ಮುಂಬೈ:ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರು ಮೇಕಪ್ ಕಲಾವಿದೆ ಶುರಾ ಖಾನ್ ಜೊತೆಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಮತ್ತುಆಪ್ತ ಸ್ನೇಹಿತರಿಗಾಗಿ ಆತ್ಮೀಯ ಕೂಟ ಏರ್ಪಡಿಸಿದ್ದರು. ಈ ಮೂಲಕ ಸಂತೋಷದ ವಾತಾವರಣ ನೆಲೆಗೊಳ್ಳುವಂತೆ ಮಾಡಲಾಗಿತ್ತು.
ವಿಹಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಅರ್ಬಾಜ್ ಖಾನ್ ತಮ್ಮ ಮದುವೆಯ ಫೋಟೋಗಳನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ''ಪ್ರೀತಿ ಪಾತ್ರರ ಸಮ್ಮುಖದಲ್ಲಿ ನಾನು ಹಾಗೂ ನನ್ನವಳು ಜೊತೆಯಾಗಿ ಪ್ರೀತಿಯ ಜೀವನವನ್ನು ಆರಂಭ ಮಾಡುತ್ತಿದ್ದೇವೆ. ನಮಗೆ ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗಳು ಬೇಕು'' ಎಂದು ಈ ಫೋಟೋದ ಅಡಿ ಬರಹ ಬರೆದುಕೊಂಡಿದ್ದರು.
ನಿಖಾದ ಫೋಟೋಗಳನ್ನು ಹಂಚಿಕೊಂಡ ನಟ: ಬಾಲಿವುಡ್ ನಟ ಅರ್ಬಾಜ್ ಖಾನ್, ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ನಟ ಅರ್ಬಾಜ್ ಖಾನ್, ತಮ್ಮ ನಿಖಾ ಸಮಾರಂಭದ ಫ್ಯಾಮಿಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿವೆ. ವರ ಅರ್ಬಾಜ್, ನಿಖಾ ಸಮಾರಂಭದ ನೂತನ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ಹಿತೈಷಿಗಳು ಮತ್ತು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.
'ಹಲೋ ಬ್ರದರ್' ಖ್ಯಾತಿಯ ನಟ, ತಮ್ಮ ನಿಖಾ ಸಮಾರಂಭದ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಛಾಯಾಚಿತ್ರವು ಒಂದು ಸುಂದರವಾದ ಕ್ಷಣವನ್ನು ಕಣ್ಮುಂದೆ ತರುತ್ತದೆ. ಖಾಜಿಯೊಬ್ಬರು ನಿಖಾ ಕಾರ್ಯಕ್ರಮ ನಿರ್ವಹಿಸುತ್ತಿರುವುದು, ಹಾಗೂ ವಧು- ವರ ಇಬ್ಬರು ಗಮನವಿಟ್ಟು ಖಾಜಿ ಅವರು ಹೇಳುವುದನ್ನು ಕೇಳುತ್ತಿರುವುದು ಈ ಚಿತ್ರದಲ್ಲಿ ಕಾಣುತ್ತದೆ. ಸಲೀಂ ಖಾನ್ ಮತ್ತು ಸಲ್ಮಾ ಖಾನ್, ಅರ್ಬಾಜ್ ಅವರ ಪೋಷಕರು, ಜೊತೆಗೆ ಮಗ ಅರ್ಹಾನ್ ಖಾನ್ ಮತ್ತು ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಎಲ್ಲರೂ ನಗುತ್ತಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಅರ್ಬಾಜ್ ಖಾನ್ ಹೂವಿನ ಚಿತ್ರ ಬಿಡಿಸಿರುವ ಬೀಚ್ ಬಣ್ಣದ ಬಂಧ್ಗಾಲ ಉಡುಪು ತೊಟ್ಟಿದ್ದರೇ, ವಧು ಶುರಾ ಖಾನ್ ಹಗುರವಾದ ಪೀಚ್ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದರು. ಇನ್ನು ಅರ್ಬಾಜ್ ಖಾನ್ ಅವರ ಮೊದಲ ಪತ್ನಿ ಮಲೈಕಾ ಅರೋರಾ ಮತ್ತು ಅವರ ಮಗ ಅರ್ಹಾನ್ ಖಾನ್ ಕಪ್ಪು ಸೂಟ್‌ನಲ್ಲಿ ಕಾಣಿಸಿದ್ದರು. ಇನ್ನು ಅರ್ಬಾಜ್ ಖಾನ್ ಪೋಷಕರಾದ ಸಲೀಂ ಹಾಗೂ ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ಅವರ ಪುತ್ರರಾದ ನಿರ್ವಾನ್, ಯೋಹಾನ್ ಹಾಗೂ ಸಹೋದರಿ ಅಲ್ವಿರಾ ಖಾನ್ ಮದುವೆ ಮುಂಚಿತವಾಗಿ ಅರ್ಪಿತಾ ಅವರ ಮನೆಗೆ ಬಂದಿದ್ದರು.