ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಈ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಕೆಲ ದಿನಗಳು ಬಾಕಿ ಇವೆ. ಚಿತ್ರತಯಾರಕರು ವಿಭಿನ್ನ ಪ್ರಚಾರ ಕೈಗೊಳ್ಳುವ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದ್ದಾರೆ.
ಜಿಂದಾ ಬಂದಾ ಮೇಕಿಂಗ್ ವಿಡಿಯೋ: ಇಂದು ಚಿತ್ರತಂಡ ಜಿಂದಾ ಬಂದಾ ಮೇಕಿಂಗ್ ವಿಡಿಯೋ ಅನಾವರಣಗೊಳಿಸಿದೆ. ಜವಾನ್ ಮೊದಲ ಹಾಡು ಜಿಂದಾ ಬಂದಾ ಜುಲೈ 31 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಯಿತು. ಹಾಡು ಸಿನಿಮಾ ಕುರಿತ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಇದೀಗ ಹಾಡಿನ ತೆರೆಮರೆ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ಕುರಿತ ಅಭಿಮಾನಿಗಳ ಕಾತರ ಹೆಚ್ಚಿಸಿದ್ದಾರೆ. ಜಿಂದಾ ಬಂದಾ ಮೇಕಿಂಗ್ ವಿಡಿಯೋ ಅನಾವರಣ ಸಿನಿಮಾ ಪ್ರಮೋಶನ್ನ ಒಂದು ಭಾಗ. ಪ್ರಚಾರದ ವಿಡಿಯೋದಲ್ಲಿ ನಿರ್ದೇಶಕ ಅಟ್ಲೀ ಮತ್ತು ನಾಯಕ ನಟ ಎಸ್ಆರ್ಕೆ ಹಂಚಿಕೊಂಡಿರುವ ಪ್ರೀತಿಯ ಕ್ಷಣ ಎಲ್ಲರ ಗಮನ ಸೆಳೆದಿದೆ.
ತೆರೆಮರೆಯ ಪಕ್ಷಿನೋಟ: 1 ನಿಮಿಷ 39 ಸೆಕೆಂಡ್ಸ್ ಇರುವ ವಿಡಿಯೋ, ಆಡಿಯೋ ರೆಕಾರ್ಡರ್ ಮತ್ತು ನೃತ್ಯಗಾರರಿಂದ ಆರಂಭವಾಗುತ್ತದೆ. ಡ್ಯಾನ್ಸರ್ಸ್ ತಮ್ಮ ನೃತ್ಯಕ್ಕೆ ಪೂರ್ವಾಭ್ಯಾಸ ಮಾಡುತ್ತಿರುವ ದೃಶ್ಯವಿದು. ವಸ್ತ್ರವಿನ್ಯಾಸಕರಿಂದ ಹಿಡಿದು ತಾಂತ್ರಿಕ ಸಿಬ್ಬಂದಿವರೆಗೆ ಎಲ್ಲರನ್ನು ಒಳಗೊಂಡಿದೆ. ಮೂರು ಭಾಷೆಗಳಲ್ಲಿ ಮೊದಲ ಬಾರಿಗೆ ಎಸ್ಆರ್ಕೆ ಲಿಪ್ ಸಿಂಕ್ ಮಾಡಿರುವ ಹಾಡಿನ ತೆರೆಮರೆಯ ಪಕ್ಷಿನೋಟವಿದು.
ನಟ ನಿರ್ದೇಶಕನ ಪ್ರೀತಿಯ ಕ್ಷಣ: ಮೇಕಿಂಗ್ ವಿಡಿಯೋದ ಅರ್ಧ ನಿಮಿಷದಲ್ಲಿ ನಿರ್ದೇಶಕ ಮತ್ತು ನಟನ ಆತ್ಮೀಯ ಕ್ಷಣಗಳನ್ನು ಕಾಣಬಹುದು. ಲೈಫ್ಟೈಮ್ ಮೂಮೆಂಟ್ ಎಂದು ಹೇಳುತ್ತಾ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಡೈರೆಕ್ಷರ್ ಅಟ್ಲೀ ಕುಮಾರ್ ಅವರು ಇಂಡಿಯನ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಅಪ್ಪಿಕೊಂಡು ಧನ್ಯವಾದ ಹೇಳಿರುವ ದೃಶ್ಯ ಮನಮುಟ್ಟುವಂತಿದೆ. ಜವಾನ್ ಗಣ್ಯರು ಪರಸ್ಪರ ಆಲಿಂಗಿಸುತ್ತಿದ್ದಂತೆ ಸುತ್ತಲೂ ಹರ್ಷೋದ್ಘಾರ ಕೇಳಿ ಬಂದಿದೆ.
ಇದನ್ನೂ ಓದಿ:Adipurush: ನೀವಿದ್ದಲ್ಲೇ ನೋಡಿ 'ಆದಿಪುರುಷ್' ಸಿನಿಮಾ: ಈ OTT ವೇದಿಕೆಗಳಲ್ಲಿ ಲಭ್ಯ!
2023ರ ಜನವರಿಯಲ್ಲಿ ಪಠಾಣ್ ಚಿತ್ರ ತೆರೆಕಂಡಿತು. ಇದೇ ಸಾಲಿನಲ್ಲಿ ಬಿಡುಗಡೆ ಆಗುತ್ತಿರುವ ಶಾರುಖ್ ಅವರ ಎರಡನೇ ಚಿತ್ರವಿದು. ಎಸ್ಆರ್ಕೆ ಅಭಿನಯದ ಎರಡನೇ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಎಸ್ಆರ್ಕೆ ದಂಪತಿಯ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಈ ಸಿನಿಮಾಗೆ ಬಂಡವಾಳ ಹೂಡಿದೆ. ಶಾರುಖ್ ಅಲ್ಲದೇ ತಮಿಳಿನ ದಿಗ್ಗಜರಾದ ವಿಜಯ್ ಸೇತುಪತಿ, ನಯನತಾರ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿಧಿ ಡೋಗ್ರಾ ಕೂಡ ಅಭಿನಯಿಸಿದ್ದಾರೆ. ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಯುಎಸ್ನಲ್ಲಿ ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ.
ಇದನ್ನೂ ಓದಿ:ಗರ್ಭಪಾತದ ಬಗ್ಗೆ ಬಹಿರಂಗಪಡಿಸಿದ ರಾಣಿ ಮುಖರ್ಜಿ.. 5 ತಿಂಗಳು ಗರ್ಭದಲ್ಲಿದ್ದ ಶಿಶು ಇನ್ನಿಲ್ಲವೆಂದು ತಿಳಿದ ನಟಿಯ ಪರಿಸ್ಥಿತಿ ಹೇಗಿತ್ತು?