ಕರ್ನಾಟಕ

karnataka

ETV Bharat / entertainment

Jawan Prevue: 'ಜವಾನ್'​ ಪ್ರಿವ್ಯೂ ರಿಲೀಸ್​; ಕಿಂಗ್​ ಖಾನ್​ ಹೊಸ ಅವತಾರಕ್ಕೆ ಫ್ಯಾನ್ಸ್​ ಫಿದಾ! - ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​

ಬಾಲಿವುಡ್​ ಬಾದ್ ​ಶಾ ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ 'ಜವಾನ್​' ಸಿನಿಮಾದ ಪ್ರಿವ್ಯೂ ಇಂದು ಬಿಡುಗಡೆಯಾಗಿದೆ.

Jawan
ಜವಾನ್​

By

Published : Jul 10, 2023, 12:37 PM IST

ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ 'ಜವಾನ್​' ಸಿನಿಮಾದ ಪ್ರಿವ್ಯೂ ಇಂದು ಬಿಡುಗಡೆಯಾಗಿದೆ. 2 ನಿಮಿಷಗಳ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. 'ಜವಾನ್​' ಅಪ್​ಡೇಟ್​ಗಾಗಿ ಕಾಯುತ್ತಿದ್ದ ಸಿನಿ ಪ್ರೇಕ್ಷಕರು ಕಿಂಗ್​ ಖಾನ್​ ಲುಕ್​ಗೆ ಫಿದಾ ಆಗಿದ್ದಾರೆ. ಚಿತ್ರದ ಸಂಭಾಷಣೆಗಳು ಮತ್ತು ಸಾಹಸ ದೃಶ್ಯಗಳು ರೋಚಕವಾಗಿದೆ.

ಆ್ಯಕ್ಷನ್​ ಪ್ಯಾಕ್ಡ್​ 'ಜವಾನ್​' ಪ್ರಿವ್ಯೂ ಜನರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದಿದೆ. ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಸೀರೆಯಲ್ಲಿ ತಮ್ಮ ಹೋರಾಟದ ದೃಶ್ಯದಿಂದ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಕಿಂಗ್ ಖಾನ್ ಬಹು ತೀವ್ರವಾದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್​ಗಳಲ್ಲಿ ಶಾರುಖ್​ ಗಾಯಗೊಂಡು ಮುಖವನ್ನು ಪೂರ್ತಿ ಬ್ಯಾಂಡೇಜ್‌ನಿಂದ ಮುಚ್ಚಿರುವುದನ್ನು ನೋಡುತ್ತೇವೆ. ಆದರೆ ಬಿಡುಗಡೆಯಾದ ಪ್ರಿವ್ಯೂನಲ್ಲಿ ಅನೇಕ ಅವತಾರದಲ್ಲಿ ಕಿಂಗ್​ ಖಾನ್​ ಕಾಣಿಸಿಕೊಂಡಿದ್ದಾರೆ.

'ಜವಾನ್'​ ಪ್ರಿವ್ಯೂ ರಿಲೀಸ್

ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಸಣ್ಣದಾಗಿ ಕಾಣಿಸಿಕೊಂಡರು. ಒಂದು ನಿರ್ದಿಷ್ಟ ದೃಶ್ಯದಲ್ಲಿ, ನಯನತಾರಾ ತೀವ್ರವಾದ ಹೊಡೆದಾಟದ ವೇಳೆ ಶಾರುಖ್ ಅವರನ್ನು ಬೆನ್ನಟ್ಟುವುದನ್ನು ಕಾಣಬಹುದು.​ ಪ್ರಿವ್ಯೂ ಕೊನೆಯಲ್ಲಿ ಶಾರುಖ್​ ಬೋಳು ತಲೆಯ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೂ 2 ನಿಮಿಷದ ಈ ವಿಡಿಯೋ ಎಲ್ಲರನ್ನೂ ಬೆರಗುಗೊಳಿಸಿದೆ. ನಿರ್ದೇಶಕ ಅಟ್ಲಿ ಪ್ರಸ್ತುತಪಡಿಸಿದ ರೀತಿ ಸಿನಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.

ಇದನ್ನೂ ಓದಿ:ರವಿತೇಜ- ಗೋಪಿಚಂದ್ ಕಾಂಬಿನೇಷನ್​ನಲ್ಲಿ 4ನೇ ಸಿನಿಮಾ ಫಿಕ್ಸ್​; ಮೋಷನ್​ ಪೋಸ್ಟರ್​ ಔಟ್​

ಕಿಂಗ್ ಖಾನ್ ಅವರ ಜವಾನ್​​ ಸಿನಿಮಾ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ವರ್ಷದ ಆರಂಭದಲ್ಲಿ ಶಾರುಖ್​ ನಟನೆಯ ಪಠಾಣ್​ ಸಿನಿಮಾ ತೆರೆಕಂಡಿದೆ. ಹಲವು ವಿವಾದಗಳನ್ನು ಎದುರಿಸಿ, ಬಾಯ್ಕಾಟ್​ ಭಯದ ನಡುವೆಯೇ ರಿಲೀಸ್​ ಆದ ಈ ಸಿನಿಮಾದ ಯಶಸ್ಸು ಮಾತ್ರ ಅಭೂತಪೂರ್ವ.

ಶಾರುಖ್​ ಖಾನ್​ ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಬಂದ ಸಿನಿಮಾ 1,000 ಕೋಟಿ ರೂ.ನ ಕ್ಲಬ್​ ಸೇರುವಲ್ಲಿ ಯಶಸ್ವಿಯಾಗಿದೆ. ಸೂಪರ್​ ಹಿಟ್ ಪಠಾಣ್​​ ಬಳಿಕ ಈ ಸಾಲಿನಲ್ಲೇ ಬಿಡುಗಡೆ ಆಗುತ್ತಿರುವ ಶಾರುಖ್​ ಅವರ ಮತ್ತೊಂದು ಬಿಗ್​ ಬಜೆಟ್​ ಚಿತ್ರವಿದು. ಕಂಪ್ಲೀಟ್​ ಆ್ಯಕ್ಷನ್ ಎಂಟರ್‌ಟೈನ್​ ಸಿನಿಮಾ ಇದು. ಶಾರುಖ್​ ಖಾನ್ ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಈ ಸಿನಿಮಾ ನಿರ್ಮಿಸಿದ್ದು, ಸೌತ್​ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶಿಸಿದ್ದಾರೆ.

ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್​ ಅಲ್ಲದೇ ಡಂಕಿ ಸಿನಿಮಾದಲ್ಲೂ ಶಾರುಖ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2023ರ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಶಾರುಖ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಈ ಎರಡೂ ಸಿನಿಮಾಗಳ ನಾನ್ ಥಿಯೇಟ್ರಿಕಲ್ ರೈಟ್ಸ್ 480 ಕೋಟಿ ರೂ.ಗೆ ಮಾರಾಟವಾಗಿದೆಯಂತೆ. ಮತ್ತೊಂದೆಡೆ ಸಲ್ಮಾನ್​ ಮುಖ್ಯಭೂಮಿಕೆಯ ಟೈಗರ್ 3 ಚಿತ್ರದಲ್ಲಿ ಶಾರುಖ್​ ವಿಶೇಷ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ:Bawaal trailer: ವರುಣ್ ಧವನ್- ಜಾಹ್ನವಿ ಕಪೂರ್ ನಟನೆಯ 'ಬವಾಲ್' ಟ್ರೇಲರ್​ ಔಟ್​

ABOUT THE AUTHOR

...view details