ಕರ್ನಾಟಕ

karnataka

ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ 8 ದಾಖಲೆ ಬರೆದ ಶಾರುಖ್​ ಖಾನ್​​ರ 'ಜವಾನ್​' ಸಿನಿಮಾ.. - ಈಟಿವಿ ಭಾರತ ಕನ್ನಡ

Jawan creates 8 box office records: 'ಜವಾನ್'​ ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ 8 ಹೊಸ ದಾಖಲೆಯನ್ನು ಬರೆದಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ..

Jawan creates 8 box office records
ಬಾಕ್ಸ್​ ಆಫೀಸ್​ನಲ್ಲಿ 8 ದಾಖಲೆ ಬರೆದ ಶಾರುಖ್​ 'ಜವಾನ್​' ಸಿನಿಮಾ..

By ETV Bharat Karnataka Team

Published : Sep 11, 2023, 8:20 PM IST

ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಕಾಂಬೋದಲ್ಲಿ ಮೂಡಿಬಂದ 'ಜವಾನ್'​ ಸಿನಿಮಾ ಸೆಪ್ಟೆಂಬರ್​ ​ 7, ಗುರುವಾರದಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್​ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಶಾರುಖ್​ ಸೇರಿದಂತೆ ನಯನತಾರಾ, ವಿಜಯ್​ ಸೇತುಪತಿ ಅವರಿಗೂ 'ಜವಾನ್​' ಉತ್ತಮ ಹೆಸರು ತಂದುಕೊಟ್ಟಿದೆ. ಬಿಡುಗಡೆಯಾದ ಐದೇ ದಿನಗಳಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಜವಾನ್​ ದೇಶೀಯವಾಗಿ ಮತ್ತು ಜಾಗತಿಕವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಅವುಗಳು ಹೀಗಿವೆ...

