ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಜವಾನ್ ಶೂಟಿಂಗ್ ಕೊನೆಯ ಹಂತದಲ್ಲಿದೆ. ನಿರ್ದೇಶಕ ಅಟ್ಲೀ ಕುಮಾರ್ ನೇತೃತ್ವದ ಚಿತ್ರ ತಂಡವು ಇತ್ತೀಚೆಗೆ ಮುಂಬೈನಲ್ಲಿ ಒಂಬತ್ತು ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ. ತಮಿಳಿನ ಬಹು ಬೇಡಿಕೆ ನಟಿ ನಯನತಾರಾ ಮುಂಬೈನಲ್ಲಿ ನಡೆದ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು.
ರಾಜಸ್ಥಾನದಲ್ಲಿ ಮುಂದಿನ ಶೂಟಿಂಗ್?ಮುಂಬೈನಲ್ಲಿ ನಡೆದ ಶೂಟಿಂಗ್ನಲ್ಲಿ ಚಿತ್ರ ತಂಡವು ಶಾರುಖ್ ಖಾನ್ ಮತ್ತು ನಯನತಾರಾ ಅವರನ್ನೊಳಗೊಂಡ ಕೆಲ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿದಿದೆ. ವರದಿಗಳ ಪ್ರಕಾರ, ಲೇಡಿ ಸೂಪರ್‌ಸ್ಟಾರ್ ಅವರು ಎಸ್‌ಆರ್‌ಕೆ ಅವರೊಂದಿಗಿನ ಕೆಲ ಸೀನ್ಗಳಲ್ಲಿ ಬಹಳ ಖುಷಿ ಪಟ್ಟು ಅಭಿನಯಿಸಿದ್ದಾರೆ. ಈ ದೃಶ್ಯಗಳು ಪ್ರೇಕ್ಷಕರ ಮನ ಮುಟ್ಟಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ನಟಿ ನಯನತಾರಾ ತಮಿಳುನಾಡಿಗೆ ವಾಪಸ್ ಆಗಿದ್ದು, ಶೀಘ್ರದಲ್ಲೇ ರಾಜಸ್ಥಾನದ ಸೆಟ್‌ಗೆ ಮರಳಲಿದ್ದಾರೆ. ಮುಂದಿನ ಹಂತದ ಶೂಟಿಂಗ್ ಡೇಟ್ಸ್ ಅನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಶೀಘ್ರದಲ್ಲೇ ಜವಾನ್ ಚಿತ್ರೀಕರಣಕ್ಕಾಗಿ ಚಿತ್ರತಂಡ ರಾಜಸ್ಥಾನಕ್ಕೆ ಹೋಗಲಿದೆ ಎನ್ನುವ ಮಾಹಿತಿ ಇದೆ.
ಸೌತ್ ನಿರ್ದೇಶಕರೊಂದಿಗೆ ಎಸ್‌ಆರ್‌ಕೆ ಮೊದಲ ಸಿನಿಮಾ: 'ಜವಾನ್' ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ದೊಡ್ಡ ಪ್ರತಿಭೆಗಳ ಸಿನಿಮಾ. ಎಸ್‌ಆರ್‌ಕೆ ಮತ್ತು ನಯನತಾರಾ ಜೊತೆಗೆ, ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮೂರು ದಶಕಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ದಕ್ಷಿಣ ಚಿತ್ರರಂಗದ ನಿರ್ದೇಶಕರ ಜೊತೆ ಕೈಜೋಡಿಸಿರುವುದರಿಂದ ಈ ಸಿನಿಮಾ ಶಾರುಖ್ ಖಾನ್ ಅವರಿಗೆ ಬಹಳ ವಿಶೇಷವಾಗಿದೆ. ನಿರ್ದೇಶಕ ಅಟ್ಲೀ ಕೂಡ ಎಸ್‌ಆರ್‌ಕೆ ಜೊತೆಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಬಹಳ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ತೆರೆ ಮೇಲೆ ತರುವುದಾಗಿ ಹೇಳಿ ಕೊಂಡಿದ್ದಾರೆ.