ಕರ್ನಾಟಕ

karnataka

ETV Bharat / entertainment

Jawan collection: ಜವಾನ್​ ಮೊದಲ ದಿನ 100 ಕೋಟಿ ದಾಟುತ್ತಾ - ಪಠಾಣ್​ ದಾಖಲೆ ಪುಡಿಗಟ್ಟುತ್ತಾ? - ವಿಜಯ್​ ಸೇತುಪತಿ

SRK Jawan Collection Predictions: ಜವಾನ್ ಸಿನಿಮಾ​ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಲಿದೆ ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸಿದ್ದಾರೆ.

jawan collection
ಜವಾನ್ ಕಲೆಕ್ಷನ್​​

By ETV Bharat Karnataka Team

Published : Sep 7, 2023, 12:42 PM IST

ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ಬಹುನಿರೀಕ್ಷಿತ 'ಜವಾನ್'​ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಅಭಿಮಾನಿಗಳು ಬಹಳ ಉತ್ಸಾಹದಿಂದ ಮೆಚ್ಚಿನ ನಟನ ಸಿನಿಮಾ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಜೋರಾಗಿದೆ. ಎಸ್​ಆರ್​ಕೆ ತಮ್ಮ ಕನಸಿನ ಓಟ ಪ್ರಾರಂಭಿಸಿದ್ದಾರೆ.

ಜವಾನ್​ ಸಿನಿಮಾ ಕ್ರೇಜ್​​ ನೋಡಿದ್ರೆ, ಬಾಲಿವುಡ್​ ಸೂಪರ್​ ಸ್ಟಾರ್ ಶಾರುಖ್​ ಖಾನ್​​ ಮತ್ತೊಮ್ಮೆ ಬಿಗ್​ ಬ್ಲಾಕ್​ಬಸ್ಟರ್​ ಸಿನಿಮಾ ನೀಡುವಂತೆ ತೋರುತ್ತಿದೆ. ಇಂದು ಸೋಷಿಯಲ್​ ಮೀಡಿಯಾದಲ್ಲಿ ಜವಾನ್​ ಟ್ರೆಂಡಿಂಗ್​ನಲ್ಲಿದೆ. ಅಭಿಮಾನಿಗಳ ಉತ್ಸಾಹ ನೋಡಿದ್ರೆ ಸಿನಿಮಾ ಮೊದಲ ದಿನವೇ 100 ಕೋಟಿ ದಾಟೋದು ಪಕ್ಕಾ ಎಂಬಂತೆ ತೋರುತ್ತಿದೆ.

ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಭರ್ಜರಿಯಾಗಿ ನಡೆದಿದ್ದು, ಕಲೆಕ್ಷನ್​ ಮೇಲೆ ಎಲ್ಲರ ಗಮನ ಹರಿದಿದೆ. ಸಿನಿಮಾ ವಿಶ್ಲೇಷಕರು, ಜವಾನ್​ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಲಿದೆ ಎಂದು ಅಂದಾಜಿಸಿದ್ದಾರೆ. ಆದ್ರೆ ಸದ್ಯದ ಸಿನಿಮಾ ಕ್ರೇಜ್​ ಗಮನಿಸಿದ್ರೆ ಬಾಕ್ಸ್​ ಆಫೀಸ್​ ಲೆಕ್ಕಾಚಾರ ಮತ್ತಷ್ಟು ಏರುವ ಸಾಧ್ಯತೆ ಇದೆ.

ಸಿನಿ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್​ ಮಾಹಿತಿ ಪ್ರಕಾರ, ಜವಾನ್​ ಸಿನಿಮಾ ಭಾರತದಲ್ಲಿ 75 ಕೋಟಿ ರೂ. ದಾಟುವ ಸಾಧ್ಯತೆ ಇದೆ. ಸೌತ್​​ ಸ್ಟಾರ್​ ಡೈರೆಕ್ಟರ್​ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದಿರುವ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾವು, ಹಿಂದಿ ಚಿತ್ರರಂಗದಲ್ಲೇ ದಿ ಬೆಸ್ಟ್ ಓಪನರ್​ ಸಿನಿಮಾವಾಗಿ (ತೆರೆ ಕಂಡ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ)​​​ ಹೊರಹೊಮ್ಮಿರುವ ಪಠಾಣ್​ ದಾಖಲೆಯನ್ನು ಪುಡಿಗಟ್ಟಲಿದೆ ಎಂದು ಸಿನಿ ವಿಶ್ಲೇಷಕರು ಅಂದಾಜಿಸಿದ್ದಾರೆ. ಗಮನಾರ್ಹ ವಿಷಯವೆಂದರೆ ಪಠಾಣ್​ ಕೂಡ ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್​ ಅವರ ಸಿನಿಮಾವೇ. ಪಠಾಣ್​​ ತೆರೆಕಂಡ ಮೊದಲ ದಿನ ದೇಶೀಯ ಮಾರುಕಟ್ಟೆಯಲ್ಲಿ 67 ಕೋಟಿ ರೂ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 105 ಕೋಟಿ ರೂ. ಕಲೆಕ್ಷನ್​ ಮಾಡಿತ್ತು.

