ಕರ್ನಾಟಕ

karnataka

ETV Bharat / entertainment

ವಿಜಯ್​ - ಸಮಂತಾ ಸಿನಿಮಾ ಶೂಟಿಂಗ್​ ಕಂಪ್ಲೀಟ್​: ಕೇಕ್​ ಕತ್ತರಿಸಿ 'ಖುಷಿ'ಪಟ್ಟ ಚಿತ್ರತಂಡ - ಸ್ಟಾರ್​ ಡೈರೆಕ್ಟರ್​ ಶಿವ ನಿರ್ವಾಣ

ವಿಜಯ್​ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಖುಷಿ' ಚಿತ್ರದ ಶೂಟಿಂಗ್​ ಪೂರ್ಣಗೊಂಡಿದೆ.

Kushi
ಖುಷಿ

By

Published : Jul 15, 2023, 7:41 PM IST

ನಟರಾದ ವಿಜಯ್​ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಅಭಿನಯದ ಬಹುನಿರೀಕ್ಷಿತ 'ಖುಷಿ' ಚಿತ್ರದ ಶೂಟಿಂಗ್​ ಶನಿವಾರ ಮುಕ್ತಾಯಗೊಂಡಿದೆ.​ ಅದ್ಧೂರಿ ಸಂಭ್ರಮಾಚರಣೆಯೊಂದಿಗೆ ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಕೇಕ್​ ಕತ್ತರಿಸಿ 'ಖುಷಿ' ಪಟ್ಟಿದ್ದಾರೆ. ಸೆಲೆಬ್ರೇಷನ್ ಮಾಡಿರುವ​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಮೂಲಕ ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ಕುತೂಹಲ ಗರಿಗೆದರಿದೆ.

'ಖುಷಿ' ಚಿತ್ರವನ್ನು ನವೀನ್ ಯೆರ್ನೇನಿ, ಯಲಮಂಚಿಲಿ ರವಿಶಂಕರ್ ಮತ್ತು ಸಿ.ವಿ ಮೋಹನ್​ ಅವರು ಮೈತ್ರಿ ಮೂವೀ ಬ್ಯಾನರ್​ ಅಡಿ ನಿರ್ಮಿಸಿದ್ದಾರೆ. ಸ್ಟಾರ್​ ಡೈರೆಕ್ಟರ್​ ಶಿವ ನಿರ್ವಾಣ ಈ ಸಿನಿಮಾಗೆ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. ಖುಷಿ ಬಗ್ಗೆ ಅಪ್​ಡೇಟ್​ ಹಂಚಿಕೊಳ್ಳುವ ಚಿತ್ರತಂಡವು ಸೆಟ್​ನ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದೆ. ಶೂಟಿಂಗ್​ ಮುಕ್ತಾಯಗೊಳಿಸಿರುವುದಾಗಿ ತಿಳಿಸಿದೆ.

ಹಂಚಿಕೊಂಡಿರುವ ಪೋಸ್ಟ್​ನಲ್ಲಿ, "ಇದು ಒಂದು ಸುತ್ತು. VD (ವಿಜಯ್ ದೇವರಕೊಂಡ) ಖುಷಿ ಚಿತ್ರೀಕರಣ ಪೂರ್ಣಗೊಂಡಿದೆ" ಎಂದು ಹೇಳಿದೆ. ವಿಡಿಯೋದಲ್ಲಿ ವಿಜಯ್​ ಅವರನ್ನು ಇಡೀ ಚಿತ್ರತಂಡ ಸುತ್ತುವರೆದಿರುವುದನ್ನು ಕಾಣಬಹುದು. "ಪೋಸ್ಟ್​ ಪ್ರೊಡಕ್ಷನ್​ ಕೆಲಸ ಬಾಕಿ ಇದೆ. ಸೆಪ್ಟೆಂಬರ್ 1, 2023 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಮೈತ್ರಿ ಮೂವೀ ಮೇಕರ್ಸ್​ ತಿಳಿಸಿದೆ.

ಇದನ್ನೂ ಓದಿ:Project K: ಲಕೋಟೆಯಲ್ಲಿದೆ 'ಪ್ರಾಜೆಕ್ಟ್​ ಕೆ' ಹೆಸರು: ಶೀರ್ಷಿಕೆ ಇದಾಗಿರಬಹುದೆಂದು ಊಹಿಸಿದ ಸಿನಿಪ್ರೇಮಿಗಳು

ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ 'ಖುಷಿ' ಚಿತ್ರದ ಕೆಲವು ದೃಶ್ಯಗಳು ವಿಜಯ್​ ಮತ್ತು ಸಮಂತಾ ಆನ್ ​ಸ್ಕ್ರೀನ್​ ರೋಮ್ಯಾಂಟಿಕ್​ ಅದ್ಬುತವಾಗಿದೆ ಎಂಬ ಸುಳಿವು ನೀಡಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಸೆಟ್ಟೇರಿದ ಈ ಚಿತ್ರ ನಟಿ ಸಮಂತಾ ಚಿಕಿತ್ಸೆ ಹಿನ್ನೆಲೆ ಬಿಡುಗಡೆ ವಿಳಂಬಗೊಂಡಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಸೆಪ್ಟಂಬರ್​ 1ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರವು 60 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ.

'ಖುಷಿ' ಚಿತ್ರವು ಕಂಪ್ಲೀಟ್​ ಲವ್​ ಸ್ಟೋರಿ ಆಗಿದ್ದು, ಈ ಪ್ರೀತಿಯ ಪ್ರಯಾಣ ನೋಡುಗರಿಗೆ ಅದ್ಬುತ ಅನುಭವ ನೀಡಲಿದೆ ಎನ್ನಲಾಗಿದೆ. ಸಮಂತಾ ಮತ್ತು ವಿಜಯ್​ ದೇವರಕೊಂಡ ನಟನೆಯ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಇದೇ ಜೋಡಿ ಕೀರ್ತಿ ಸುರೇಶ್​ ಅಭಿನಯದ 'ಮಹಾನಟಿ' ಚಿತ್ರದಲ್ಲಿ ಕಾಣಿಸಿಕೊಂಡಿತ್ತು. 'ಖುಷಿ' ಚಿತ್ರದಲ್ಲಿ ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ನಟಿಸಿದ್ದಾರೆ. ಹೇಶಂ ಸಂಗೀತ, ಜಿ.ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

ಇನ್ನು ಈಗಾಗಲೇ ಖುಷಿ ಚಿತ್ರದ ನನ್ನ ರೋಜಾ ನೀನೇ ಹಾಡನ್ನು ವಿಜಯ್​ ದೇವರಕೊಂಡ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡು ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದು, ಹೊಸ ಸೆನ್ಸೆಷನ್​ ಹುಟ್ಟು ಹಾಕಿದೆ. ಕಾಶ್ಮೀರದಲ್ಲಿ ಶೂಟಿಂಗ್​ ಆಗಿರುವ ಈ ಚಿತ್ರದ ಕೆಲವು ಸೀನ್​ಗಳು ಕೂಡ ಅಭಿಮಾನಿಗಳು ಮನಸೋತಿದ್ದಾರೆ.

ಇದನ್ನೂ ಓದಿ:ಸಿನಿ ಕೆಲಸಗಳು ಪೂರ್ಣ: ಅಧ್ಯಾತ್ಮಿಕ ಪ್ರವಾಸ ಕೈಗೊಂಡ ಸಮಂತಾ - ತಮಿಳುನಾಡು ದೇವಸ್ಥಾನಕ್ಕೆ ನಟಿ ಭೇಟಿ

ABOUT THE AUTHOR

...view details