ಕರ್ನಾಟಕ

karnataka

ETV Bharat / entertainment

ಡಿಸೆಂಬರ್​ 30ರಂದು ನಟ ರಾಕ್ಷಸ ಡಾಲಿಯ ಮತ್ತೊಂದು ಅವತಾರ ಅನಾವರಣ! - ಧನಂಜಯ್‌ ನಟನೆಯ ಸಿನಿಮಾಗಳು

ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಕಾಣಲಿರುವ ಜಮಾಲಿಗುಡ್ಡ ಚಿತ್ರದಲ್ಲಿ ಧನಂಜಯ್‌ ಜೊತೆಗೆ ಅದಿತಿ ಪ್ರಭುದೇವ ನಟಿಸಿದ್ದಾರೆ

Jamaligudda film release on December 30
ಜಮಾಲಿಗುಡ್ಡ ಚಿತ್ರದ ಪೋಸ್ಟರ್​

By

Published : Nov 12, 2022, 9:02 PM IST

ಸ್ಯಾಂಡಲ್​ವುಡ್ ಸಿನಿ ಪ್ರಪಂಚದಲ್ಲಿ ವಿಭಿನ್ನ ಮೇಕಿಂಗ್‌ ಮತ್ತು ಟೈಟಲ್​ನಿಂದ ಗಮನ ಸೆಳೆಯುತ್ತಿರುವ ಡಾಲಿ ಧನಂಜಯ ನಟನೆಯ 'once upon a time in ಜಮಾಲಿಗುಡ್ಡ' ಚಿತ್ರ ಬರುವ ಡಿಸೆಂಬರ್​ 30ರಂದು ತೆರೆಗೆ ಬರುತ್ತಿದೆ. ಹಾಗಾಗಿ ಚಂದನವನದಲ್ಲಿ ಡಿಸೆಂಬರ್ ತಿಂಗಳು ಬಹಳ ಲಕ್ಕಿ ಅನ್ನೋ ಮಾತು ಕೇಳಿ ಬರುತ್ತಿದೆ.

ಜಮಾಲಿಗುಡ್ಡ ಚಿತ್ರದ ಪೋಸ್ಟರ್​

ಬ್ಯಾಕ್​ ಟು ಬ್ಯಾಕ್ ಹಿಟ್​​ ಸಿನಿಮಾ ನೀಡುವ ಮೂಲಕ ನಟ ರಾಕ್ಷಸ ಅಂತಾ ಕರೆಯಿಸಿಕೊಂಡಿರುವ ಧನಂಜಯ್,​ ತಮ್ಮ ನಟನೆಯನ್ನು ವಿಸ್ತಾರಿಸಿಕೊಂಡವರು. ಹಾಗಾಗಿ ಟಾಲಿವುಡ್​ನಿಂದಲೂ ಅವರಿಗೆ ಸಾಕಷ್ಟು ಆಫರ್ ಬರಲಾಂಭಿಸಿವೆ. ಕನ್ನಡದಲ್ಲಿ ಕೈತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ಅವರು ಇದೀಗ ಹೊಯ್ಸಳ, ಉತ್ತರಕಾಂಡ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ.

ಜಮಾಲಿಗುಡ್ಡ ಚಿತ್ರದ ಪೋಸ್ಟರ್​

ಧನಂಜಯ್‌ ಈ ವರ್ಷದ ಮೋಸ್ಟ್‌ ಬ್ಯೂಸಿಯೆಸ್ಟ್‌ ನಟರಾಗಿದ್ದು ವಿಭಿನ್ನ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಸಖತ್​ ಮನರಂಜನೆ ನೀಡಲು ಕಾತುರರಾಗಿದ್ದಾರೆ. ಅಭಿಮಾನಿಗಳು ಸಹ ಅವರನ್ನು ಕಾಣಲು ತುದಿಗಾಲಮೇಲಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಕಾಣಲಿರುವ ಜಮಾಲಿಗುಡ್ಡದಲ್ಲಿ ಧನಂಜಯ್‌ ಜೊತೆಗೆ ಅದಿತಿ ಪ್ರಭುದೇವ, ಬಾಲ ಕಲಾವಿದೆ ಪ್ರಾಣ್ಯ ರಾವ್‌, ಭಾವನಾ ರಾಮಯ್ಯ ಮುಂತಾದವರು ನಟಿಸಿದ್ದಾರೆ.

ಜಮಾಲಿಗುಡ್ಡ ಚಿತ್ರದ ಪೋಸ್ಟರ್​

ಕುಶಾಲ್‌ ಗೌಡ ನಿರ್ದೇಶನದಲ್ಲಿ ರೆಡಿಯಾಗಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಈಗಾಗ್ಲೆ ಸಿನಿಮಾದ ಸಾಗಿದೆ ಹಾಡು ಪಾಪ್ಯುಲರ್‌ ಆಗಿದೆ. ಶ್ರೀಹರಿ ನಿರ್ಮಾಣ ಮಾಡಿರೋ ಸಿನಿಮಾ ಮೂಲಕ ಡಾಲಿಯ ಮತ್ತೊಂದು ಅವತಾರ ಅನಾವರಣ ಆಗಲಿದೆ. ಇದು ಡಾಲಿ ಧನಂಜಯ್ ನಟನೆಯ 26ನೇ ಚಿತ್ರ ಆಗಿದೆ.

ಜಮಾಲಿಗುಡ್ಡ ಚಿತ್ರದ ಪೋಸ್ಟರ್​

ಇದನ್ನೂ ಓದಿ:ಚಿತ್ರೀಕರಣ ವೇಳೆ ಪ್ಯಾಡ್ ಬದಲಾಯಿಸಲು ಪೊದೆ ಹುಡುಕುತ್ತಿದ್ದೆವು: ಜಯಾ ಬಚ್ಚನ್

ABOUT THE AUTHOR

...view details