ಕರ್ನಾಟಕ

karnataka

ETV Bharat / entertainment

ಶಾರುಖ್​ ಸ್ಟಾರ್​​ಡಮ್​ ಪವರ್​​: ಚಿತ್ರರಂಗದವರ ಹುಬ್ಬೇರಿಸಿದ 'ಜವಾನ್' ಕಲೆಕ್ಷನ್!

Jawan movie collection: ವಿಶ್ವದೆಲ್ಲೆಡೆಯ ಚಿತ್ರಮಂದಿರಗಳಲ್ಲಿ ಜವಾನ್​ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ.

By ETV Bharat Karnataka Team

Published : Sep 20, 2023, 11:43 AM IST

Jawan movie collection
'ಜವಾನ್' ಕಲೆಕ್ಷನ್

ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಮತ್ತು ದಕ್ಷಿಣ ಚಿತ್ರರಂಗದ ಸ್ಟಾರ್ ಡೈರೆಕ್ಟರ್​ ಅಟ್ಲೀ ಕಾಂಬಿನೇಶನ್​ನಲ್ಲಿ ಮೂಡಿಬಂದ ಜವಾನ್​ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಲವು ದಾಖಲೆಗಳನ್ನು ಮುರಿದಿರುವ ಜವಾನ್​ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೊದಲ ದಿನಗಳಿಗೆ ಹೋಲಿಸಿದರೆ ಅಂಕಿಅಂಶ ಕಡಿಮೆ ಎನಿಸಿದರೂ, ಒಟ್ಟು ಕಲೆಕ್ಷನ್​ ಎಲ್ಲರ ಹುಬ್ಬೇರಿಸಿದೆ.

ಬಹುನಿರೀಕ್ಷೆಗಳೊಂದಿಗೆ ಸಿನಿಮಾ ಸೆಪ್ಟೆಂಬರ್​ 7 ರಂದು ತೆರೆಕಂಡಿತು. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ, 13 ದಿನಗಳಲ್ಲಿ 500 ಕೋಟಿ ರೂ.ನ ಕ್ಲಬ್​​ ಸೇರುವಲ್ಲಿ ಯಶ ಕಂಡಿತು. 14ನೇ ದಿನ ಅಂದರೆ ಇಂದಿನ ಕಲೆಕ್ಷನ್ ಸಂಖ್ಯೆ ಕೊಂಚ ಇಳಿಕೆ ಆಗಲಿದೆ ಎಂದು ಆರಂಭಿಕ ಅಂದಾಜು ಸೂಚಿಸಿದೆ. ವಾರದ ದಿನಗಳಾದರೂ ಸಿನಿಮಾ ಪ್ರದರ್ಶನ ಉತ್ತಮವಾಗಿ ಮುಂದುವರಿದಿದೆ.

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ಪ್ರಕಾರ, ಜನಾನ್​ ಸಿನಿಮಾ ತೆರೆಕಂಡು 14ನೇ ದಿನದ (ಇಂದು, ಬುಧವಾರ) ಕಲೆಕ್ಷನ್​ ಅಂಕಿಅಂಶ ಕೊಂಚ ಇಳಿಮುಖ ಆಗಲಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಇಂದು 12 ಕೋಟಿ ರೂ. ಕಲೆಕ್ಷನ್​ ಮಾಡುವ ಸಾಧ್ಯತೆ ಇದೆ. ಹಾಗಾದಲ್ಲಿ 14 ದಿನಕ್ಕೆ ಸಿನಿಮಾದ ಒಟ್ಟು ಸಂಪಾದನೆ 520.06 ಕೋಟಿ ರೂ. (ಇದು ಕೇವಲ ದೇಶೀಯ ಮಾರುಕಟ್ಟೆಯ ವ್ಯವಹಾರ) ಆಗಲಿದೆ. ಇನ್ನೂ ಸಿನಿಮಾ ಮಂಗಳವಾರದಂದು ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 13 ಕೋಟಿ ರೂ. ಸಂಗ್ರಹಿಸಿದೆ. ಚಿತ್ರ ಒಟ್ಟು 12 ದಿನಗಳಲ್ಲಿ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 883.68 ಕೋಟಿ ರೂ. ಕಲೆಕ್ಷನ್​ ಮಾಡಿದೆ ಎಂದು ಚಿತ್ರತಯಾರಕರು ಘೋಷಿಸಿದ್ದಾರೆ. ಬಾಹುಬಲಿ, ಗದರ್​ 2, ಪಠಾಣ್​ ಬಳಿಕ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ:ಮೆಗಾಸ್ಟಾರ್​ ಚಿರಂಜೀವಿ ಹೊಸ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್? ಸಚಿತ್ರ ಮಾಹಿತಿ

ಇದೇ ಮೊದಲ ಬಾರಿಗೆ ಸೌತ್​ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್​ ಬಾಲಿವುಡ್​ ಕಿಂಗ್​ ಖಾನ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಎಸ್​ಆರ್​ಕೆ ಹೊರತುಪಡಿಸಿ, ಸೌತ್​ ಸೂಪರ್​ ಸ್ಟಾರ್​ಗಳಾದ ವಿಜಯ್​ ಸೇತುಪತಿ, ನಯನತಾರಾ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನೂ ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ನಟಿಸಿದ್ದು ಅತಿಥಿ ಪಾತ್ರದಲ್ಲಾದರೂ, ಸಖತ್​ ಸದ್ದು ಮಾಡಿದ್ದಾರೆ. ಚಿತ್ರಕ್ಕೆ ಶಾರುಖ್​ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​​ ಬ್ಯಾನರ್​ ಬಂಡವಾಳ ಹೂಡಿದೆ. ಯುವ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಅವರ ಸಂಗೀತ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

ಇದನ್ನೂ ಓದಿ:'ಕೆಜಿಎಫ್​ 2' ಹಿಂದಿಕ್ಕಿ ದೇಶದ 4ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದ 'ಜವಾನ್​'

ಜವಾನ್​​ ಯಶಸ್ಸಿನೊಂದಿಗೆ ಶಾರುಖ್​ ಮತ್ತೊಮ್ಮೆ ತಮ್ಮ ಸ್ಟಾರ್​ಡಮ್​ ಅನ್ನು ಸಾಬೀತುಪಡಿಸಿದರು. ನಾಲ್ಕು ವರ್ರಷಗಳ ಬ್ರೇಕ್​ ಬಳಿಕ ಬಂದ ಪಠಾಣ್​ ಸೂಪರ್​ ಡೂಪರ್​ ಹಿಟ್ ಆಯಿತು. ಸದ್ಯ ಜವಾನ್​ ಸದ್ದು ಮಾಡುತ್ತಿದೆ. ಈ ವರ್ಷದ ಕೊನೆಯಲ್ಲಿ ಡಂಕಿ ಸಿನಿಮಾ ತೆರೆ ಕಾಣಲಿದೆ. ರಾಜ್​ಕುಮಾರ್​ ಹಿರಾನಿ ಅವರ ಡಂಕಿ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ.

ABOUT THE AUTHOR

...view details