ಕರ್ನಾಟಕ

karnataka

ETV Bharat / entertainment

'ಪದವಿ ಪೂರ್ವ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಜಗ್ಗೇಶ್ - Jaggesh released teaser

ತನ್ನ ಟೈಟಲ್ ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಮಾತಾಗಿರುವ 'ಪದವಿ ಪೂರ್ವ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟ ಜಗ್ಗೇಶ್.

Jaggesh released the teaser of 'Padavi Purva'
'ಪದವಿ ಪೂರ್ವ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಜಗ್ಗೇಶ್

By

Published : Dec 8, 2022, 6:16 AM IST

ಪದವಿ ಪೂರ್ವ ಚಿತ್ರ ತನ್ನ ಟೈಟಲ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಪ್ರತಿಯೊಬ್ಬರ ಕಾಲೇಜ್ ದಿನಗಳನ್ನು ನೆನಪಿಸೋ ಈ ಚಿತ್ರದ ಟೀಸರ್ ರಿಲೀಸ್ ಅಗಿದೆ. ಟೀಸರ್​ ಅನ್ನು ನಟ ನವರಸನಾಯಕ ಜಗ್ಗೇಶ್ ಅನಾವರಣ ಮಾಡಿ ಬಗ್ಗೆ ತಮ್ಮ ಕಾಲೇಜ್ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹಾಗೂ ಈ ಚಿತ್ರದ ನಿರ್ಮಾಪಕ ಯೋಗರಾಜ್ ಭಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿ ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಜೊತೆಗೆ ದೊಡ್ಡ ಯಂಗೇಜ್ ಹುಡುಗರ ಗ್ಯಾಂಗ್ ತುಂಬಿರೋ ಸ್ಟಾರ್ ಕಾಸ್ಟ್ ಸಿನಿಮಾಕ್ಕಿದೆ. ಈ ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ, ಯೋಗರಾಜ್ ಭಟ್ ಹಾಗೂ ಹರಿ ಪ್ರಸಾದ್ ಸಿನಿಮಾ ವಿಚಾರದಲ್ಲಿ ಮಿಸ್ಟರ್ ಪರ್ಫೆಕ್ಟ್ ಅಂತಾ ಕೊಂಡಾಡಿದರು.

90ರ ದಶಕದಲ್ಲಿ ಕಾಲೇಜಲ್ಲಿ ನಾವು ಮಾಡಿಕೊಂಡ ಲವ್ವು, ಡವ್ವು ಅವಾಂತರಗಳನ್ನು, ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹೇಳೋ ಕಥೆಯೇ ಪದವಿಪೂರ್ವ. ಟೀಸರ್ ನಲ್ಲೇ ಒಂದು ಮಜಾ ಇದ್ದು, ಆ ಮಜಾ ಈಗ ಲಹರಿ ಮ್ಯೂಸಿಕ್​ನ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದೆ. ಲವ್ ಸ್ಟೋರಿ ಜೊತೆಗೆ ಅಪ್ಪ ಮಗನ ಬಾಂಧವ್ಯ ಮತ್ತು ಪ್ರತಿಯೊಬ್ಬರ ಕಾಲೇಜ್ ದಿನಗಳನ್ನು ನೆನಪಿಸುವ ಚಿತ್ರವಿದು.

ಇನ್ನು, ಮೊದಲ ಬಾರಿಗೆ ನಿರ್ದೇಶನ ಮಾಡಿರೋ ಹರಿಪ್ರಸಾದ್ ಜಯಣ್ಣ ಮಾತನಾಡಿ ದುಡ್ಡು ಕೊಟ್ಟು ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕನಿಗೆ ಮೋಸ ಆಗೋಲ್ಲ ಎಂದು ಹೇಳಿದರು. ಯುವ ಪ್ರತಿಭೆಗಳಾದ ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ತಮ್ಮ ಪಾತ್ರದ ಬಗ್ಗೆ ಹಂಚಿಕೊಂಡರು.

ಇವರ ಜೊತೆಗೆ ವಿಶೇಷ ಪಾತ್ರದಲ್ಲಿ ಅದಿತಿ ಪ್ರಭುದೇವ, ದಿವ್ಯಾ ಉರುಡುಗ, ನಯನ ಹಾಗೂ ರಂಘಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಪೋಷಕ ನಟರ, ಕಾಮಿಡಿ ಕಿಲಾಡಿಗಳ ಮೇಳವೂ ಇದೆ. ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗಿರೋ ಸಿನಿಮಾ ಸದ್ಯ ಟೀಸರ್ ನಿಂದ ಸಿನಿಮಾ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಚಿತ್ರ ಇದೇ ಡಿಸೆಂಬರ್ 30ಕ್ಕೆ ತೆರೆಗೆ ಬರಲು ರೆಡಿಯಾಗಿದೆ.

ಇದನ್ನೂ ಓದಿ :ನಟಿ ಭಾರತಿ ತರ ಇರೋ ಹುಡುಗಿ ಮದುವೆ ಆಗ್ಬೇಕು ಅಂತಾ ಅನಿಸುತ್ತಿತ್ತು: ಹಳೆ ನೆನಪು ಮೆಲುಕು ಹಾಕಿದ ಜಗ್ಗೇಶ್

ABOUT THE AUTHOR

...view details