ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತೆ ಗರ್ಭಿಣಿ ಎಂಬ ಗಾಳಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತಿ ಸೈಫ್ ಅಲಿ ಖಾನ್ ಮತ್ತು ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಸದ್ಯ ಯುರೋಪ್‌ನಲ್ಲಿ ಎಂಜಾಯ್ ಮೂಡ್ನಲ್ಲಿರುವ ಅವರು, ತಮ್ಮ ಬಗೆಗಿನ ವದಂತಿ ಕಂಡು ಅಚ್ಚರಿಗೊಂಡಿದ್ದಾರೆ.
'ಗಾಯ್ಸ್, ನಾನು ಗರ್ಭಿಣಿಯಲ್ಲ, ದೇಶದ ಜನಸಂಖ್ಯೆಗೆ ಸೈಫ್ ಈಗಾಗಲೇ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ' - ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್
ತೈಮೂರ್ ಮತ್ತು ಜೆಹ್ ಎಂಬಿಬ್ಬರು ಪುತ್ರರನ್ನು ಹೊಂದಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ 3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಈ ಬಗ್ಗೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ತಾರೆಯ ಇತ್ತೀಚಿನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದನ್ನು ಗಮನಿಸಿದ ಅವರ ಅಭಿಮಾನಿಗಳು, ನೀವು ಮತ್ತೆ ತಾಯಿಯಾಗಿದ್ದೀರಾ ಅಂತಾ ಪ್ರಶ್ನಿಸಿದ್ದಾರೆ. ಈ ವದಂತಿಗಳನ್ನು ಅಲ್ಲಗಳೆದ ಕರೀನಾ, ಹುಡುಗರೇ ಶಾಂತವಾಗಿರಿ, ನಾನು ಗರ್ಭಿಣಿಯಲ್ಲ. ನಮ್ಮ ದೇಶದ ಜನಸಂಖ್ಯೆಗೆ ಸೈಫ್ ಅಲಿ ಖಾನ್ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಬರೆದಿದ್ದಾರೆ.
ಅಕ್ಟೋಬರ್ 16, 2012ರಂದು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ವಿವಾಹವಾಗಿದ್ದಾರೆ. ಇದಕ್ಕೂ ಮುನ್ನ ಸೈಫ್ ಅಮೃತಾ ಸಿಂಗ್‌ರನ್ನು ವರಿಸಿದ್ದರು. 2004 ರಲ್ಲಿ ಅವರಿಂದ ವಿಚ್ಛೇದನ ತೆಗೆದುಕೊಳ್ಳುವ ಮೂಲಕ 13 ವರ್ಷಗಳ ವೈವಾಹಿಕ ಸಂಬಂಧದಿಂದ ಕೊನೆಗೊಳಿಸಿದ್ದರು. ಮೊದಲ ಮದುವೆಯಲ್ಲಿ ಇವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಈ ಮಕ್ಕಳು ಅಮೃತಾ ಸಿಂಗ್ ಜೊತೆಗಿದ್ದಾರೆ.