  • ಕಿಂಗ್​ ಖಾನ್​ ಅವರ ಹೈ ಆಕ್ಷನ್​ ಚಿತ್ರ 'ಜವಾನ್'​ ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ 129.6 ಕೋಟಿ ರೂಪಾಯಿ ಮತ್ತು ಭಾರತದಲ್ಲಿ 75 ಕೋಟಿ ರೂಪಾಯಿ ಗಳಿಸಿತು. ಚಿತ್ರ ತಯಾರಕರ ಪ್ರಕಾರ, ಎಸ್​ಆರ್​ಕೆ ವೃತ್ತಿಜೀವನದಲ್ಲಿ ಜಾಗತಿಕವಾಗಿ ಮತ್ತು ಭಾರತದಲ್ಲಿ ಭರ್ಜರಿ ಓಪನಿಂಗ್​ ಪಡೆದ ಮೊದಲ ಹಿಂದಿ ಚಿತ್ರ ಜವಾನ್​ ಆಗಿದೆ.
  • ಬಿಡುಗಡೆಯಾದ ಮೂರು ದಿನದಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದ ದಾಖಲೆ ಕೂಡ 'ಜವಾನ್​' ಹೆಸರಿನಲ್ಲಿದೆ. ಪಠಾಣ್​ ಈ ಮೊತ್ತವನ್ನು ಗಳಿಸಲು ನಾಲ್ಕು ದಿನ ತೆಗೆದುಕೊಂಡಿದ್ದರೆ, ಗದರ್​ 2 ಇದನ್ನು 5 ದಿನಗಳಲ್ಲಿ ಸಾಧಿಸಿತು.
  • ಜವಾನ್ ಸಿನಿಮಾ ಶನಿವಾರದಂದು ಮತ್ತೊಂದು ದಾಖಲೆಯನ್ನು ಬರೆಯಿತು. ಬಿಡುಗಡೆಯಾಗಿ 3ನೇ ದಿನ ​74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಇದಕ್ಕೂ ಮೊದಲು ವಾರಾಂತ್ಯವಾದ ಶನಿವಾರದಂದು ಯಾವ ಸಿನಿಮಾವೂ ಇಷ್ಟೊಂದು ಮೊತ್ತ ಗಳಿಸಿಲ್ಲ. ಜವಾನ್​ ಸಿನಿಮಾವೇ ಈ ಹೊಸ ಇತಿಹಾಸವನ್ನು ಸೃಷ್ಟಿಸಿತು.
  • ನಾಲ್ಕನೇ ದಿನವಾದ ಆದಿತ್ಯವಾರ, ಹಿಂದಿ ಚಲನಚಿತ್ರ ಇತಿಹಾಸದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಕಂಡ ದಾಖಲೆಯನ್ನು ಜವಾನ್​ ಸೃಷ್ಟಿಸಿತು. ಈವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ, ಭಾರತದಲ್ಲಿ ಅಂದಾಜು 80 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು. ಹಿಂದಿ ಚಿತ್ರರಂಗದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಪಾದಿಸಿದ ಮೊದಲ ಚಿತ್ರ ಇದಾಗಿದೆ.
  • ದೇಶೀಯ ಗಲ್ಲಾಪೆಟ್ಟಿಯಲ್ಲಿ ಪ್ರಾಬಲ್ಯ ಸಾಧಿಸುವುದು ಮಾತ್ರವಲ್ಲದೇ, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಅತ್ಯಂತ ವೇಗವಾಗಿ 500 ಕೋಟಿ ರೂಪಾಯಿ ಗಳಿಸಿದ ಬಾಲಿವುಡ್​ ಚಿತ್ರವಾಗಿ 'ಜವಾನ್​' ಹೊರಹೊಮ್ಮಿದೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಜವಾನ್​ ವಿಶ್ವದಾದ್ಯಂತ ಸುಮಾರು 530 ಕೋಟಿ ರೂಪಾಯಿ ಗಳಿಸಿದೆ. ಶಾರುಖ್​ ಖಾನ್​ ಅವರ ಪಠಾಣ್​ ಚಿತ್ರ 500 ಕೋಟಿ ರೂಪಾಯಿ ಗಡಿ ದಾಟಲು ಐದು ದಿನಗಳನ್ನು ತೆಗೆದುಕೊಂಡಿತ್ತು.
  • ಜವಾನ್​ ಸಿನಿಮಾ ತನ್ನ ಯಶಸ್ಸಿನ ಪ್ರಯಾಣದಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದೆ. ಚಿತ್ರವು ತನ್ನ ಮೊದಲ ವಾರಾಂತ್ಯದಲ್ಲಿ 180 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಸಿನಿಮಾ ಬಿಡುಗಡೆಯ ಇತಿಹಾಸದಲ್ಲಿ ಇದು ಹಿಂದೆಂದೂ ಸಂಭವಿಸಿಲ್ಲ.
  • ಒಂದೇ ವರ್ಷದಲ್ಲಿ 500 ಕೋಟಿ ಕ್ಲಬ್​ ಸೇರಿದ ಎರಡು ಚಿತ್ರಗಳು (ಪಠಾಣ್​ ಮತ್ತು ಜವಾನ್​) ಎಂಬ ಹೆಗ್ಗಳಿಕೆ ಶಾರುಖ್​ ಖಾನ್​ ಅವರಿಗೆ ಸಿಕ್ಕಿದೆ. ಈ ಒಂದು ಪಟ್ಟವನ್ನು ಅಲಂಕರಿಸಿದ ಏಕೈಕ ನಟ ಕಿಂಗ್​ ಖಾನ್​ ಆಗಿದ್ದಾರೆ. ಈ ಮೂಲಕ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದ್ದಾರೆ.
  • ಜವಾನ್​ ಹಿಂದಿ ಚಿತ್ರರಂಗದ ಅತಿದೊಡ್ಡ ಓಪನಿಂಗ್​ ಪಡೆದುಕೊಂಡ ಚಿತ್ರವಾಗಿದೆ. ಪಠಾಣ್​ ಅನ್ನು ಹಿಂದಿಕ್ಕಿ ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ರೂ. ಗಳಿಸಿದೆ. ಇದು ಜಾಗತಿಕವಾಗಿ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಆರಂಭವಾಗಿದೆ.

ABOUT THE AUTHOR

...view details