ಕೆಲ ದಿನಗಳ ಹಿಂದೆ ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸೀರಿಸ್ ಚಿತ್ರೀಕರಣ ವೇಳೆ ನಟಿ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡ ಹಿನ್ನೆಲೆ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದು, ಈ ಕುರಿತ ಪೋಸ್ಟ್ ಮಾಡುತ್ತಿರುತ್ತಾರೆ. ಇದು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ.
ಕೆಲ ದಿನಗಳ ಹಿಂದೆ ವೀಲ್ಚೇರ್ನಲ್ಲಿ ಕುಳಿತು ಕೆಲ ಯೋಗ ಸ್ಟ್ರೆಚ್‌ಗಳನ್ನು ಮಾಡಿದ್ದ ವಿಡಿಯೋ ಕ್ಲಿಪ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. "ಸಮಸ್ಯೆಯು ನಿಜವಾಗಿಯೂ ಸಮಸ್ಯೆಯೇ ಅಥವಾ ಸಮಸ್ಯೆಯ ಬಗೆಗಿನ ನಮ್ಮ ಮನೋಭಾವವೇ ನಿಜವಾದ ಸಮಸ್ಯೆಯೇ?" ಎಂದು ಪ್ರಶ್ನಿಸಿದ್ದರು. ಅತ್ಯಂತ ಸರಳ ಮತ್ತು ಸುಲಭ ಯೋಗಾಭ್ಯಾಸ ಮಾಡಿ ಕಠಿಣ ಸಮಯದಲ್ಲೂ ಮಾದರಿಯಾಗಿದ್ದರು.
ಇದೀಗ ಮತ್ತೊಮ್ಮೆ ವ್ಯಾಯಾಮದ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋದಲ್ಲಿ ಅವರು ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ವಿಶ್ರಾಂತಿ ಸಮಯದಲ್ಲಿ ಇದ್ದರೂ, ನಟಿ ವ್ಯಾಯಾಮಗಳಿಂದ ತಪ್ಪಿಸಿಕೊಳ್ಳುತ್ತಿಲ್ಲ.