ಸೌತ್ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ 'ಆರ್ಆರ್ಆರ್' ಸಿನಿಮಾಗೆ ಸಲ್ಲುತ್ತದೆ. ಎಸ್ಎಸ್ ರಾಜಮೌಳಿ ಅದ್ಭುತ ನಿರ್ದೇಶನ ಶೈಲಿ, ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅಮೋಘ ಅಭಿನಯದ ಕಾಂಬಿನೇಶನ್ನಲ್ಲಿ ಮೂಡಿ ಬಂದ ಈ ಚಿತ್ರ ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದೆ. ಈ ವರ್ಷದ ಆರಂಭದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದರ ಮೂಲಕ 'ಆರ್ಆರ್ಆರ್ ದಿ ಬೆಸ್ಟ್ ಸಿನಿಮಾ' ಎನಿಸಿಕೊಂಡಿದೆ.
ಈ ಸಿನಿಮಾದಿಂದ ರಾಜಮೌಳಿ ಜೊತೆಗೆ ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಜನಪ್ರಿಯತೆಯೂ ಹೆಚ್ಚಿದೆ. ಅವರು ಪ್ರಪಂಚದ ವಿವಿಧ ಭಾಗಗಳಿಂದ ಹೆಚ್ಚಿನ ಮೆಚ್ಚುಗೆ ಗಳಿಸಿದ್ದಾರೆ. ಜಪಾನಿನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಅವರು ಇತ್ತೀಚೆಗೆ ಆರ್ಆರ್ಆರ್ ಸಿನಿಮಾವನ್ನು ಹೊಗಳಿದ್ದಾರೆ. ಜೂನಿಯರ್ ಎನ್ಟಿಆರ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
ಆರ್ಆರ್ಆರ್ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರನ್ನು ಒಳಗೊಂಡ ದೃಶ್ಯಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಅವರ ನಟನೆಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಜಪಾನ್ನಲ್ಲಿ ಜೂನಿಯರ್ ಎನ್ಟಿಆರ್ ಅವರ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಯೋಶಿಮಾಸಾ ಹಯಾಶಿ ಅವರು ಕೂಡ ನಟನ ಅಭಿಮಾನಿಯೆಂದು ಒಪ್ಪಿಕೊಂಡಿದ್ದಾರೆ. ಅವರನ್ನು ಜಪಾನ್ ರಾಷ್ಟ್ರದ ಜನರು ಆರಾಧಿಸುವ ಭಾರತೀಯ ನಟನನ್ನಾಗಿ ಮಾಡಿದ್ದಾರೆ.
ಇದನ್ನೂ ಓದಿ:ಥಿಯೇಟರ್ನಲ್ಲಿ ಧೂಳೆಬ್ಬಿಸಿದ 'ಬ್ರೋ': ಮೊದಲ ದಿನವೇ 30 ಕೋಟಿ ಬಾಚಿದ ಸಿನಿಮಾ..
ಆರ್ಆರ್ಆರ್ ಚಿತ್ರದಲ್ಲಿನ ಜೂನಿಯರ್ ಎನ್ಟಿಆರ್ ಅವರ ಅಭಿನಯವು ಯೋಶಿಮಾಸಾ ಹಯಾಶಿ ಅವರನ್ನು ಹೆಚ್ಚು ಪ್ರಭಾವಿತರನ್ನಾಗಿಸಿದೆ. ಹೀಗಾಗಿಯೇ ಅವರು ಜೂನಿಯರ್ ಎನ್ಟಿಆರ್ ಅವರ ಅಭಿಮಾನಿಯೆಂದು ಹೇಳಿದ್ದಾರೆ. ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಬಂದಿದ್ದ ಹಯಾಶಿ ನಿನ್ನೆ ರಾತ್ರಿ ದೆಹಲಿಯಲ್ಲಿ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಇಂಡೋ-ಜಪಾನ್ ಫಾರಂ ಕಾನ್ಫರೆನ್ಸ್ ಭಾಗವಹಿಸಿದರು.
'ಆರ್ಆರ್ಆರ್ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದೇನೆ..' ಈ ವೇಳೆ ಹಯಾಶಿ ಅವರು ಭಾರತೀಯ ಚಿತ್ರರಂಗದ ಬಗ್ಗೆ ಮಾತನಾಡಿದರು. "ಭಾರತೀಯ ಚಿತ್ರಗಳಿಗೆ ನಮ್ಮ ದೇಶದಲ್ಲಿ ಉತ್ತಮ ಮನ್ನಣೆ ಸಿಗುತ್ತಿದೆ. ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾ ಜಪಾನಿನಲ್ಲಿ ಬಹಳ ಜನಪ್ರಿಯವಾಗಿದೆ. ನಾನು ಆರ್ಆರ್ಆರ್ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದೇನೆ. ಜೂನಿಯರ್ ಎನ್ಟಿಆರ್ ಅಭಿನಯ ತುಂಬಾ ಚೆನ್ನಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಟೋಕಿಯೋದಲ್ಲಿನ ಹಲವಾರು ಭಾರತೀಯ ರೆಸ್ಟೋರಂಟ್ಗಳಲ್ಲಿ ಪ್ರಸಿದ್ಧ ಹೈದರಾಬಾದಿ ಬಿರಿಯಾನಿಯನ್ನು ಅಲ್ಲಿನ ಜನ ಪ್ರೀತಿಯಿಂದ ಸವಿಯುತ್ತಿರುವುದಾಗಿ ಸಚಿವರು ಹೇಳಿದರು.
ಇದನ್ನೂ ಓದಿ:ಕರಣ್ ಜೋಹರ್ ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್.. ಸೌತ್ ಸ್ಟಾರ್ಸ್ ನೋಡಿ ಕಲಿಯಿರಿ ಎಂದು ರಣ್ವೀರ್ಗೆ ಸಲಹೆ