ಕರ್ನಾಟಕ

karnataka

ETV Bharat / entertainment

Jaane Jaan trailer: ಒಟಿಟಿಗೆ ಎಂಟ್ರಿ ಕೊಡಲು ಕರೀನಾ ಕಪೂರ್​ ಖಾನ್​ ರೆಡಿ! - ಜೈದೀಪ್​ ಅಹ್ಲಾವತ್​

Jaane Jaan trailer out: ಕರೀನಾ ಕಪೂರ್​ ಖಾನ್​ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜಾನೆ ಜಾನ್​​'ನ ಟ್ರೇಲರ್​ ಅನಾವರಣಗೊಂಡಿದೆ.

Jaane Jaan trailer
ಜಾನೆ ಜಾನ್​​ ಟ್ರೇಲರ್​

By ETV Bharat Karnataka Team

Published : Sep 5, 2023, 7:45 PM IST

ಬಾಲಿವುಡ್​ ಬೇಬೋ ಕರೀನಾ ಕಪೂರ್​ ಖಾನ್​ ಮೂಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​​ ಜಾನೆ ಜಾನ್​​ (Jaane Jaan). ಟೈಟಲ್​ನಿಂದಲೇ ಕುತೂಹಲ ಮೂಡಿಸಿರುವ ಸಿನಿಮಾದ ಟ್ರೇಲರ್​ ಅನ್ನು ಇಂದು ಅನಾವರಣಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಟ್ರೇಲರ್ ಬಿಡುಗಡೆಗೊಳಿಸಿರುವ ನೆಟ್​ಫ್ಲಿಕ್ಸ್, ''ಸಮಯ ಹತ್ತಿರ ಬಂದಿದೆ, ಸೆಪ್ಟೆಂಬರ್​​ 21 ರಂದು ನಿಮ್ಮನ್ನು ಭೇಟಿಯಾಗುತ್ತೇವೆ, ಜಾನೆ ಜಾನ್​​'' ಎಂದು ಬರೆದುಕೊಂಡಿದ್ದಾರೆ.

ಸುಜೋಯ್​ ಘೋಷ್​ ಅವರ ಕ್ರಿಮಿನಲ್​, ಥ್ರಿಲ್ಲರ್​​ ನಿರ್ದೇಶನ ಶೈಲಿ ಈ ಟ್ರೇಲರ್​ನಲ್ಲಿ ಸದ್ದು ಮಾಡಿದೆ. ಟ್ರೇಲರ್​ ನಿಮ್ಮನ್ನು ಜಾನೆ ಜಾನ್​​ ಜಗತ್ತಿಗೆ ಕೊಂಡೊಯ್ಯುತ್ತದೆ. ಬಾಲಿವುಡ್​ ಬೇಬೋ ಕರೀನಾ ಕಪೂರ್​ ಖಾನ್​ ಸಂಪೂರ್ಣ ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಕರೀನಾ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಜಬ್​ ವಿ ಮೆಟ್​ ಸಿನಿಮಾ ನಟಿ ಜೊತೆಗೆ ಜೈದೀಪ್​ ಅಹ್ಲಾವತ್​ ಮತ್ತು ಲಸ್ಟ್ ಸ್ಟೋರಿಸ್​ 2 ಖ್ಯಾತಿಯ ವಿಜಯ್​ ವರ್ಮಾ ಕಾಣಿಸಿಕೊಂಡಿದ್ದಾರೆ.

