ಚಲನಚಿತ್ರ ನಿರ್ದೇಶಕ ಶೈಲೇಂದರ್ ವ್ಯಾಸ್ ಅವರು ರಾಜಾ ಪೃಥು ರಾಯ್ ಅವರ ಜೀವನ ಕಥೆಯನ್ನು ಆಧರಿಸಿದ ಸಿನಿಮಾವನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಈ ಮೂಲಕ ಪೃಥು ರಾಯ್ ಮತ್ತು ಟರ್ಕಿಶ್-ಆಫ್ಘಾನ್ ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿ ನಡುವಿನ ಐತಿಹಾಸಿಕ ಯುದ್ಧಕ್ಕೆ ಜೀವ ತುಂಬಲಿದ್ದಾರೆ. ಪೃಥು ರಾಯ್ ಪಾತ್ರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸಬೇಕೆಂದು ಬಯಸುತ್ತಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ.
ಈಟಿವಿ ಭಾರತ್ನ ಮಿನಲ್ ದೋಡಿಯಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ನಿರ್ಮಾಪಕ ಶೈಲೇಂದರ್ ವ್ಯಾಸ್ ಈ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಸಿನಿ ಪಯಣವನ್ನು ಈ ವೇಳೆ ನೆನಪಿಸಿಕೊಂಡರು. ಶೈಲೇಂದರ್ ಅವರು ತಮ್ಮ ಸಿನಿಮಾದ ಗುರಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದರು.
ಪ್ರಶ್ನೆ: ನಿಮ್ಮ ಮುಂಬರುವ ನಿರ್ದೇಶನದ ಚಿತ್ರವು ರಾಜಾ ಪೃಥು ರಾಯ್ ಮತ್ತು ಭಕ್ತಿಯಾರ್ ಖಿಲ್ಜಿ ನಡುವಿನ ಐತಿಹಾಸಿಕ ಯುದ್ಧವನ್ನು ಮರುಪರಿಶೀಲಿಸುತ್ತದೆ. ಮಹಾನ್ ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು ಎಂಬುದು ತಿಳಿದಿದೆ. ಈಟಿವಿ ಭಾರತ್ ಓದುಗರಿಗಾಗಿ ಚಿತ್ರದ ಕಥಾವಸ್ತುವನ್ನು ಹಂಚಿಕೊಳ್ಳಬಹುದೇ?
ರಾಜಾ ಪೃಥು ರಾಯ್ ಅವರ ಕಥೆಯನ್ನು ದೇಶಕ್ಕೆ ಪರಿಚಯಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಹಲವಾರು ಬೌದ್ಧ ಸನ್ಯಾಸಿಗಳ ಹತ್ಯಾಕಾಂಡ, ದೇವಾಲಯಗಳು ಮತ್ತು ನಳಂದದ ದ್ವಂಸಕ್ಕೆ ಕಾರಣವಾದ ಕ್ರೂರ ವಿದೇಶಿ ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿ ವಿರುದ್ಧ ಸಾಧಾರಣ ಸೈನ್ಯ ಹೊಂದಿದ್ದ ಪೃಥು ರಾಯ್ ಹೇಗೆ ಜಯಗಳಿಸಿದ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸಲಿದ್ದೇವೆ.
ಪ್ರಶ್ನೆ: ಐತಿಹಾಸಿಕ ಯುದ್ಧವನ್ನು ಹೊರತುಪಡಿಸಿ ಚಿತ್ರದಲ್ಲಿ ರಾಜಾ ಪೃಥು ರಾಯ್ ಅವರ ಜೀವನದ ಯಾವ ಅಂಶವನ್ನು ಪ್ರಮುಖವಾಗಿ ಪ್ರಸ್ತುತಪಡಿಸಲಿದ್ದೀರಿ?
ಯುದ್ಧದ ಹೊರತಾಗಿ, ನನ್ನ ಚಿತ್ರವು ರಾಜಾ ಪೃಥು ರಾಯ್ ಅವರಿಗೆ ಜನರ ಮೇಲಿದ್ದ ಪ್ರೀತಿ ಮತ್ತು ಸಮೂಹದೊಂದಿಗಿನ ನಂಬಿಕೆಯನ್ನು ಬಿಂಬಿಸುತ್ತದೆ. ಖಿಲ್ಜಿಯ ಆಕ್ರಮಣವನ್ನು ತಡೆಯಲು ವಿವಿಧ ಬುಡಕಟ್ಟು ಜನಾಂಗದ ಜನರಲ್ಲಿದ್ದ ಒಳ ವಿವಾದಗಳನ್ನು ಸರಿಪಡಿಸಿ, ಜಾಣತನದಿಂದ ಅವರನ್ನು ಒಗ್ಗೂಡಿಸಿ ಮನವೊಲಿಸಿದ ಬಗೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ.