ನ್ಯೂಯಾರ್ಕ್‌ನಲ್ಲಿ ಸೋಮವಾರ (ಸ್ಥಳೀಯ ಸಮಯ) ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 2023ರ 'ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿ' ವಿಜೇತರನ್ನು ಘೋಷಿಸಲಾಯಿತು. 14 ವಿಭಾಗಗಳಲ್ಲಿ 20 ದೇಶಗಳ 56 ಪ್ರತಿಭೆಗಳು ನಾಮನಿರ್ದೇಶನಗೊಂಡಿದ್ದರು. ಭಾರತದ ಹಾಸ್ಯನಟ ವೀರ್ ದಾಸ್ ಸೇರಿದಂತೆ ಹಲವರು ಪ್ರಶಸ್ತಿ ಗೆದ್ದು ಬೀಗಿದರು. 51ನೇ ಎಮ್ಮಿ ಪ್ರಶಸ್ತಿಗೆ ಭಾರತದಿಂದ ಜಿಮ್ ಸರ್ಭ್, ವೀರ್ ದಾಸ್ ಮತ್ತು ಶೆಫಾಲಿ ಶಾ ನಾಮಿನೇಟ್ ಆಗಿದ್ದರು.
ಎಮ್ಮಿ ವಿಜೇತರ ಪಟ್ಟಿ:
1. ಅತ್ಯುತ್ತಮ ನಟ: ಮಾರ್ಟಿನ್ ಫ್ರೀಮನ್ (ದಿ ರೆಸ್ಪಾಂಡರ್) - ಯುನೈಟೆಡ್ ಕಿಂಗ್‌ಡಮ್.
2. ಅತ್ಯುತ್ತಮ ನಟಿ: ಕಾರ್ಲಾ ಸೌಜಾ (ಲಾ ಕೈಡಾ) - ಮೆಕ್ಸಿಕೋ.
3. ಹಾಸ್ಯಭಿನಯ: ವೀರ್ ದಾಸ್ (ಲ್ಯಾಂಡಿಂಗ್) ಭಾರತ ಮತ್ತು ಡೆರ್ರಿ ಗರ್ಲ್ಸ್ ಸೀಸನ್ 3 ಪ್ರೋಗ್ರಾಮ್ - ಯುನೈಟೆಡ್ ಕಿಂಗ್‌ಡಮ್.
4. ಸಾಕ್ಷ್ಯಚಿತ್ರ: ಮರಿಯುಪೋಲ್ (ದಿ ಪೀಪಲ್ಸ್ ಸ್ಟೋರಿ) - ಯುನೈಟೆಡ್ ಕಿಂಗ್‌ಡಮ್.
5. ಡ್ರಾಮಾ ಸೀರಿಸ್: ದಿ ಎಮ್ಪ್ರೆಸ್ - ಜರ್ಮನಿ.
6. ನಾನ್-ಸ್ಕ್ರಿಪ್ಟೆಡ್ ಎಂಟರ್ಟೈನ್ಮೆಂಟ್: ಎ ಪಾಂಟೆ (ದಿ ಬ್ರಿಡ್ಜ್ ಬ್ರೆಸಿಲ್) - ಬ್ರೆಜಿಲ್.
7. ಶಾರ್ಟ್ ಫಾರ್ಮ್ ಸೀರಿಸ್: ಡೆಸ್ ಜೆನ್ಸ್ ಬಿಯೆನ್ ಆರ್ಡಿನೇರ್ಸ್ (ಎ ವೆರಿ ಆರ್ಡಿನರಿ ವರ್ಲ್ಡ್) - ಫ್ರಾನ್ಸ್.
8. ಕ್ರೀಡಾ ಸಾಕ್ಷ್ಯಚಿತ್ರ: ಹಾರ್ಲೆ ಮತ್ತು ಕಾಟ್ಯಾ - ಆಸ್ಟ್ರೇಲಿಯಾ.