ಇದನ್ನೂ ಓದಿ:ಬಹುನಿರೀಕ್ಷಿತ 'ಜವಾನ್​' ರಿಲೀಸ್​: ಎಸ್​ಆರ್​ಕೆ ಸಿನಿಮಾ ಸ್ವಾಗತಿಸಲು ಥಿಯೇಟರ್​ ಮುಂದೆ ಅಭಿಮಾನಿಗಳ ದಂಡು

ಪಠಾಣ್​ ಸಿನಿಮಾ ಸುಮಾರು 60 ಕೋಟಿ ರೂ. ಕಲೆಕ್ಷನ್​ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ದೇಶೀಯ ಮಾರುಕಟ್ಟೆಯಲ್ಲೇ ಸರಿಸುಮಾರು 67 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡುವಲ್ಲಿ ಯಶಸ್ವಿ ಆಯಿತು. ಸದ್ಯ ಜವಾನ್​ ದೇಶಿಯ ಮಾರುಕಟ್ಟೆಯಲ್ಲಿ 75 ಕೋಟಿ ರೂ.ಗೂ ಅಧಿಕ ಮತ್ತು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡುವ ಗುರಿ ಹೊಂದಿದೆ. ಸಿನಿ ವಿಶ್ಲೇಷಕರ ಪ್ರಕಾರ, ಜವಾನ್​ 100 ರಿಂದ 125 ಕೋಟಿ ರೂ. ಕಲೆಕ್ಷನ್​ ಮಾಡಲಿದೆ. ಒಟ್ಟಾರೆ ವಿಶ್ವದಾದ್ಯಂತ ಜವಾನ್​ ಸಿನಿಮಾ ಎಷ್ಟು ರೂಪಾಯಿ ಕಲೆಕ್ಷನ್​ ಮಾಡಲಿದೆ ಅನ್ನೋದರ ಮೇಲೆ ಎಲ್ಲರ ಗಮನ ಹರಿದಿದೆ.

ಇದನ್ನೂ ಓದಿ:'Jawan fever': ಪತ್ನಿ ಪ್ರಿಯಾರೊಂದಿಗೆ ದೊಡ್ಡ ಪರದೆಯಲ್ಲಿ 'ಜವಾನ್'​ ವೀಕ್ಷಿಸಿದ ನಿರ್ದೇಶಕ ಅಟ್ಲೀ

ಮೊದಲ ದಿನ ಸಿನಿಮಾ ವೀಕ್ಷಿಸುವ ಸಲುವಾಗಿ, 14 ಲಕ್ಷಕ್ಕೂ ಹೆಚ್ಚು ಟಿಕೆಟ್ಸ್ ಮಾರಾಟ ಆಗಿದೆ. ಮುಂಗಡ ಟಿಕೆಟ್​​ ಬುಕ್ಕಿಂಗ್​​ ಜೋರಾಗೇ ನಡೆದಿದೆ. ಜೈಪುರ, ಮುಂಬೈ, ಕೋಲ್ಕತ್ತಾ ಸೇರಿದಂತೆ ಹಲವೆಡೆ ಮುಂಜಾನೆಯೇ ಶೋಗಳನ್ನು ಏರ್ಪಡಿಸಲಾಗಿತ್ತು. ಸಿಂಗಲ್​​ ಸ್ಕ್ರೀನ್​ ಮಾತ್ರವಲ್ಲದೇ ಮಲ್ಟಿಫ್ಲೆಕ್ಸ್​ಗಳಲ್ಲೂ ಪ್ರೇಕ್ಷಕರು ತುಂಬಿದ್ದಾರೆ. ಸಂಪೂರ್ಣ ಆಸನಗಳು ಭರ್ತಿ ಆಗಿವೆ. ಇವೆಲ್ಲವನ್ನೂ ಗಮನಿಸಿದರೆ ಸಿನಿಮಾ ಸೂಪರ್​ ಹಿಟ್​ ಆಗಲಿದೆ ಎಂದನಿಸುತ್ತಿದ್ದು, ನಾಳೆ ಮುಂಜಾನೆ ಹೊರ ಬೀಳಲಿರುವ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ಸಿನಿಮಾದ ಯಶಸ್ಸನ್ನು ನಿರ್ಧರಿಸಲಿದೆ.

ABOUT THE AUTHOR

...view details