ಕರ್ನಾಟಕ

karnataka

ETV Bharat / entertainment

Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್​ - ವಿಡಿಯೋ ನೋಡಿ! - ಪ್ರಿಯಾಮಣಿ

Shah Rukh Khan starrer Jawan: ಜವಾನ್​ ಸಿನಿಮಾ ಸಂಭ್ರಮಾಚರಣೆಯ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Jawan celebration
ಜವಾನ್​ ಸೆಲೆಬ್ರೇಶನ್​​

By ETV Bharat Karnataka Team

Published : Sep 7, 2023, 3:43 PM IST

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಮುಖ್ಯಭೂಮಿಕೆಯ 'ಜವಾನ್'​ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ದಕ್ಷಿಣ ಚಿತ್ರರಂಗದ ಡೈರೆಕ್ಟರ್​ ಅಟ್ಲೀ ನಿರ್ದೇಶನ ಈ ಸಿನಿಮಾದಲ್ಲಿ ನಯನತಾರಾ, ವಿಜಯ್​ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪಠಾಣ್​ ನಟಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾವನ್ನು ಶಾರುಖ್​ ದಂಪತಿ ಒಡೆತನದ ರೆಡ್​ ಚಿಲ್ಲೀಸ್​ ಬ್ಯಾನರ್​​ ನಿರ್ಮಾಣ ಮಾಡಿದೆ.

ಜವಾನ್​ ಸೆಲೆಬ್ರೇಶನ್​​: ಇಂದು ವಿಶ್ವಾದ್ಯಂತ ಜವಾನ್​ ತೆರೆಕಂಡಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ಸಂಪೂರ್ಣ ಜವಾನ್​​ನದ್ದೇ ಹವಾ. ಥಿಯೇಟರ್​ನಲ್ಲಿ ಪ್ರೇಕ್ಷಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಜವಾನ್​ಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ದೊಡ್ಡ ಪರದೆಯಲ್ಲಿ ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬೆಳಗ್ಗೆಯೇ ಥಿಯೇಟರ್​ಗಳತ್ತ ಜಮಾಯಿಸಿದರು. ಅನೇಕರು ಚಿತ್ರಮಂದಿರಗಳ ಎದುರು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಿಸಿದ್ದಾರೆ. ಅಭಿಮಾನಿಗಳ ಸಂಭ್ರಮಾಚರಣೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಸಿನಿಮಾ 2 ಗಂಟೆ 49 ನಿಮಿಷಗಳ ರನ್​ ಟೈಮ್​ ಹೊಂದಿದೆ. ಇಂದು ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಪ್ರಾರಂಭಿಸಿದೆ. ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಸಂಭ್ರಮಾಚರಣೆ ಶುರುವಾಗಿದೆ. ಸಂಭ್ರಮಾಚರಣೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹೊರಬಿದ್ದಿದೆ. ಒಂದು ವಿಡಿಯೋದಲ್ಲಿ, ಚಿತ್ರಮಂದಿರದಲ್ಲಿ ಚಲೇಯಾ ಹಾಡು ಪ್ರಸಾರವಾಗುತ್ತಿದ್ದಂತೆ ಸಿನಿಪ್ರಿಯರು ಮೊಬೈಲ್​ ಟಾರ್ಚ್ ಆನ್​ ಮಾಡಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಜೈಪುರದ ಥಿಯೇಟರ್​ನಲ್ಲಿ ಜಿಂದಾ ಬಂದಾ ಹಾಡಿಗೆ ಅಭಿಮಾನಿಗಳು ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ಹಲವು ಚಿತ್ರಮಂದಿರಗಳಿಂದ ಅಭಿಮಾನಿಗಳ ಡ್ಯಾನ್ಸ್​ ವಿಡಿಯೋ ಹೊರಬಿದ್ದಿದೆ.

ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಬಳಿಕ ಆಶಿಕಾ ರಂಗನಾಥ್.. ಟಾಲಿವುಡ್​ ಸೂಪರ್​​ಸ್ಟಾರ್​ ಜೊತೆ ನಟಿಸುವ ಆಫರ್

ಲೈವ್​ ಪ್ರಪೋಸಲ್​​ನ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿದೆ. ಥಿಯೇಟರ್​ ಒಂದರಿಂದ ಈ ವಿಡಿಯೋ ಹೊರಬಿದ್ದಿದೆ. ಸ್ಕ್ರೀನ್​ನಲ್ಲಿ ಚಲೇಯಾ ಹಾಡು ಪ್ರಸಾರವಾಗುತ್ತಿದೆ. ಎದುರು ಜೋಡಿಯೊಂದು ಚಲೇಯಾ ಹಾಡಿಗೆ ಮೈ ಕುಣಿಸಿದ್ದಾರೆ. ಗೆಳೆಯ ಡ್ಯಾನ್ಸ್​ ಮಾಡಿ ಗೆಳತಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ.

ಇದನ್ನೂ ಓದಿ:Jawan Collection: ಜವಾನ್​ ಮೊದಲ ದಿನ 100 ಕೋಟಿ ದಾಟುತ್ತಾ ಪಠಾಣ್​ ದಾಖಲೆ ಪುಡಿಗಟ್ಟುತ್ತಾ?

ಕಿಂಗ್​ ಖಾನ್​ ಫ್ಯಾನ್ಸ್​​ ಡೋಲು ಬಾರಿಸಿ ಪಟಾಕಿ ಸಿಡಿಸಿ ಜವಾನ್​ ಬಿಡುಗಡೆಯ ಸಂಭ್ರಮವನ್ನು ಆಚರಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಪ್ರಾರಂಭವಾಗಿದೆ. ಕೆಲ ಥಿಯೇಟರ್​ಗಳಲ್ಲಿ 5 ಗಂಟೆಗೆ ಸಿನಿಮಾ ಪ್ರದರ್ಶನ ಪ್ರಾರಂಭವಾಗಿದೆ. ಸಿನಿಮಾ ಪ್ರದರ್ಶನ ಪ್ರಾರಂಭವಾದಾಗಿನಿಂದಲೂ ಸಂಭ್ರಮಾಚರನೆಯ ವಿಡಿಯೋಗಳು ಸದ್ದು ಮಾಡುತ್ತಿವೆ. ಸಿನಿಮಾ ಮೇಲಿನ ಪಾಸಿಟಿವ್​ ರೆಸ್ಪಾನ್ಸ್​ ಹೀಗೆ ಮುಂದುವರಿದರೆ, ಜವಾನ್​​ 2023ರ ಬ್ಲಾಕ್​ಬಸ್ಟರ್ ಚಿತ್ರವಾಗಿ ಹೊರಹೊಮ್ಮೋದು ಪಕ್ಕಾ.

ABOUT THE AUTHOR

...view details