ಜೈದೀಪ್​ ಅಹ್ಲಾವತ್​ ಅವರು ಸಿನಿಮಾಗಾಗಿ ದೊಡ್ಡ ರೂಪಾಂತರಕ್ಕೆ ಒಳಗಾಗಿದ್ದಾರೆ. ಇದು ಅವರಿಗೆ ಹೊಸತಲ್ಲ. ಜೈದೀಪ್​ ಅಹ್ಲಾವತ್ ಈಗಾಗಲೇ ತಮ್ಮ ವಿಭಿನ್ನ ಪಾತ್ರ ಮತ್ತು ನಟನೆಗೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ನಟನ ನೋಟಗಳು ಪ್ರತೀ ಸಿನಿಮಾದಲ್ಲೂ ಗಮನ ಸೆಳೆಯುತ್ತವೆ, ವಿಭಿನ್ನವಾಗಿರುತ್ತದೆ. ಫಾರ್ ಎ ಚೇಂಜ್​ ಎನ್ನುವಂತೆ ಲಸ್ಟ್ ಸ್ಟೋರಿಸ್​ 2 ನಟ ವಿಜಯ್​ ವರ್ಮಾ ವಿಭಿನ್ನ ಲುಕ್​ನಲ್ಲಿ ಸಿನಿಪ್ರಿಯರಿಗೆ ದರ್ಶನ ಕೊಟ್ಟಿದ್ದಾರೆ. ಹೌದು, ಕ್ರೈಮ್​ ಥ್ರಿಲ್ಲರ್ ಕಥಾಹಂದರದಲ್ಲಿ ವಿಜಯ್​ ಅವರು ಯುವ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜಾನೆ ಜಾನ್ ಸಿನಿಮಾ ಕಿಗೊ ಹಿಗಶಿನೋ (Keigo Higashino) ಅವರ ಕಾದಂಬರಿ 'ದಿ ಡಿವೋಷನ್ ಆಫ್​ ಸಸ್ಪೆಕ್ಟ್ ಎಕ್ಸ್' (The Devotion of Suspect X) ಅನ್ನು ಆಧರಿಸಿದೆ. 2005ರ ನಾವೆಲ್​​ ಆನ್ನು ಆಧರಿಸಿ 2023 ರಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಕೊಲೆ ಪ್ರಕರಣವನ್ನು ಬೆನ್ನಟ್ಟಿದವರ ನಡುವಿನ ಬುದ್ಧಿವಂತಿಕೆಯ ಯುದ್ಧವನ್ನು ಸಿನಿಮಾ ಪ್ರದರ್ಶಿಸಲಿದೆ. ಜಾನೆ ಜಾನ್ ಸಿನಿಮಾ ಕಥೆ ಒಂಟಿ ಮಹಿಳೆ ಮೇಲೆ ಕೇಂದ್ರೀಕೃತವಾಗಿದ್ದು, ನೆರೆಹೊರೆಯವರ ಸಹಾಯದಿಂದ ಗಂಡನ (ದೂರವಾದ) ಸಾವನ್ನು ಮುಚ್ಚಿಡಲು ಪ್ರಯತ್ನಿಸುವ ವಿಷಯಗಳು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಇದನ್ನೂ ಓದಿ:ಫಸ್ಟ್ ಡೇಟ್​ಗೆ ಕತ್ರಿನಾರನ್ನು ವಿಕ್ಕಿ ಕೌಶಲ್​ ಇನ್​ವೈಟ್​ ಮಾಡಿದ್ದೇಗೆ ಗೊತ್ತಾ? ಸಖತ್​ ಸಿಂಪಲ್​ ಇವ್ರು!

ಒಟಿಟಿ ಜಗತ್ತಿಗೆ ಎಂಟ್ರಿ ಕೊಡಲು ಸಜ್ಜಾಗಿರುವ ನಟಿ ಕರೀನಾ ಟ್ರೇಲರ್​ ಬಿಡುಗಡೆಗೂ ಮುನ್ನ ಒಟಿಟಿ ಚೊಚ್ಚಲ ಚಿತ್ರದ ಕುರಿತ ಘೋಷಣೆಯ ವಿಡಿಯೋದೊಂದಿಗೆ ಗಮನ ಸೆಳೆದಿದ್ದರು. ಒಟಿಟಿಗೆ ಎಂಟ್ರಿ ಕೊಡುವ ಬಗ್ಗೆ ನಟಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದರು. '' ವಿಶೇಷ ಯೋಜನೆಯೊಂದಿಗೆ ನೆಟ್​ಫ್ಲಿಕ್ಸ್​ನಲ್ಲಿ ಬರಲು ಉತ್ಸುಕಳಾಗಿದ್ದೇನೆ, 23 ವರ್ಷಗಳ ನಂತರ ಹೊಸ ಲಾಂಚ್​ನಂತೆ ಭಾಸವಾಗುತ್ತಿದೆ'' ಎಂದು ತಿಳಿಸಿದ್ದರು. ಸೆಪ್ಟೆಂಬರ್​​ 21 ರಿಂದ ನೆಟ್​ಫ್ಲಿಕ್ಸ್ ನಲ್ಲಿ ಜಾನೆ ಜಾನ್​ ಸಿನಿಮಾ ಲಭ್ಯವಾಗಲಿದೆ.

ಇದನ್ನೂ ಓದಿ:Kushi success: ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಖುಷಿ ನಟ ವಿಜಯ್​ ದೇವರಕೊಂಡ

ABOUT THE AUTHOR

...view details