ಹಾಲಿವುಡ್ ಸಿನಿಮಾ ನಿರ್ಮಾಪಕ, ನಿರ್ದೇಶಕ ಜೇಮ್ಸ್ ಗನ್ (James Gunn) ಕಳೆದ ಆರ್‌ಆರ್‌ಆರ್ ಸಿನಿಮಾವನ್ನು ಹೊಗಳಿದ ಅನೇಕ ಅಂತಾರಾಷ್ಟ್ರೀಯ ಸಿನಿ ಗಣ್ಯರಲ್ಲಿ ಒಬ್ಬರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮತ್ತೆ ಆರ್‌ಆರ್‌ಆರ್ ಕುರಿತು ಮಾತನಾಡಿದ್ದಾರೆ. ನಾಯಕ ನಟ ಜೂನಿಯರ್ ಎನ್‌ಟಿಆರ್ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆಂದು ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಸಿನಿಮಾ ಯುಎಸ್‌ನಲ್ಲಿ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದೆ. ಅಲ್ಲಿ ಸಿನಿಮಾ ಎರಡೆರಡು ಬಾರಿ ತೆರೆಕಂಡು ಪ್ರದರ್ಶನವಾದ ನಂತರ ಜೇಮ್ಸ್ ಗನ್ ಈ ಹೇಳಿಕೆ ಕೊಟ್ಟಿದ್ದಾರೆ.
ಜೇಮ್ಸ್ ಗನ್ ಸೇರಿದಂತೆ ಇತರೆ ನಿರ್ದೇಶಕರು ಆರ್‌ಆರ್‌ಆರ್ ಒಟಿಟಿಯಲ್ಲಿ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. 2022ರಲ್ಲಿ, ಭಾರತದ ಅಭಿಮಾನಿಯೊಬ್ಬರು ಆರ್‌ಆರ್‌ಆರ್ ವೀಕ್ಷಿಸಲು ಜೇಮ್ಸ್ ಅವರನ್ನು ಕೇಳಿಕೊಂಡಿದ್ದರು. ಟ್ವೀಟ್ ನೋಡಿ ಅಭಿಮಾನಿಗೆ ಉತ್ತರಿಸಿದ್ದ ಅವರು, ನಾನು ಈಗಾಗಲೇ ಸಿನಿಮಾವನ್ನು ನೋಡಿದ್ದೇನೆ ಎಂದು ತಿಳಿಸಿದ್ದರು.
ಜೇಮ್ಸ್ ಗನ್ ಅವರು ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಶೀಘ್ರದಲ್ಲೇ ಕೆಲಸ ಮಾಡುವಂತೆ ತೋರುತ್ತಿದೆ. ಈಗಾಗಲೇ ಅವರು ಆರ್‌ಆರ್‌ಆರ್‌ನಿಂದ ಪ್ರಭಾವಿತರಾಗಿದ್ದಾರೆ. ''ಆರ್‌ಆರ್‌ಆರ್ ವ್ಯಕ್ತಿ ಯಾರು? ಅವರು ತುಂಬಾ ಒಳ್ಳೆಯವರು. ಹುಲಿಗಳ ಜೊತೆಗೆ ಪಂಜರದಿಂದ ಹೊರಬರುವ ವ್ಯಕ್ತಿ. ಒಂದು ದಿನ, ನಾನು ಅವರೊಂದಿಗೆ ಸಹಕರಿಸುತ್ತೇನೆ ಎಂದು ಭಾವಿಸುತ್ತೇನೆ, ಅವರು ಬಹಳ ಶಾಂತ ಸ್ವರೂಪ ಮತ್ತು ಅದ್ಭುತ" ಎಂದು ಜೇಮ್ಸ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೊಗಳಿಕೆ ವ್ಯಕ್ತಪಡಿಸಿದ್ದಾರೆ.
ನಟನಿಗೆ ನಿರ್ದಿಷ್ಟ ಪಾತ್ರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಜೇಮ್ಸ್, ಅದನ್ನು ಲೆಕ್ಕಾಚಾರ, ಚಿಂತನೆ ಮಾಡಬೇಕು ಎಂದು ಉತ್ತರಿಸಿದರು. "ನಾನು ಅದನ್ನು ಕಂಡುಹಿಡಿಯಬೇಕು" ಎಂದು ನಿರ್ದೇಶಕರು ಉತ್ತರಿಸಿದರು. ನಿರ್ದಿಷ್ಟ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸಹ ತಿಳಿಸಿದರು.