ಕರ್ನಾಟಕ

karnataka

ETV Bharat / entertainment

ಮೇಕಪ್​ ಇಲ್ಲದ ಪೋಟೋಗಳನ್ನು ಹಂಚಿಕೊಂಡ ನಟಿ ಜಾನ್ವಿ ಕಪೂರ್​: ಹೀಗಿದೆ ಹಾಟ್​ ಬೆಡಗಿಯ ನ್ಯಾಚುರಲ್​ ಲುಕ್​ - ಈಟಿವಿ ಭಾರತ ಕನ್ನಡ

​ನಟಿ ಜಾನ್ವಿ ಕಪೂರ್​ ತಮ್ಮ ಇನ್​​ಸ್ಟಾ ಖಾತೆಯಲ್ಲಿ ಮೇಕಪ್​ ಇಲ್ಲದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಜಾನ್ವಿ ಕಪೂರ್ ನ್ಯಾಚುರಲ್​ ಲುಕ್​
ಜಾನ್ವಿ ಕಪೂರ್ ನ್ಯಾಚುರಲ್​ ಲುಕ್​

By

Published : May 26, 2023, 7:05 PM IST

ಮುಂಬೈ:ಬಾಲಿವುಡ್​ ಬೆಡಗಿಜಾನ್ವಿ ಕಪೂರ್ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಜಾನ್ವಿ ತನ್ನ ಸ್ಟೈಲಿಶ್ ಲುಕ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಅವರು ತಮ್ಮ ಫ್ಯಾಷನ್ ಲುಕ್​ನಿಂದಲೇ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ನ್ಯಾಚುರಲ್​ ಲುಕ್​ನಲ್ಲಿ ಒಂದಿಷ್ಟು ಫೋಟೋಗಳನ್ನು ನಟಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿ ರಮಣೀಯ ಸ್ಥಳವೊಂದರಲ್ಲಿ ವಿಹಾರ ಮಾಡುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಫೋಟೋಗಳನ್ನು ಸಹ ಶೇರ್​ ಮಾಡಿದ್ದಾರೆ. ಈ ಚಿತ್ರಗಳು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳಲ್ಲಿ ಹಾಟ್​ ಬೆಡಗಿ ಸರೋವರವೊಂದರ ಮಧ್ಯ ಶಿಪ್​ನಲ್ಲಿ ಕುಳಿತು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಬಿಳಿ ಉಡುಪಿನಲ್ಲಿ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಯಾವ ಸ್ಥಳದಲ್ಲಿ ಅವರು ವಿಹಾರ ಮಾಡುತ್ತಿದ್ದಾರೆ ಎಂಬುದನ್ನು ಮಾತ್ರ ನಟಿ ಬಹಿರಂಗಪಡಿಸಿಲ್ಲ.

ಮೇಕಪ್​ ಇಲ್ಲದ ಲುಕ್​​ನ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜಾನ್ವಿಯ ನ್ಯಾಚುರಲ್​ ಚಿತ್ರಗಳಿಗೆ ನೆಟಿಜನ್ಸ್​ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದು ಕಾಮೆಂಟ್ಸ್​​ಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಭಿಮಾನಿಯೊಬ್ಬರು "ಸ್ವೀಟ್​​ ಜಾನ್ವಿ ಎಂದು ಕಮೆಂಟ್​ ಮಾಡಿದ್ದರೆ ಮತ್ತೊಬ್ಬರು ಬ್ಯೂಟಿಪುಲ್​ ಬೆಡಗಿ ಜಾನ್ವಿ ಎಂದು ಬರೆದಿದ್ದಾರೆ.

ಸದ್ಯ ನಟಿ ಜಾನ್ವಿ ಕಪೂರ್​, ರಾಜ್‌ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ ಅಂಡ್ ಮಿಸ್ ಮಹಿ ಎಂಬ ಚಿತ್ರದಲ್ಲಿ ನಟಿಸಿದ್ದು, ಇದರ ಚಿತ್ರೀಕರಣ ಪೂರ್ಣಗೊಂಡಿದೆ. ಈ ಬಗ್ಗೆ ನಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಚಿತ್ರ ತಂಡಕ್ಕೆ ಕೃತಜ್ಞತೆ ಅರ್ಪಿಸಿದ್ದಾರೆ. ಮಿಸ್ಟರ್ & ಮಿಸೆಸ್ ಮಹಿ ಚಿತ್ರವು ಕ್ರಿಕೆಟ್​ ಜಗತ್ತಿನ ಶ್ರೇಷ್ಠ ನಾಯಕ ಎಮ್​ಎಸ್​ ಧೋನಿ ಅವರ ಜೀವನ ಆಧಾರಿತ ಕಥೆಯಾಗಿದೆ.

ಇದರಲ್ಲಿ ರಾಜ್​ ಕುಮಾರ್​ ರಾವ್​ ಮತ್ತು ಜಾನ್ವಿ ಕಪೂರ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಧೋನಿ ಅವರ ಜೀವನ ಆಧಾರಿತ ಎರಡನೇ ಚಿತ್ರ ಇದಾಗಿದೆ, ಇದಕ್ಕೂ ಮೊದಲು ಎಮ್ಎಸ್​ ಧೋನಿ ಅನ್​ಟೋಲ್ಡ್​ ಸ್ಟೋರಿ ಎಂಬ ಚಿತ್ರ ಬಿಡುಗಡೆಯಾಗಿತ್ತು. ಇದರಲ್ಲಿ ನಟ ಸುಶಾಂತ್​ ಸಿಂಗ್​ ಅವರು ನಟಿಸಿದ್ದರು. ಅಲ್ಲದೇ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಸಖತ್​ ಕಲೆಕ್ಷನ್​ ಮಾಡಿತ್ತು.

ಸದ್ಯ ಜಾನ್ವಿ ಕಪೂರ್​ ಒಂದರ ಹಿಂದೊಂದಂತ್ತೆ ಸಿನಿಮಾಗಳಲ್ಲಿ ನಟಿಸುವ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಮಿಸ್ಟರ್​ & ಮಿಸೆಸ್​​ ಮಹಿ ಚಿತ್ರ ಬಿಡುಗಡೆಯಾದ ಬೆನ್ನಲ್ಲೆ ಟಾಲಿವುಡ್​ನ ಜೂನಿಯರ್​​ ಎನ್​ಟಿಆರ್​ ಅಭಿನಯದ ದೇವರ ಚಿತ್ರದಲ್ಲಿ ಜಾನ್ವಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಜಾನ್ವಿಯೊಂದಿಗೆ ಸೈಫ್​ ಅಲಿಖಾನ್​ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಚಿತ್ರವನ್ನು ಕೊರಟಾಲ ಶಿವ್ ನಿರ್ದೇಶಿಸುತ್ತಿದ್ದು, ಮಿಕ್ಕಿಲಿನೇನಿ ಸುಧಾಕರ್ ಮತ್ತು ಕೊಸರ್ಜು ಹರಿ ಕೃಷ್ಣ ನಿರ್ಮಾಪಕರಾಗಿದ್ದಾರೆ. ಈ ಚಿತ್ರ 2024ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗಿಂದು ಸಿಹಿ ಸುದ್ದಿ: ಎನ್‌ಟಿಆರ್ 30 ಫಸ್ಟ್ ಲುಕ್ ಬಿಡುಗಡೆಗೆ ಕ್ಷಣಗಣನೆ

ABOUT THE AUTHOR

...view details