ಕರ್ನಾಟಕ

karnataka

ETV Bharat / entertainment

ಮಾರ್ಟಿನ್ ಟೀಸರ್ ರಿಲೀಸ್: ಧ್ರುವ ಸರ್ಜಾಗೆ ಕಥೆ ಒಪ್ಪಿಸೋದು ತುಂಬಾ ಕಷ್ಟ- ಅರ್ಜುನ್ ಸರ್ಜಾ - ನಟ ಅರ್ಜುನ್ ಸರ್ಜಾ

ಮಾರ್ಟಿನ್ ಚಿತ್ರದಲ್ಲಿ ನಾನು ಅರ್ಜುನ್ ಪಾತ್ರ ಮಾಡ್ತಿದ್ದೀನಿ.‌ ಚಿತ್ರದಲ್ಲಿ ದೇಶಭಕ್ತಿ, ಎಮೋಷನ್, ಲವ್ ಸ್ಟೋರಿ ಎಲ್ಲವೂ ಇದೆ- ನಟ ಧ್ರುವ ಸರ್ಜಾ.

ನಟ ಅರ್ಜುನ್ ಸರ್ಜಾ
ನಟ ಅರ್ಜುನ್ ಸರ್ಜಾ

By

Published : Feb 23, 2023, 10:54 PM IST

Updated : Feb 23, 2023, 11:00 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶನ ಮತ್ತು ನಿರ್ಮಾಪಕ ಉದಯ್ ಕೆ.ಮೆಹ್ತಾ ನಿರ್ಮಾಣದ ಮಾರ್ಟಿನ್ ಚಿತ್ರದ ಟೀಸರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಅನಾವರಣಗೊಂಡಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರಬಿಂದುವಾಗಿ ಅರ್ಜುನ್ ಸರ್ಜಾ ಆಗಮಿಸಿ ಚಿತ್ರತಂಡಕ್ಕೆ ಸಾಥ್​ ನೀಡಿದರು. ಧ್ರುವ ಸರ್ಜಾ, ಎ.ಪಿ.ಅರ್ಜುನ್, ಉದಯ್ ಕೆ.ಮೆಹ್ತಾ, ನಟಿಯಾರದ ವೈಭವಿ ಶಾಂಡಿಲ್ಯ, ಕ್ಯಾಮರಾಮ್ಯಾನ್ ಸತ್ಯ ಹೆಗ್ಡೆ, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ, ಸ್ಟಂಟ್ ಮಾಸ್ಟರ್‌ಗಳಾದ ರಾಮ ಲಕ್ಷ್ಮಣ್ ಸೇರಿದಂತೆ ಇಡೀ ಮಾರ್ಟಿನ್ ಟೀಂ ಉಪಸ್ಥಿತರಿದ್ದರು.

ಗುರುವಾರ ಸಂಜೆ 5.45ಕ್ಕೆ ಚಿತ್ರದ ಟೀಸರ್ ಅನಾವರಣಗೊಂಡಿತು. ಮತ್ತೆ ಕನ್ನಡ ಚಿತ್ರರಂಗವನ್ನು ಮತ್ತೊಂದು ಮಟ್ಟಕ್ಕೆ ಕರೆದುಕೊಂಡು ಹೋಗುವ ಎಲ್ಲಾ ಸೂಚನೆಗಳು ಟೀಸರ್​ನಲ್ಲಿ ಸಿಕ್ಕಿವೆ. ಟೀಸರ್‌ನ ಒಂದೊಂದು ಸೀನ್​ಗಳು ನೋಡುಗರನ್ನು ರೋಮಾಂಚನಗೊಳಿಸುತ್ತಿದೆ. ಹಾಲಿವುಡ್ ಫೈಟರ್ಸ್‌ಗಳ ಜೊತೆ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದಿದೆ.

ನಟ ಅರ್ಜುನ್ ಸರ್ಜಾ

ಯೂನಿವರ್ಸಲ್ ಕಥೆ: ಮಾರ್ಟಿನ್ ಚಿತ್ರದ ಹೈಲೆಟ್ಸ್ ಅಂದ್ರೆ ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ ಹಾಕಿರುವ ಅದ್ದೂರಿ ಸೆಟ್ಟುಗಳು, ಸತ್ಯ ಹೆಗ್ಡೆ ಕ್ಯಾಮರಾ ವರ್ಕ್, ರಾಮ‌ ಲಕ್ಷ್ಮಣ್ ಸಾಹಸ ನಿರ್ದೇಶನ ಚಿತ್ರದ ಸ್ಟ್ರೆಂತ್​​. ಬಹುಭಾಷೆ ನಟನಾಗಿ ಸಕ್ಸಸ್ ಕಂಡಿರುವ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.

ಅರ್ಜುನ್ ಸರ್ಜಾ ಮಾತನಾಡಿ, ಮಾರ್ಟಿನ್ ಚಿತ್ರದ ಕಥೆ ಬರೆದಿದ್ದೇನೆ. ಇದೊಂದು ಯೂನಿವರ್ಸಲ್ ಕಥೆ.‌ ಎಲ್ಲಾ ವರ್ಗದ ಕಥೆ.‌ ಧ್ರುವ ಸರ್ಜಾಗೆ ಕಥೆ ಒಪ್ಪಿಸೋದು ದೊಡ್ಡ ಚಾಲೆಂಜಿಂಗ್ ಎಂದರು. ಧ್ರುವ ಸರ್ಜಾ ಮಾತನಾಡಿ, ನಾನು ಅರ್ಜುನ್ ಪಾತ್ರ ಮಾಡ್ತಾ ಇದ್ದೀನಿ.‌ ದೇಶಭಕ್ತಿ, ಎಮೋಷನ್, ಲವ್ ಸ್ಟೋರಿ ಎಲ್ಲವೂ ಇದೆ ಎಂದು ತಿಳಿಸಿದರು.

ಧ್ರುವ ಸರ್ಜಾಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್‌, ನಿಕಿತೀನ್‌ ಧೀರ್‌ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಬೆಂಗಳೂರು, ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿದೆ. ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕ ರವಿವರ್ಮ ಹಾಗೂ ರಾಮ್‌ ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ.

ನಟ ಧ್ರುವ ಸರ್ಜಾ

ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಕೃಷ್ಣನ್‌ ಲವ್ ಸ್ಟೋರಿ, ಬಚ್ಚನ್, ಬ್ರಹ್ಮಚಾರಿ ಚಿತ್ರಗಳನ್ನು ನಿರ್ಮಾಣ ಮಾಡಿರೋ ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಹತ್ತು ಹಲವು ವಿಶೇಷತೆಗಳನ್ನು ಇಟ್ಟುಕೊಂಡಿರುವ ಮಾರ್ಟಿನ್​ ಯಾವಾಗ ಬಿಡುಗಡೆ ಆಗುತ್ತೆ ಅನ್ನೋದು ಗೊತ್ತಾಗಲಿದೆ.

ಇದನ್ನೂ ಓದಿ:ಮಾರ್ಟಿನ್​​​ ಟೀಸರ್​ ಟಿಕೆಟ್​​​​ನಿಂದ ಬಂದ ಹಣ ಗೋ ಶಾಲೆಗಳ ಅಭಿವೃದ್ಧಿಗೆ ಬಳಕೆ!

Last Updated : Feb 23, 2023, 11:00 PM IST

ABOUT THE AUTHOR

...view details