ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಗರ್ಭಿಣಿಯಾಗಿರುವಂತೆ ಕಾಣುತ್ತಿದ್ದು ನೆಟಿಜನ್‌ಗಳು ಈ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಅವರ ಹೊಸ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ. ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಆಗಮಿಸುತ್ತಿರುವ ವಿಡಿಯೋ ಇದಾಗಿದೆ.
ಮುಂಬೈ ವಿಮಾನ ನಿಲ್ದಾಣದಿಂದ ಹೊರಗಡೆ ಬರುತ್ತಿದ್ದಂತೆ ತಮ್ಮ ಹೊಟ್ಟೆ ಮೇಲೆ ಕೈ ಇಟ್ಟುಕೊಂಡು ಬರುತ್ತಿದ್ದ ದೃಶ್ಯ ಇದೀಗ ಜಾಲತಾಣದಲ್ಲಿ ಜಾಗ ಪಡೆದಿದೆ. ಅಲ್ಲದೇ ನಟಿಯ ಹೊಟ್ಟೆ ಸ್ವಲ್ಪ ಉಬ್ಬಿದ್ದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಟ್ಟೆ ಭಾಗ ಕಾಣದ ರೀತಿಯಲ್ಲಿ ಕೈ ಅಡ್ಡ ಇಟ್ಟುಕೊಂಡು ಬರುತ್ತಿದ್ದ ವಿಡಿಯೋ ನೋಡಿದ ನೆಟಿಜನ್ಸ್ ಐಶ್ವರ್ಯಾ ಮತ್ತೆ ಗರ್ಭಿಣಿಯಾಗಿರಬಹುದು ಎನ್ನುತ್ತಿದ್ದಾರೆ.
ಐಶ್ವರ್ಯಾ ರೈ ಉದ್ದನೆಯ ಗೌನ್ ರೀತಿಯ ಕಾಸ್ಟ್ಯೂಮ್ ಜೊತೆಗೆ ಅದರ ಮೇಲೆ ಕಪ್ಪು ಬಣ್ಣದ ಕೋಟ್ ತೊಟ್ಟಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ನಟ ಉದ್ದನೆಯ ಕಪ್ಪು ಉಡುಪನ್ನು ಧರಿಸಿದ್ದರೆ, ಪುತ್ರಿ ಆರಾಧ್ಯ ಕೂಡ ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು. ಅಭಿಷೇಕ್ ಬಚ್ಚನ್ ಅವರು ಪುತ್ರಿ ಮತ್ತು ಪತ್ನಿಯ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಐಶ್ವರ್ಯಾ ಪ್ರೆಗ್ನೆಂಟ್ ಆಗಿರುವುದರಿಂದಲೇ, ಬೇಬಿ ಬಂಪ್ ಕಾಣಬಾರದು ಎಂದು ಈ ರೀತಿ ನಡೆದುಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳಲಾಂಭಿಸಿದ್ದಾರೆ. ಹೊಟ್ಟೆ ಕಾಣದಂತೆ ಕಪ್ಪು ಕೋಟ್ ಧರಿಸಿದ್ದು ಕೂಡ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಅವರಾಗಲಿ ಅಥವಾ ಬಚ್ಚನ್ ಫ್ಯಾಮಿಲಿ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.