ಮುಂಬೈ:ಸಾಂಪ್ರದಾಯಿಕ ಸಾರ್ವಜನಿಕ ಪ್ರದರ್ಶನದ ಮೂಲಕ ಒಂದು ಉತ್ತಮ ಸಂಗೀತವನ್ನು ಕೇಳುಗರಿಗೆ ಉಣಬಡಿಸುವುದೇ ನಮ್ಮ ಉದ್ದೇಶ ಎಂದು ಲೈವ್ ಸಂಗೀತ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿರುವ ಗಾಯಕ, ಸಂಯೋಜಕ ಶಂಕರ್ ಮಹಾದೇವನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಡಿ. 3 ರಂದು ಮುಂಬೈಯ ಷಣ್ಮುಖಾನಂದ ಸಭಾಂಗಣದಲ್ಲಿ ರಾಹುಲ್ ರಾನಡೆ ಮತ್ತು ಡ್ಯೂಕ್ಸ್ ಫಾರ್ಮಿಂಗ್ ಫಿಲಂಸ್ ಆಯೋಜನೆ ಮಾಡಿರುವ 'ಶಂಕರ್ ಮಹಾದೇವನ್ ಲೈವ್ ಇನ್ ಕನ್ಸರ್ಟ್' ಕಾರ್ಯಕ್ರಮದಲ್ಲಿ ಒಂದು ಸ್ವಲ್ಪ ಸಮಕಾಲೀನ ಜೊತೆಗೆ ಒಂದಷ್ಟು ಶಾಸ್ತ್ರೀಯ ಸಂಗೀತದ ಹೂರಣವನ್ನು ನೀಡಲು ಸಜ್ಜಾಗಿರುವ ಶಂಕರ್ ಮಹಾದೇವನ್ ಸಜ್ಜಾಗಿದ್ದಾರೆ.
'ಹಿಂದಿನ ದಿನಗಳಲ್ಲಿ ಕಲಾವಿದರೊಬ್ಬರು ಸಭಾಂಗಣದಲ್ಲಿ ಪ್ರದರ್ಶನ ನೀಡುತ್ತಾರೆಂದರೆ ಆ ಸಂಗೀತವನ್ನು ಆಸ್ವಾದಿಸಲು ಜನರು ಟಿಕೆಟ್ ಖರೀದಿಸುತ್ತಿದ್ದರು. ಆದರೆ ನಾವು ಸಾಂಪ್ರದಾಯಿಕ, ಸಾಮಾನ್ಯ ಸಾರ್ವಜನಿಕ ಪ್ರದರ್ಶನಗಳನ್ನು ನೀಡಲು ಬಯಸಿದ್ದೇವೆ. ಇಲ್ಲಿ ಸಂಗೀತಪ್ರೇಮಿಗಳಿಗೆ ಉತ್ತಮ ಸಂಗೀತ ನೀಡುವುದಷ್ಟೇ ನಮ್ಮ ಉದ್ದೇಶ' ಎಂದಿದ್ದಾರೆ ಶಂಕರ್ ಮಹಾದೇವನ್.
ಇನ್ನೆರಡು ದಿನಗಳಷ್ಟೇ ಬಾಕಿಯಿರುವ ಸಂಗೀತ ಕಾರ್ಯಕ್ರಮದಲ್ಲಿ ಮಹದೇವನ್ ಅವರು ಬಾಲಿವುಡ್, ಮರಾಠಿ, ಜಾನಪದ, ಫ್ಯೂಷನ್ ಮತ್ತು ಭಕ್ತಿ ಪ್ರಕಾರಗಳು ಸೇರಿದಂತೆ ಜನಪ್ರಿಯ ಹಾಡುಗಳನ್ನು ಜನರಿಗಾಗಿ ಪ್ರಸ್ತುತಪಡಿಸಲಿದ್ದಾರೆ. ಈ ಸಂಗೀತಗೋಷ್ಠಿಯ 'ಲೈವ್ ಸ್ಟ್ರಿಂಗ್ಸ್' ವಿಭಾಗದಲ್ಲಿ 32 ಹಿಮ್ಮೇಳ ಸಂಗೀತಗಾರರು ಭಾಗವಹಿಸಲಿದ್ದಾರೆ. ಶ್ರೀನಿಧಿ ಘಾಟಾಟೆ ಮತ್ತು ರಮಣ್ ಮಹಾದೇವನ್ ಸೇರಿದಂತೆ ಎಂಟು ಕೋರಸ್ ಗಾಯಕರು ಮಹದೇವನ್ ಅವರಿಗೆ ಜೊತೆಯಾಗಲಿದ್ದಾರೆ.