ಕರ್ನಾಟಕ

karnataka

ETV Bharat / entertainment

ಜೂನಿಯರ್ ಆಗಿ ಸಿನಿರಸಿಕರನ್ನು ಗೆಲ್ಲಲು ಬರ್ತಾ ಇದ್ದಾರೆ ರೆಡ್ಡಿ ಪುತ್ರ ಕಿರೀಟಿ - ಈಟಿವಿ ಭಾರತ್ ಕನ್ನಡ ಸುದ್ದಿ

ಮಾಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಜೂನಿಯರ್ ಎಂಬ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ
ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

By

Published : Sep 29, 2022, 9:19 PM IST

ಸ್ಯಾಂಡಲ್ ವುಡ್ ಅಂಗಳಕ್ಕೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಟೀಸರ್ ಝಲಕ್​ನಲ್ಲೇ ಎಲ್ಲರ ಗಮನ ಸೆಳೆದಿರೋ ಕಿರೀಟಿ ಮೊದಲ ಚಿತ್ರದ ಮೂಲಕ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ.

ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿ ಬರ್ತಿರುವ ಈ ಚಿತ್ರ ಬಿರುಸಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇಷ್ಟು ದಿನ ಟೈಟಲ್ ರಿವೀಲ್ ಮಾಡದೇ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡ ಫೈನಲಿ ಸಿನಿಮಾ ಟೈಟಲ್ ರಿವೀಲ್ ಮಾಡಿದೆ. ಆ ಮೂಲಕ ಇಷ್ಟು ದಿನದ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಜೂನಿಯರ್ ಸಿನಿಮಾ ಪೋಸ್ಟರ್

ಇಂದು ನಾಯಕ ನಟ ಕಿರೀಟಿ ಹುಟ್ಟುಹಬ್ಬ. ಆದ್ರಿಂದ ಚಿತ್ರತಂಡ ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ರಿವೀಲ್ ಮಾಡಲು ಮೊದಲೇ ತಯಾರಿ ಮಾಡಿಕೊಂಡಿತ್ತು. ಅದರಂತೆ ವಾರಾಹಿ ಯೂಟ್ಯೂಬ್ ಚಾನೆಲ್​ನಲ್ಲಿ ಇಂದು ಸಂಜೆ 6.39ಕ್ಕೆ ಟೈಟಲ್ ವಿಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಕಿರೀಟಿಗೆ ಶುಭಕೋರಿ ಟೈಟಲ್ ಉಡುಗೊರೆಯಾಗಿ ನೀಡಲಿದೆ ಚಿತ್ರತಂಡ.

ಚಿತ್ರಕ್ಕೆ ‘ಜೂನಿಯರ್’ ಎಂದು ಚಿತ್ರತಂಡ ಟೈಟಲ್ ಫಿಕ್ಸ್ ಮಾಡಿದೆ. ಈ ಮೂಲಕ ಇಷ್ಟು ದಿನ ಸಿನಿರಸಿಕರಲ್ಲಿ ಟೈಟಲ್ ಬಗ್ಗೆ ಇದ್ದ ಕುತೂಹಲಕ್ಕೆ ಉತ್ತರ ನೀಡಿದೆ ಚಿತ್ರತಂಡ. ‘ಜೂನಿಯರ್’ ಮೂಲಕ ಕಿರೀಟಿ ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೂ ನಾಯಕ ನಟನಾಗಿ ಪರಿಚಿತನಾಗುತ್ತಿದ್ದಾರೆ.

ಮಾಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಿದು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು ಬಿಗ್ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್.

ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಗೆಯೇ, ಚಿತ್ರದ ತಾಂತ್ರಿಕ ಬಳಗ ಕೂಡ ಅಷ್ಟೇ ಶ್ರೀಮಂತವಾಗಿದ್ದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.

ಓದಿ:ಹಿಂದಿ ದೃಶ್ಯಂ 2 ಟೀಸರ್ ರಿಲೀಸ್.. ನ.18ಕ್ಕೆ ಸಿನಿಮಾ ತೆರೆಗೆ

ABOUT THE AUTHOR

...view details