ಹೈದರಾಬಾದ್:ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಜನಿ ತಮ್ಮ ಡೈಲಾಗ್ ಮತ್ತು ಸ್ಟೈಲ್ನಿಂದ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಐದು ರಾಜ್ಯಗಳಲ್ಲಿ ರೂ. 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೊಸ ದಾಖಲೆಯನ್ನು 'ಜೈಲರ್' ಸೃಷ್ಟಿಸಿದೆ. ಇದರಿಂದ ತಲೈವಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಸೇರಿ 'ಜೈಲರ್' 50 ಕೋಟಿ ಕ್ಲಬ್ ಸೇರಿದೆ. ಈ ದಾಖಲೆಯನ್ನು ಸಾಧಿಸಿದ ಮೊದಲ ನಾನ್ ಸೀಕ್ವೆಲ್ ಭಾರತೀಯ ಚಲನಚಿತ್ರವಾಗಿದೆ. ಇದುವರೆಗೆ 'ಕೆಜಿಎಫ್ 2' ಮತ್ತು 'ಬಾಹುಬಲಿ 2' ಮಾತ್ರ ಈ ಸಾಧನೆ ಮಾಡಿದೆ.
ಆಗಸ್ಟ್ 10 ರಂದು ಪ್ರೇಕ್ಷಕರ ಮುಂದೆ ಬಂದ 'ಜೈಲರ್' ಎಲ್ಲಾ ಪ್ರದೇಶಗಳಲ್ಲಿ 550 ಕೋಟಿ ರೂಪಾಯಿಗೂ ಹೆಚ್ಚು (ಗ್ರಾಸ್) ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಸೀಕ್ವೆಲ್ ಇರುವುದಾಗಿ ನೆಲ್ಸನ್ ಈಗಾಗಲೇ ಹಲವು ಸಂದರ್ಭಗಳಲ್ಲಿ ಘೋಷಿಸಿದ್ದಾರೆ ಎಂಬ ವರದಿಗಳಿವೆ. ತಲೈವಾ ಮತ್ತೊಮ್ಮೆ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಜಗತ್ತಿನಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ.ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾಗಿ 16 ದಿನ ಕಳೆದರೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಚಿತ್ರದ ಕ್ರೇಜ್ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನ ಕಳೆದಂತೆ ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ. ಈ ಚಿತ್ರ ಈವರೆಗೆ ವಿಶ್ವದಾದ್ಯಂತ 550 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಮೂಲಕ ಸಂಚಲನ ಮೂಡಿಸಿದೆ. ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಈ ಸಿನಿಮಾ ಸೇರಿಕೊಂಡಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ಚಿತ್ರವು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಡಬ್ ಆಗಿದ್ದು, ಆಗಸ್ಟ್ 10 ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಜಿನಿಕಾಂತ್ ಅವರ ಪತ್ನಿಯಾಗಿ ರಮ್ಯಾ ಕೃಷ್ಣ ನಟಿಸಿದ್ದು, ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜ್ ಕುಮಾರ್, ತಮನ್ನಾ, ಸುನೀಲ್ ಮತ್ತು ಯೋಗಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರದ ವಿಶೇಷ ಆಕರ್ಷಣೆ.
ಓದಿ:ದೂದ್ ಪೇಡಾ ದಿಗಂತ್ ನಟನೆಯ 'ಪೌಡರ್' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್