೆ ಹಾಡನ್ನು ಪ್ರದರ್ಶಿಸಿದ್ದಾರೆ. ಇದು ಪಂಜಾಬಿ ಸಂಸ್ಕೃತಿ" ಎಂದು ಅವರು ಬಣ್ಣಿಸಿದ್ದಾರೆ.
ರ‍್ಯಾಪರ್ ಮತ್ತು ಫ್ಯಾಶನ್ ಡಿಸೈನರ್ ಫಾರೆಲ್ ವಿಲಿಯಮ್ಸ್ ಐಷಾರಾಮಿ ಫ್ಯಾಷನ್ ಹೌಸ್ ಎಲ್ವಿಯ ಸೃಜನಶೀಲ ನಿರ್ದೇಶಕರಾಗಿ ತಮ್ಮ ಚೊಚ್ಚಲ ಸಂಗ್ರಹವನ್ನು ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳಾದ ರಿಹಾನ್ನಾ, A$AP ರಾಕಿ, ಬೆಯೋನ್ಸ್, ಝೆಂಡಾಯಾ, ಲಾ ರೋಚ್, ಕಿಮ್ ಕಾರ್ಡಶಿಯಾನ್ ಮತ್ತು ಹೆಚ್ಚಿನ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿ ಪ್ರದರ್ಶನಕ್ಕೆ ಮೆರುಗು ತಂದದ್ದು ವಿಶೇಷವಾಗಿತ್ತು.