9. ಟೆಲಿನೋವೆಲಾ: ಯಾರ್ಗಿ (ಫ್ಯಾಮಿಲಿ ಸೀಕ್ರೆಟ್ಸ್) - ಟರ್ಕಿ.
10. ಟಿವಿ ಮೂವಿ/ಮಿನಿ ಸೀರಿಸ್: ಲಾ ಕೈಡಾ - ಮೆಕ್ಸಿಕೋ.
11. ಕಿಡ್ಸ್, ಅನಿಮೇಷನ್: ದಿ ಸ್ಮೆಡ್ಸ್ ಆ್ಯಂಡ್ ದಿ ಸ್ಮೂಸ್ - ಯುನೈಟೆಡ್ ಕಿಂಗ್‌ಡಮ್.
12. ಕಿಡ್ಸ್, ಫ್ಯಾಕ್ಟುವಲ್: ಬಿಲ್ಟ್ ಟು ಸರ್ವೈವ್ - ಆಸ್ಟ್ರೇಲಿಯಾ.
13. ಕಿಡ್ಸ್, ಲೈವ್ ಆ್ಯಕ್ಷನ್: ಹಾರ್ಟ್ ಬ್ರೇಕ್ ಹೈ - ಆಸ್ಟ್ರೇಲಿಯಾ.
14. ಆರ್ಟ್ಸ್ ಪ್ರೋಗ್ರಾಮಿಂಗ್: ಬಫಿ ಸೇಂಟ್ - ಮೇರಿ, ಈಗಲ್ ವಿಷನ್ / ವೈಟ್ ಪೈನ್ ಪಿಕ್ಚರ್ಸ್ - ಕೆನಡಾ.
ಇದನ್ನೂ ಓದಿ:ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹೊಸ ಚಲನಚಿತ್ರ ನಿರ್ಮಾಣ ನೀತಿ: ಸಚಿವ ಅನುರಾಗ್ ಠಾಕೂರ್
ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ 'ವಿರ್ ದಾಸ್: ಲ್ಯಾಂಡಿಂಗ್' ಶೋಗಾಗಿ ಕಾಮಿಡಿಯನ್ ವೀರ್ ದಾಸ್ ಈ ಅವಾರ್ಡ್ ಗೆದ್ದುಕೊಂಡಿದ್ದಾರೆ. ಕಾರ್ಯಕ್ರಮ ಅತಿ ಹೆಚ್ಚು ಜನರ ಗಮನ ಸೆಳೆದು, ಮೆಚ್ಚುಗೆ ಸಂಪಾದಿಸಿದೆ. ಅರ್ಜೆಂಟೀನಾದ ಎಲ್ ಎನ್‌ಕಾರ್ಗಾಡೊ, ಫ್ರಾನ್ಸ್‌ನ ಲೆ ಫ್ಲಾಂಬ್ಯೂ, ಯುಕೆಯ ಡೆರ್ರಿ ಗರ್ಲ್ಸ್ ಸೀಸನ್ 3 ಜೊತೆ 'ವಿರ್ ದಾಸ್: ಲ್ಯಾಂಡಿಂಗ್' ಶೋ ಸ್ಪರ್ಧೆ ನಡೆಸಿದೆ. ಅಂತಿಮವಾಗಿ ಯುಕೆಯ ಡೆರ್ರಿ ಗರ್ಲ್ಸ್ ಸೀಸನ್ 3 ಮತ್ತು 'ವಿರ್ ದಾಸ್: ಲ್ಯಾಂಡಿಂಗ್' ಶೋ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಹಂಚಿಕೊಂಡಿದೆ. ಉಳಿದಂತೆ ಏಕ್ತಾ ಕಪೂರ್ ಅವರು ಇಂಟರ್ನ್ಯಾಶನಲ್ ಎಮ್ಮಿ ಡೈರೆಕ್ಟರೇಟ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮಾಧುರಿ ದೀಕ್ಷಿತ್ಗೆ 'ವಿಶೇಷ ಮನ್ನಣೆ'