ಮುಂಬೈ:ಬಾಲಿವುಡ್ ನಟಿ ಜಾನ್ವಿ ಕಪೂರ್ ಹಾಗೂ ವರುಣ್ ಧವನ್ ದಂಗಲ್ ಚಿತ್ರದ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬವಾಲಿ ಚಿತ್ರದ ಸೆಟ್‌ಗೆ ಹಾಜರಾಗಿದ್ದಾರೆ. ಈ ಬಗ್ಗೆ ಜಾಲತಾಣಗಳಲ್ಲಿ ಇಬ್ಬರೂ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಮುಂದಿನ ಚಿತ್ರವನ್ನು ಘೋಷಿಸಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ. ಶೀಘ್ರದಲ್ಲೇ ಜಾನ್ವಿ ಕಪೂರ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದೇನೆ. ಚಿತ್ರದ ಶೀರ್ಷಿಕೆ ಬವಾಲ್ ಎಂದು ವರುಣ್ ಧವನ್ ಮತ್ತು ಜಾನ್ವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಘೋಷಿಸಿಕೊಂಡಿದ್ದಾರೆ.
ಅಬ್ ಹೋಗಾ ಬವಾಲ್ 2023ರ ಏಪ್ರಿಲ್ 7 ರ ಶುಭ ಶುಕ್ರವಾರದಂದು ಥಿಯೇಟರ್‌ಗಳಲ್ಲಿ ಜಾನ್ವಿ ಕಪೂರ್ ಜೊತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಸಾಜಿದ್ ನಾಡಿಯಾದ್ವಾಲಾ, ನಿತೇಶ್ ತಿವಾರಿ ಅವರ ಅದ್ಭುತ ಜೋಡಿಯೊಂದಿಗೆ ನನ್ನ ಮುಂದಿನದನ್ನು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ ಎಂದು ವರುಣ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಮತ್ತೊಂದೆಡೆ ಜಾನ್ವಿ ಕಪೂರ್, ಎರಡು ಅತ್ಯುತ್ತಮವಾದ ಸಾಜಿದ್ ನಾಡಿಯಾದ್ವಾಲಾ, ನಿತೇಶ್ ತಿವಾರಿ ಅವರೊಂದಿಗೆ ಕೈಜೋಡಿಸುತ್ತಿದ್ದೇನೆ. ನನ್ನ ಮುಂದಿನ ಸಿನಿಮಾ ಬವಾಲ್ ವರುಣ್ ಅವರೊಂದಿಗೆ ನಟಿಸುತ್ತಿರುವುದನ್ನು ಘೋಷಿಸಲು ತುಂಬಾ ಕೃತಜ್ಞಳಾಗಿದ್ದೇನೆ ಹಾಗೂ ಸಂತೋಷಪಡುತ್ತೇನೆ. 2023ರ ಏಪ್ರಿಲ್ 7 ರಂದು ನಿಮ್ಮನ್ನು ಚಿತ್ರಮಂದಿರಗಳಲ್ಲಿ ನೋಡೋಣ ಎಂದಿದ್ದಾರೆ.